Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪತ್ರ ಕೇಳಿದ್ರು: ನಟಿ ನಮಿತಾ
ಮನರಂಜನೆ

ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪತ್ರ ಕೇಳಿದ್ರು: ನಟಿ ನಮಿತಾ

Share
1 Min Read
SHARE

newsics.com

ಮಧುರೈನ ಮೀನಾಕ್ಷಿ ದೇವಾಲಯದಲ್ಲಿ ತಮಗೆ ಎದುರಾದ ಅವಮಾನದ ಬಗ್ಗೆ ನಟಿ ನಮಿತಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತಿ ವೀರೇಂದ್ರ ಚೌಧರಿ ಜೊತೆ ದೇವಸ್ಥಾನಕ್ಕೆ ತೆರಳಿದ್ದ ನಮಿತಾ ಅವರನ್ನು ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣಪತ್ರ ಕೇಳಲಾಗಿದೆ. ‘ನೀವು ಹಿಂದೂ ಎಂಬುದುನ್ನು ಸಾಬೀತು ಮಾಡಿ. ಜಾತಿ ಪ್ರಮಾಣಪತ್ರ ನೀಡಿ’ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದ್ದಾರೆ ಅಂತ ನಮಿತಾ ಮತ್ತು ವೀರೇಂದ್ರ ಹೇಳಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

ನಮಿತಾ ಮತ್ತು ಅವರ ಪತಿ ವೀರೇಂದ್ರ ಚೌಧರಿ ಅವರು ಮಾಸ್ಕ್ ಧರಿಸಿ ದೇವಸ್ಥಾನಕ್ಕೆ ಹೋಗಿದ್ದರು. ತಾವು ದೇವಸ್ಥಾನಕ್ಕೆ ತೆರಳುವುದರ ಬಗ್ಗೆ ಒಂದು ದಿನ ಮುಂಚೆಯೇ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು. ಜನರು ತಮ್ಮನ್ನು ಗುರುತಿಸಿದರೆ ಜನಜಂಗುಳಿ ಆಗಬಹುದು ಎಂಬ ಕಾರಣದಿಂದ ಅವರು ಮಾಸ್ಕ್ ಧರಿಸಿದ್ದರು. ದಂಪತಿಯನ್ನು 20 ನಿಮಿಷಗಳ ಕಾಲ ಕಾಯಿಸಿ, ಜಾತಿ ಪ್ರಮಾಣಪತ್ರವನ್ನು ಹೇಳಿದ ಬಳಿಕವೇ ದೇವಸ್ಥಾನದ ಒಳಗೆ ಬಿಡಲಾಗಿದೆ. ‘ಈ ರೀತಿ ಬೇರೆ ಎಲ್ಲಿಯೂ ಆಗಿಲ್ಲ’ ಎಂದು ನಮಿತಾ ಹೇಳಿದ್ದಾರೆ.

‘ನಾವು ಹಿಂದೂಗಳು ಎಂಬುದನ್ನು ಸಾಬೀತು ಮಾಡಲು ಪ್ರಮಾಣಪತ್ರ ಕೇಳಿದರು. ಜಾತಿ ಪ್ರಮಾಣಪತ್ರವನ್ನೂ ತೋರಿಸಿ ಎಂದರು. ದೇಶದ ಬೇರೆ ಯಾವುದೇ ದೇವಸ್ಥಾನದಲ್ಲೂ ಇಂಥ ಅನುಮನ ನಮಗೆ ಆಗಿಲ್ಲ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದವಳು. ನಮ್ಮ ಮದುವೆ ನಡೆದಿದ್ದು ತಿರುಪತಿಯಲ್ಲಿ. ನನ್ನ ಮಕ್ಕಳಿಗೆ ಕೃಷ್ಣನ ಹೆಸರು ಇಟ್ಟಿದ್ದೇವೆ. ಇದನ್ನೆಲ್ಲ ತಿಳಿಸಿದ ನಂತರವೂ ನಮ್ಮ ಜೊತೆ ದೇವಸ್ಥಾನದ ಸಿಬ್ಬಂದಿ ವರಟಾಗಿ ನಡೆದುಕೊಂಡು. ಜಾತಿ ಪ್ರಮಾಣಪತ್ರ ಕೇಳಿದರು’ ಎಂದು ಮಾಧ್ಯಮಗಳ ಎದುರು ನಮಿತಾ ಆ ಘಟನೆಯನ್ನು ವಿವರಿಸಿದ್ದಾರೆ.

TAGGED:Stopped at temple door and asked for caste certificate: Actress Namitha
Share This Article
Facebook Twitter Copy Link Print
Previous Article ಶುಭೋದಯ… ಇಂದಿನ ಪಂಚಾಂಗ, 27-08-2024 ಮಂಗಳವಾರ, ರೋಹಿಣಿ ನಕ್ಷತ್ರ
Next Article ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಪೂಜೆಗೆ ಫಲ; ಪುರೋಹಿತನ ಅಸಭ್ಯ ವರ್ತನೆಗೆ ಧರ್ಮದೇಟು

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?