newsics.com
ಮೈಸೂರು: ಸಾಲ ಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸುಂಡವಾಳು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕೃಷ್ಣಾಚಾರಿ (28) ಮೃತಪಟ್ಟ ವ್ಯಕ್ತಿ. ಕೃಷ್ಣಾಚಾರಿ ಖಾಸಗಿ ಸಂಸ್ಥೆ ಹಾಗೂ ಕೈ ಸಾಲ ಮಾಡಿಕೊಂಡಿದ್ದ. ಸಾಲಗಾರರ ಒತ್ತಡದಿಂದ, ಸಾಲ ತೀರಿಸಲಾಗದೆ ಮನನೊಂದು ಎಗ್ಗೆರೆ ಕೆರೆ ಮುಂದೆ ನಿಂತು ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಹಾರಿ ಮೃತಪಟ್ಟಿದ್ದಾನೆ.
ಕೆರೆ ಬಳಿ ಕೃಷ್ಣಾಚಾರಿಯ ಮೊಬೈಲ್ ಹಾಗೂ ಚಪ್ಪಲಿ ದೊರೆತಿದೆ. ತಾನು ಸಾಯುತ್ತಿರುವುದಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ನೇಹಿತರೊಬ್ಬರಿಗೂ ಮೊಬೈಲ್ ನಲ್ಲಿ ತಿಳಿಸಿದ್ದಾರೆಂದು ಹೇಳಲಾಗಿದೆ. ಒಟ್ಟು 20 ಲಕ್ಷ ರೂ. ಸಾಲ ಇತ್ತೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೇನ್ ಆ.30ರಂದು ಬಿಜೆಪಿಗೆ ಅಧಿಕೃತ ಸೇರ್ಪಡೆ
ಚೆಕ್ ಬೌನ್ಸ್ ಪ್ರಕರಣ: ಸ್ಯಾಂಡಲ್‌ವುಡ್ ನಟಿ ಪದ್ಮಜಾ ರಾವ್‌ಗೆ ಸಂಕಷ್ಟ