newsics.com
ತನ್ನ ಭಿನ್ನ ಫ್ಯಾಷನ್ ಉಡುಗೆಗಳಿಂದಲೇ ವೈರಲ್ ಆಗುತ್ತಿರುವ ಬಾಲಿವುಡ್ ನಟಿ ಕಮ್ ಬಿಗ್‌ಬಾಸ್ ಮಾಜಿ ತಾರೆ ಉರ್ಫಿ ಜಾವೇದ್ ಇತ್ತೀಚೆಗೆ ಧರಿಸಿದ ಹಸಿರು ಸೀರೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಹೌದು. ಉರ್ಫಿ ಫ್ಯಾಷನ್ ಸೆನ್ಸ್ ಊಹೆಗೂ ನಿಲುಕದ್ದು. ಪ್ರತಿ ಬಾರಿ ಒಂದೊಂದು ಅವತಾರದಲ್ಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲೂ ಉರ್ಫಿ ಜಾವೇದ್ ಫ್ಯಾಷನ್ ಸೆನ್ಸ್‌ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಏಕೆಂದ್ರೆ ಪ್ರತಿ ಬಾರಿಯೂ ಉರ್ಫಿ ಬೋಲ್ಡ್ ಹಾಗೂ ಮಾದಕ ಲುಕ್‌ನಲ್ಲಿ ಕಾಣಿಸಿಕೊಂಡು ಕಣ್ಣು ಕುಕ್ಕಿದ್ದಾರೆ.
ಅದೇ ರೀತಿ ಈ ಬಾರಿ ಉರ್ಫಿ ಮೈತುಂಬಾ ಸೀರೆಯುಟ್ಟ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಅದರಲ್ಲೂ ಕೊಂಕು ಕಂಡ ನೆಟ್ಟಿಗರು ಒಳಉಡುಪು ಎಲ್ಲಿ ಹೋಯ್ತಮ್ಮಾ? ಇನ್ನೂ ಈ ಕಣ್ಣಲ್ಲಿ ಅದೇನು ನೋಡ್ಬೇಕೋ ಅಂತಾ ಕೆಣಕಿದ್ದಾರೆ.