newsics.com
ಬೆಂಗಳೂರು: ಕೊಲೆ ಕೇಸಲ್ಲಿ ಜೈಲು ಸೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಟಿ ರಚಿತಾ ರಾಮ್ ಅವರು ಭೇಟಿಯಾಗಿದ್ದರು.
ಪರಪ್ಪನ ಅಗ್ರಹಾರ ಜೈಲಲ್ಲಿ ಭೇಟಿ ಆದಾಗ ರಚಿತಾ ರಾಮ್ಗೆ ನಟ ದರ್ಶನ್ ಅವರು, ನನಗೆ ಕಾನೂನು ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಬರ್ತೀನಿ ಎಂದಿದ್ದಾರಂತೆ. ಈ ಬಗ್ಗೆ ರಚಿತಾ ರಾಮ್ ಅವರೇ ಸ್ಪಷ್ಟನೆ ನೀಡಿದ್ದಾರೆ
ದರ್ಶನ್ ಅವರು ನನಗೆ ಸಮಾಧಾನ ಮಾಡಿದ್ರು. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆದಷ್ಟ ಬೇಗ ಜೈಲಿನಿಂದ ಹೊರಗೆ ಬರ್ತೀನಿ ಎಂದರು. ಇದಕ್ಕೆ ನಾನು ವೈಟ್ ಮಾಡ್ತಾ ಇದೀವಿ ಬನ್ನಿ ಎಂದೆ. ಅವರನ್ನು ನೋಡಿದ ಮೇಲೆ ನಿರಾಳ ಆಯ್ತು ಎಂದರು.
ನಾನು ಅವರನ್ನು ನೋಡಿದ ಕೂಡಲೇ ಭಾವುಕ ಆದೆ. ಅವರೇ ನನಗೆ ಧೈರ್ಯ ತುಂಬಿದ್ರು ಎಂದರು.