newsics.com
ನವದೆಹಲಿ: 5 ವರ್ಷದ ಪುಟ್ಟ ಪೋರನೊಬ್ಬ ನದಿ ನೀರಿನಲ್ಲಿ ಆಟವಾಡಲು ಬಿಡದ ತಂದೆಯ ವಿರುದ್ಧ ಕಂಪ್ಲೇಂಟ್ ಕೊಡಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಮಧ್ಯಪ್ರದೇಶದ ಧಾರ್‌ನಲ್ಲಿ ಈ ಘಟನೆ ನಡೆದಿದ್ದು, ತಂದೆಯ ವಿರುದ್ಧ ದೂರು ನೀಡಲು ಪುಟ್ಟ ಪೋರನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ನನ್ನ ತಂದೆ ಬೀದಿಯಲ್ಲಿ ಸುತ್ತಾಡಲು ಬಿಡುವುದಿಲ್ಲ, ನದಿ ನೀರಿನಲ್ಲಿ ಆಟವಾಡಲು ಬಿಡುವುದಿಲ್ಲವೆಂದು ಕೋಪಗೊಂಡ ಬಾಲಕ ಹಸನೈನ್ ತನ್ನ ತಂದೆ ಇಕ್ಬಾಲ್ ನನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗೆ ದೂರನ್ನು ನೀಡಿದ್ದಾನೆ.
ಈ ಕುರಿತ ಪೋಸ್ಟ್ ಒಂದನ್ನು TeluguScribe ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನದಿ ನೀರಿನಲ್ಲಿ ಆಟವಾಡಲು ಬಿಡುವುದಿಲ್ಲವೆಂದು ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದ 5 ವರ್ಷ ವಯಸ್ಸಿನ ಬಾಲಕ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಬಾಲಕ ಪೊಲೀಸ್ ಅಧಿಕಾರಿಯ ಜೊತೆ ತನ್ನ ತಂದೆಯ ವಿರುದ್ಧ ದೂರು ನೀಡುತ್ತಿರುವ ದೃಶ್ಯವನ್ನು ಕಾಣಬಹುದು