newsics.com
ಶಿವಮೊಗ್ಗ: ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಮೃತಪಟ್ಟಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಘಟನೆ ನಡೆದಿದೆ.
ರಂಜಿತಾ (22) ಮೃತಪಟ್ಟ ಯುವತಿ. ಗದ್ದೆಯಲ್ಲಿ ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವು, ಬಾಣಂತಿಗೆ ಕಚ್ಚಿದೆ. ಆದರೆ, ಈ ಬಗ್ಗೆ ಯುವತಿ ಗಮನಕ್ಕೆ ಬಂದಿಲ್ಲ. ಕೆಲಹೊತ್ತಿನ ಬಳಿಕ ಕುಟುಂಬಸ್ಥರು ನೋಡಿದಾಗ ಗದ್ದೆಯಲ್ಲಿ ರಂಜಿತಾ ಕುಸಿದು ಬಿದ್ದಿದ್ದಳು.
ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತಾ ಮೃತಪಟ್ಟಿದ್ದಾಳೆ