newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
07-08-2024, ಬುಧವಾರ
ದಿನ ವಿಶೇಷ:
* ಗುರುದೇವ ರವೀಂದ್ರನಾಥ್ ಟಾಗೋರ್ ಜನ್ಮದಿನ
* ರಾಷ್ಟ್ರೀಯ ಕೈಮಗ್ಗ ದಿನ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ – ದಕ್ಷಿಣಾಯಣ
ದಿನಾಂಕ – 07/08/2024
ತಿಂಗಳು – ಆಗಸ್ಟ್
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ತೃತೀಯ22:05:14
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವ ಫಾಲ್ಗುಣಿ 20:29:22
ಯೋಗ – ಪರಿಘ 11:40:01
ಕರಣ – ತೈತುಲ 08:55:48
ಕರಣ – ಗರಜ 22:05:14
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ – ಸಿಂಹ till 27:13:59*
ಚಂದ್ರ ರಾಶಿ – ಕನ್ಯಾ from 27:13:59*
ಸೂರ್ಯ ರಾಶಿ – ಕರ್ಕಾಟಕ
ಋತು – ವರ್ಷ
ಸೂರ್ಯೋದಯ 06:07:28
ಸೂರ್ಯಾಸ್ತ 18:43:04
ಹಗಲಿನ ಅವಧಿ 12:35:35
ರಾತ್ರಿಯ ಅವಧಿ 11:24:33
ಚಂದ್ರೋದಯ 08:14:58
ಚಂದ್ರಾಸ್ತ 20:46:55
ರಾಹು ಕಾಲ 12:25 – 13:59 ಅಶುಭ
ಯಮಗಂಡ ಕಾಲ 07:42 – 09:16 ಅಶುಭ
ಗುಳಿಕ ಕಾಲ 10:51 – 12:25
ಅಭಿಜಿತ್ 12:00 – 12:50 ಅಶುಭ
ದುರ್ಮುಹೂರ್ತ 12:00 – 12:50 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಹೆಚ್ಚಿನ ಜನರು ಅಸಂತುಷ್ಟರಾಗಿ ಇರುವುದಕ್ಕೆ ಮುಖ್ಯ ಕಾರಣ ಪ್ರೀತಿಯ ಕೊರತೆ. ಪ್ರೀತಿ ತುಂಬಿದ ಹೃದಯ ಯಾವತ್ತೂ ನೆಮ್ಮದಿಯಿಂದ ಇರುತ್ತದೆ.
– ಜಿಡ್ಡು ಕೃಷ್ಣಮೂರ್ತಿ
***
ಇಂದಿನ ಇತಿಹಾಸ
ಆಗಸ್ಟ್ 07
ರಾಷ್ಟ್ರೀಯ ಕೈಮಗ್ಗ ದಿನ
* ಬ್ರಿಟಿಷ್ ಸರ್ಕಾರದ ಬಂಗಾಳ ವಿಭಜನೆಯನ್ನು ವಿರೋಧಿಸಿ 1905 ರಲ್ಲಿ ಕಲ್ಕತ್ತಾ ಟೌನ್ ಹಾಲ್‌ನಲ್ಲಿ ಈ ದಿನ ಪ್ರಾರಂಭವಾದ ಸ್ವದೇಶಿ ಚಳವಳಿಯ ನೆನಪಿಗಾಗಿ ಆಗಸ್ಟ್ 07ನ್ನು ‘ರಾಷ್ಟ್ರೀಯ ಕೈಮಗ್ಗ’ ದಿನವಾಗಿ ಆಯ್ಕೆ ಮಾಡಲಾಯಿತು. ಈ ಆಂದೋಲನವು ದೇಶೀಯ ಉತ್ಪನ್ನಗಳು ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ಕೈಮಗ್ಗ ದಿನವು ದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕೈಮಗ್ಗದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 07, 2015 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವದಲ್ಲಿ ಉದ್ಘಾಟಿಸಿದರು.
ಪ್ರಮುಖ ಘಟನೆಗಳು
* ಆಗಸ್ಟ್ 07, 1944 ರಂದು ಹಾರ್ವರ್ಡ್ ಮಾರ್ಕ್ I ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಶ್ವದ ಮೊದಲ ಪ್ರೋ ಗ್ರಾಂ ನಿಯಂತ್ರಿತ ಕ್ಯಾಲ್ಕುಲೇಟರ್ ಉದ್ಘಾಟನೆಯಾಯಿತು. ಯಂತ್ರವನ್ನು ಹಾರ್ವರ್ಡ್ ಸಂಶೋಧಕ ಹೊವಾರ್ಡ್ ಐಕೆನ್ ಅವರು ನಿರ್ಮಿಸಿದರು ಮತ್ತು ಐಬಿಎಂ ಬೆಂಬಲಿಸಿದರು.
* ಎಂ. ರಾಘವೇಂದ್ರರಾವ್ – ಅವರು ನಾಡು ಕಂಡ ಪ್ರಖ್ಯಾತ ಗಮಕಿಗಳಲ್ಲಿ ಒಬ್ಬರು. ಗಮಕ ಕಲೆಯನ್ನು ಬೆಳೆಸಿ ನಾಡಿನಾದ್ಯಂತ ಪ್ರಚಾರಪಡಿಸಿದ ರಾಘವೇಂದ್ರರಾಯರು ಆಗಸ್ಟ್ 07, 1914 ರಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಜನಿಸಿದರು. ರಾಘವೇಂದ್ರ ರಾವ್ ಅವರು ಗಮಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗಮನಿಸಿ, ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದವು. ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (1974), ಗಮಕ ಕಲಾ ಪರಿಷತ್ತಿನ ತೃತೀಯ ಸಮ್ಮೇಳನದ ಅಧ್ಯಕ್ಷರಾಗಿ ಗಮಕ ರತ್ನಾಕರ ಬಿರುದು (1992), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994) ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ (1996) ಪ್ರಮುಖವಾಗಿವೆ.
* “ಕಲೈಗ್ನಾರ್” ಕರುಣಾನಿಧಿ – ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಆಗಸ್ಟ್ 07, 2018 ರಂದು ನಿಧನರಾದರು.