newsics. com
ಬೆಂಗಳೂರು: ಸ್ಟಾರ್ ನಟಿ ಕೀರ್ತಿ ಸುರೇಶ್ ಇದೀಗ ಬ್ಯಾಕ್ ಲೆಸ್ ಬ್ಲೌಸ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಕೀರ್ತಿ ಸುರೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಾವು ಸೀರೆಯುಟ್ಟಿರುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದು, ಬ್ಯಾಕ್ ಲೆಸ್ ಬ್ಲೌಸ್ ಧರಿಸಿ, ಕೆಂಪು ಗುಲಾಬಿ ಹೂವು ಧರಿಸಿ, ಪ್ಲೋರಲ್ ಡಿಸೈನ್ ಸೀರೆಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಕೀರ್ತಿ ಸುರೇಶ್ ತಾವು ನಟಿಸಿರುವ ರಘುತಾತ ಸಿನಿಮಾದ ಪ್ರೊಮೋಷ್ನ್ ಫೋಟೋಗಳನ್ನು ಶೇರ್ ಮಾಡಿದ್ದು ಹಾಟ್ ಆಂಡ್ ಸ್ವೀಟ್ ಎಂದು ಬರೆದುಕೊಂಡಿದ್ದಾರೆ. ನಟಿಯ ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ವಾರೆ ವಾ ಎಂದು ಹೇಳುತ್ತಿದ್ದಾರೆ.
ಮಹಾನಟಿ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ನಟಿ ಕೀರ್ತಿ ಸುರೇಶ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಕಡಿಮೆ ಸಮಯದಲ್ಲಿ ಸ್ಟಾರ್ ಹಿರೋಯಿನ್ ಆಗಿ ಮೆರೆದ ಕೀರ್ತಿ ಟಾಪ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ