newsics.com
ಶಿರಸಿ: ಅಂಕೋಲ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ ನಿನ್ನೆಗೆ ಹತ್ತು ದಿನವಾಗಿದೆ. ನಿವೃತ್ತ ಸೇನಾಧಿಕಾರಿ ಇಂದ್ರಬಾಲನ ತಂಡದಿಂದ ನಡೆಸಿದ ಕಾರ್ಯಾಚರಣೆ ವೇಳೆ ನದಿಯಲ್ಲಿ ಮೂರು ಕಬ್ಬಿಣದ ವಸ್ತುಗಳು ಪತ್ತೆಯಾಗಿವೆ. ಅದರಲ್ಲಿ ಒಂದು ಲಾರಿ ಇರುವುದು ಗೊತ್ತಾಗಿದೆ.
ಡ್ರೋನ್ ಹಾಗೂ ಥರ್ಮಲ್ ಸ್ಕ್ಯಾನ್ ಕಾರ್ಯಾಚರಣೆ ನಡೆಸಿದ ಖಾಸಗಿ ಕಂಪನಿಯ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಹೇಳುವಂತೆ ನದಿಯಲ್ಲಿ ರೆಲಿಂಗ್, ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಸಿಗಬೇಕಿತ್ತು. ಮೂರು ಸ್ಪಾಟ್‌ಗಳು ಸಿಕ್ಕಿದ್ದು, ಅದರ ಪೈಕಿ ಅರ್ಜುನ್ ಲಾರಿ ಯಾವುದು ಎಂದು ಸಿಗಬೇಕಿದೆ. 60 ಮೀ. ಉದ್ದ ಹಾಗೂ 20 ಮೀ. ಆಳದಲ್ಲಿ ಒಂದು ಮೆಟಲ್ ಡಿಟೆಕ್ಟ್ ಆಗಿದ್ದು, 400 ಲಾಗ್ಸ್ ಟ್ರಕ್‌ನಲ್ಲಿದ್ದದ್ದರಿಂದ ಹೆಚ್ಚು ಆಳದಲ್ಲಿ ಇರುವ ಸಾಧ್ಯತೆಗಳಿತ್ತು. 500 ಮೀ. ದೂರದಲ್ಲಿ ಮರದ ದಿಮ್ಮಿಗಳು ಸಿಕ್ಕಿದ್ದು, ಲಾರಿಯಿಂದ ಕೆಲವು ದಿಮ್ಮಿಗಳು ದೂರಾಗಿವೆ ಎಂದಿದ್ದಾರೆ.
ಲಾರಿಯಲ್ಲಿ ಅರ್ಜುನ ಪತ್ತೆ ಮಾಡುವುದು ಕಷ್ಟ ಆಗಿದೆ. ಏಕೆಂದರೆ ಗಂಗಾವಳಿ ನದಿಯ ನೀರಿನ ರಭಸ 8 ನಾಟ್ಸ್ ಇದೆ. ಗರಿಷ್ಠ 3 ನಾಟ್ಸ್ ನೀರಿನ ವೇಗ ಇದ್ದಾಗ ಧೈರ್ಯ ಮಾಡಬಹುದು.ಮುಳುಗು ತಜ್ಞರನ್ನು ಕಳಿಹಿಸಿದರೂ ಅವರು ಕೂಡ ಬದಕುಳಿಯುವುದು ಕಷ್ಟ ಎಂಬುದುವುದು ತಜ್ಞರ ಮಾತಾಗಿದೆ.