newsics.com
ಮುಂಬೈ : ವಿಕ್ಕಿ ಕೌಶಲ್ ನಟನೆಯ ‘ಬ್ಯಾಡ್ ನ್ಯೂಸ್’ ಸಿನಿಮಾದ ಬೋಲ್ಡ್ ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯವರು ತಕರಾರು ತೆಗೆದಿದ್ದಾರೆ.
27 ಸೆಕೆಂಡ್ಗಳ ವಿಕ್ಕಿ ಹಾಗೂ ತೃಪ್ತಿ ಅವರ ಬೋಲ್ಡ್ ದೃಶ್ಯದಲ್ಲಿ ಬದಲಾವಣೆ ಮಾಡುವಂತೆ ಸೂಚಿಸಿದೆ. ಹಸಿಬಿಸಿ ದೃಶ್ಯವನ್ನು ಬದಲಾಯಿಸಲು ತಂಡದವರು ಒಪ್ಪಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾಗೆ U/A ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗಿದೆ.
ಬ್ಯಾಡ್ ನ್ಯೂಸ್ ಸಿನಿಮಾ ಅವಧಿ 142 ನಿಮಿಷ ಇದೆ. ಅಂದರೆ ಎರಡು ಗಂಟೆ 22 ನಿಮಿಷ ಸಿನಿಮಾ ಇರಲಿದೆ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಆ್ಯಮಿ ವಿರ್ಕ್ ಮತ್ತು ನೇಹಾ ಧೂಪಿಯಾ ಈ ಸಿನಿಮಾದಲ್ಲಿ ಇದ್ದಾರೆ. ಈ ಚಿತ್ರದಲ್ಲಿ ಮೂಡಿ ಬಂದ ವಿಕ್ಕಿ ಹಾಗೂ ತೃಪ್ತಿ ಹಾಡುಗಳು ಸಖತ್ ಬೋಲ್ಡ್ ಆಗಿದ್ದವು.
ಆನಂದ್ ತಿವಾರಿ ಅವರು ‘ಬ್ಯಾಡ್ ನ್ಯೂಸ್’ ಚಿತ್ರ ನಿರ್ದೇಶಿಸಿದ್ದಾರೆ. ಕರಣ್ ಜೋಹರ್ ಅವರು ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶುಕ್ರವಾರ (ಜುಲೈ 19) ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆ ಕಾಣಲಿದೆ
https://www.newsics.com/2024/07/18/holidays-for-schools-colleges-in-uttara-kannada-shivamogga-udupi-kodagu-and-hassan/