newsics.com
ಬೆಂಗಳೂರು : ನಟ ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ, ಪತ್ನಿ ವಿಜಯಲಕ್ಷ್ಮಿ ಅವರು ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ.
ದರ್ಶನ್ ಅವ್ರಿಗೆ ಜಾಮೀನು ಕೊಡಿಸುವ ಬಗ್ಗೆ ಕುಟುಂಬದವರು ಮಾತುಕತೆ ನಡೆಸುತ್ತಿದ್ದಾರೆ.ನಟ ದರ್ಶನ್ ಅವರ ಪರವಾಗಿ ಕುಟುಂಬದವರು ಕಾನೂನಿನ ಹೋರಾಟ ನಡೆಸುತ್ತಿದ್ದಾರೆ.
ರೇಣುಕಾ ಸ್ವಾಮಿ ಮರ್ಡರ್ ಕೇಸ್ನಲ್ಲಿ ಪ್ರಮುಖ ಆರೋಪಿ ಆಗಿರುವ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಆರಂಭದಲ್ಲಿ ಅವರು ಅರೆಸ್ಟ್ ಆದಾಗ ಕುಟುಂಬದವರು ಕೂಡಲೇ ಬಂದಿರಲಿಲ್ಲ. ನಂತರ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ತೂಗುದೀಪ, ತಾಯಿ ಮೀನಾ ಮುಂತಾದವರು ಬಂದು ದರ್ಶನ್ಗೆ ಧೈರ್ಯ ತುಂಬಿದರು.
ಎ2 ಆಗಿರುವ ಪವಿತ್ರಾ ಗೌಡ ಅವರ ತಾಯಿ ಹಾಗೂ ಸಹೋದರ ಕೂಡ ಇಂದು ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ.