newsics.com
ಮುಂಬೈ :ಡ್ರೆಸ್‌ಗಳಿಂದಲೇ ಸುದ್ದಿಯಾಗುವ ಉರ್ಫಿ ಜಾವೇದ್, ಇದೀಗ ನಶೆಯಲ್ಲಿ ನಡೆಯಲಾಗರದ ಸ್ಥಿತಿಯಲ್ಲಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಶನಿವಾರ ರಾತ್ರಿ ಪಾರ್ಟಿ ಮುಗಿಸಿ ಹೊರಗೆ ಬರುವ ಸಂದರ್ಭದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
ಪಿಂಕ್ ಶಾರ್ಟ್ ಡ್ರೆಸ್ ಧರಿಸಿರುವ ಉರ್ಫಿಗೆ ಸರಿಯಾಗಿ ಹೆಜ್ಜೆ ಇರಿಸಲು ಸಾಧ್ಯವಾಗಲ್ಲ. ಪಕ್ಕದಲ್ಲಿದ್ದ ಗೆಳತಿಯರ ಮೇಲೆ ಭಾರ ಹಾಕಿ ಉರ್ಫಿ ಕಾರ್‌ವರೆಗೂ ನಡೆದುಕೊಂಡು ಬರುತ್ತಾರೆ.
ವಿಡಿಯೋ ನೋಡಿದ ನೆಟ್ಟಿಗರು ಉರ್ಫಿ ಜಾವೇದ್ ಫುಲ್ ಟೈಟ್ ಆಗಿದ್ದಾರೆ. ವೀಕೆಂಡ್ ಪಾರ್ಟಿ ಜೋರು ಆದಂತೆ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
https://www.instagram.com/reel/C9HIRmeSUsm/?utm_source=ig_web_copy_link