newsics.com
ಮುಂಬೈ: ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅದ್ದೂರಿ ಸಮಾರಂಭ ಆಯೋಜಿಸಿ ಅಭಿನಂದಿಸಲಾಯಿತು. ಈ ವೇಳೆ ‘ವಂದೇ ಮಾತರಂ’ ಹಾಡನ್ನು ಹಾಡುವ ಮೂಲಕ ಟೀಂ ಇಂಡಿಯಾ ಆಟಗಾರರು ಮತ್ತು ಅಭಿಮಾನಿಗಳು ದೇಶಪ್ರೇಮ ಮೆರೆದರು.
ಕ್ರೀಡಾಂಗಣದಲ್ಲಿ ರೋಹಿತ್ ಪಡೆ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿತು. ಈ ವೇಳೆ ಅಭಿಮಾನಿಗಳು ಸಹ ಕ್ರಿಕೆಟಿಗರ ಜತೆ ಸಂಭ್ರಮಾಚರಿಸಿದರು. ಕ್ರೀಡಾಂಗಣದಲ್ಲಿ ‘ವಂದೇ ಮಾತರಂ’ ಹಾಡು ಕೇಳಿಬಂತು. ಇದಕ್ಕೆ ಆಟಗಾರರು, ಫ್ಯಾನ್ಸ್ ಎಲ್ಲರೂ ಹಾಡನ್ನು ಹಾಡುವ ಮೂಲಕ ದೇಶಪ್ರೇಮ ಮೆರೆದರು. ಈ ಸಂದರ್ಭ ನಿಜಕ್ಕೂ ಮೈನವರೇಳಿಸುವಂತಿತ್ತು. ದೃಶ್ಯದ ವಿಡಿಯೋವನ್ನು ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಮೂವರ ಸಾವು, ಜನಜೀವನ ಅಸ್ತವ್ಯಸ್ತ
ವರುಣಾರ್ಭಟಕ್ಕೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಜನ ತತ್ತರ, ಹಲವು ಗ್ರಾಮ ಜಲಾವೃತ