newsics.com
ಬೆಂಗಳೂರು : ನಿರ್ದೇಶಕ ತರುಣ್ ಸುಧೀರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ. ಅದು ಕೂಡ ರಾಬರ್ಟ್ ಸಿನಿಮಾ ನಟಿ ಸೋನಾಲ್ ಮಂಥೆರೊ ಅವರ ಜೊತೆ ಅಂತಾ ಗುಸು ಗುಸು ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸುದ್ದಿಗೆ ತರುಣ್ ಅವ್ರು ತಾಯಿ ಕ್ಲಾರಿಟಿ ಕೊಟ್ಟಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಮದುವೆ ವಿಚಾರವನ್ನು ತಾಯಿ ಮಾಲತಿ ಸುಧೀರ್ ಅವರು ನ್ಯೂಸ್ ಫಸ್ಟ್ಗೆ ಮಾಹಿತಿ ನೀಡಿದ್ದಾರೆ. ತರುಣ್ ಹಾಗೂ ಸೋನಲ್ ಮದುವೆ ಆಗುತ್ತಿರುವುದು ನಿಜ. ಆದ್ರೆ, ಮದುವೆ ದಿನಾಂಕ ಯಾವಾಗ ಅನ್ನೋದು ಫೈನಲ್ ಆಗಬೇಕಿದೆ ಎಂದು ತಾಯಿ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು ಮೂಲದ ಸೋನಾಲ್ ಮಂಥೆರೊ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ ಆನಂತರ ‘ಅಭಿಸಾರಿಕೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಪಂಚತಂತ್ರ, ಡೆಮೊ ಪೀಸ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾದಲ್ಲಿ ಸೋನಾಲ್ ಮಂಥೆರೊ ಅಭಿನಯಿಸಿದ್ದಾರೆ. ಸದ್ಯ ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುಧೀರ್ ಅವರ ಕೈ ಹಿಡಿಯಲಿದ್ದಾರೆ ಅಂತ ಮಾಲತಿ ಸುಧೀರ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.