Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ದಿನ ಭವಿಷ್ಯ > 01-07-2024: ಮಿಥುನ- ಆಸ್ತಿ ವಿವಾದ ಇತ್ಯರ್ಥ, ಧನುಸ್ಸು- ಉದ್ಯೋಗದಲ್ಲಿ‌ ವಿಶೇಷ ಸ್ಥಾನ, ನಿಮ್ಮ ರಾಶಿ‌ ಭವಿಷ್ಯದಲ್ಲೇನಿದೆ?
ದಿನ ಭವಿಷ್ಯಪಂಚಾಂಗ

01-07-2024: ಮಿಥುನ- ಆಸ್ತಿ ವಿವಾದ ಇತ್ಯರ್ಥ, ಧನುಸ್ಸು- ಉದ್ಯೋಗದಲ್ಲಿ‌ ವಿಶೇಷ ಸ್ಥಾನ, ನಿಮ್ಮ ರಾಶಿ‌ ಭವಿಷ್ಯದಲ್ಲೇನಿದೆ?

Share
5 Min Read
SHARE

newsics.com

ದಿನ‌ ಭವಿಷ್ಯ

1 ಜುಲೈ 2024, ಸೋಮವಾರ

ಮೇಷ
ಎಲ್ಲರನ್ನೂ ಸಂಶಯದಿಂದಲೇ ನೋಡುವಿರಿ. ಅತಿ ಬೇಗ ಸಹನೆ ಕಳೆದುಕೊಂಡು ಉದ್ವೇಗದಿಂದ ವರ್ತಿಸುವಿರಿ. ಹಠದಿಂದಾಗಿ ಕೆಲಸ ಕಾರ್ಯಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸುವಿರಿ. ಕಷ್ಟದಲ್ಲಿದ್ದವರನ್ನು ಕರುಣೆಯಿಂದ ನೋಡುವುದಲ್ಲದೇ ಸಹಾಯ ಮಾಡುವಿರಿ. ನಿಮಗೆ ತಿಳಿದಿರುವ ವಿಚಾರಗಳಲ್ಲಿ ಮಾತ್ರ ವಾದವನ್ನು ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಸೋಲಿರುವುದಿಲ್ಲ. ಸದಾಕಾಲ ಯಾವುದಾದರೂ ಒಂದು ಕೆಲಸದಲ್ಲಿ ನಿರತರಾಗುವಿರಿ. ಮನದಲ್ಲಿಯೇ ಲೆಕ್ಕಾಚಾರವನ್ನು ಹಾಕಿ ನಂತರ ಅದನ್ನು ಕಾರ್ಯರೂಪಕ್ಕೆ ತರುವಿರಿ. ಮನದಲ್ಲಿ ಹೆದರಿಕೆ ಎಂಬುದು ಇರುವುದಿಲ್ಲ. ಆದರೆ ಆತುರದ ಗುಣವಿರುತ್ತದೆ. ನಿಮಗೆ ಇಷ್ಟವಾದ ದುಬಾರಿ ವಸ್ತುವೊಂದನ್ನು ಕೊಳ್ಳುವಿರಿ.

ವೃಷಭ

ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಸ್ಥಿರವಾದ ಮನಸ್ಸಿನ ಕಾರಣ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ದೊಡ್ಡ ದೊಡ್ಡ ಆಸೆ ಮತ್ತು ಯೋಜನೆಗಳಿಗೆ ಬಗ್ಗೆ ಯೋಚಿಸುವಿರಿ. ಬೇಸರಕ್ಕೆ ಒಳಗಾದಾಗ ಆರಂಭಿಸಿದ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸುವಿರಿ. ಶ್ರಮದ ಕೆಲಸ ಕಾರ್ಯಗಳನ್ನು ಇಷ್ಟಪಡುವುದಿಲ್ಲ. ಗೌರವದಿಂದ ಜೀವನವನ್ನು ನಡೆಸುವಿರಿ. ಸಂತಾನ ಲಾಭವಿದೆ. ಬಂಧು-ಬಾಂಧವರಿಗೆ ಹಣವನ್ನು ನೀಡಬೇಕಾಗುತ್ತದೆ. ಹಣದ ಮೇಲಿನ ಆಸೆಯಿಂದ ತೊಂದರೆಗೆ ಒಳಗಾಗುವಿರಿ. ಯುವಕ- ಯುವತಿಯರು ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳು ನಿಮ್ಮ ಮನಸ್ಸನ್ನು ಅರಿತು ನಡೆದುಕೊಳ್ಳುವುದಿಲ್ಲ.

ಮಿಥುನ

ಸಹೋದರರ ಜತೆ ಉತ್ತಮ ಒಡನಾಟ ಇರುವುದಿಲ್ಲ. ಆಸ್ತಿಯ ವಿಚಾರದಲ್ಲಿದ್ದ ವಿವಾದವು ದೂರವಾಗುತ್ತದೆ. ಸ್ವಂತ ಉದ್ದಿಮೆ ಇದ್ದಲ್ಲಿ ಆತಂಕದ ಪರಿಸ್ಥಿತಿ ಎದುರಾಗುತ್ತದೆ. ಕುಟುಂಬದ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವಿರಿ. ಸದಾಕಾಲ ಬಾಳುವ ರೀತಿಯನ್ನು ಬದಲಿಸಿ ಸಂತೋಷ ಕಾಣುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಹಣದ ಉಳಿತಾಯ ಮಾಡುವ ಕಾರಣ ಮನಸ್ಸಿಗೆ ನೆಮ್ಮದಿ ಇರುತ್ತದೆ. ಸಾಲ ನೀಡುವುದು ಅಥವಾ ತೆಗೆದುಕೊಳ್ಳುವುದು ಇಷ್ಟವಾಗುವುದಿಲ್ಲ. ಸಂಗಾತಿ ಮತ್ತು ಮಕ್ಕಳ ಜತೆ ಮನರಂಜನಾ ಸ್ಥಳಕ್ಕೆ ಹೋಗುತ್ತೀರಿ. ಸುಲಭವಾಗಿ ಹಣ ಖರ್ಚು ಮಾಡುವುದಿಲ್ಲ.

ಕಟಕ

ಬೇರೆಯವರ ಹಣ ಅಥವಾ ಆಸ್ತಿಗೆ ಆಸೆಪಡುವುದಿಲ್ಲ. ಎಲ್ಲರ ಮನಸ್ಸನ್ನೂ ಗೆಲ್ಲುವಿರಿ. ಉತ್ತಮ ಸ್ನೇಹಿತರು ನಿಮಗಿರುತ್ತಾರೆ. ತಪ್ಪನ್ನು ಮನ್ನಿಸುವ ನಿಮಗೆ ವಿರೋಧಿಗಳಿರುವುದಿಲ್ಲ. ಬೇರೆಯವರಿಗೆ ಕಷ್ಟವೆನಿಸುವ ವಿಚಾರಗಳನ್ನು ಸುಲಭವಾಗಿ ಅರಿತುಕೊಳ್ಳುವಿರಿ. ಸಭೆ ಸಮಾರಂಭಗಳಲ್ಲಿ ನಿಮ್ಮ ಪಾತ್ರ ಅತಿ ಮುಖ್ಯವಾಗುತ್ತದೆ. ಸಮಾಜದಲ್ಲಿ ಗೌರವ ಗಳಿಸುವಿರಿ. ಬೇಗನೆ ಕೋಪಗೊಳ್ಳುವಿರಿ. ಯಾವುದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಜೀವನದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುವ ಗುರಿ ಇರುತ್ತದೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರಲಿದೆ.

ಸಿಂಹ

ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚುತ್ತದೆ. ಕೆಲಸದ ಒತ್ತಡದ ಕಾರಣ ಅಸಹನೆಯಿಂದ ವರ್ತಿಸುವಿರಿ. ಬೇರೆಯವರ ಅನಿಸಿಕೆಗೆ ಬೆಲೆ ಕೊಡದೆ ಸ್ವಂತ ತೀರ್ಮಾನಕ್ಕೆ ಬದ್ಧರಾಗುವಿರಿ. ನಿಮ್ಮಿಂದ ಯಾರಿಗೂ ತೊಂದರೆ ಅಥವಾ ನಷ್ಟವಾಗುವುದಿಲ್ಲ. ಅಪಾಯದ ಸನ್ನಿವೇಶದಲ್ಲಿ ಧೈರ್ಯ ಸಾಹಸದಿಂದ ಮುನ್ನುಗ್ಗುವಿರಿ. ನಿಮ್ಮ ವಿರೋಧಿಗಳಿಗೂ ಸಹಾಯ ಮಾಡುವಿರಿ. ಗೌರವವನ್ನು ಉಳಿಸಿಕೊಂಡು ಜೀವನದಲ್ಲಿ ಮುಂದುವರಿಯುವಿರಿ. ಸಮಾಜದಲ್ಲಿ ಕೀರ್ತಿ ಗಳಿಸುವಿರಿ. ಮನದಲ್ಲಿ ದೊಡ್ಡ ಆಸೆ ಆಕಾಂಕ್ಷೆಗಳು ಇರುತ್ತವೆ. ಕುಟುಂಬದ ಜತೆ ಯಾತ್ರಾಸ್ಥಳಕ್ಕೆ ತೆರಳುವಿರಿ. ಹೊಗಳಿಕೆಗೆ ಮರುಳಾಗಿ ಹಣದ ಸಹಾಯ ಮಾಡುವಿರಿ.

ಕನ್ಯಾ

ನಿಮ್ಮ ಕಷ್ಟದ ಸಂದರ್ಭ ದಲ್ಲಿ ಆತ್ಮೀಯರು ದೂರವಾಗುತ್ತಾರೆ. ಸಂಬಂಧ ಅಥವಾ ಆತ್ಮೀಯರೊಂದಿಗೆ ವಿವಾಹವಾಗುತ್ತದೆ. ನಿಮ್ಮ ನಿಸ್ವಾರ್ಥ ವ್ಯಕ್ತಿತ್ವಕ್ಕೆ ಎಲ್ಲರೂ ತಲೆಬಾಗುತ್ತಾರೆ. ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಹಣವನ್ನು ಉಳಿಸುವಲ್ಲಿ ಸಫಲರಾಗುವಿರಿ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಯಾರೊಂದಿಗೂ ಮನ ಬಿಚ್ಚಿ ಮಾತನಾಡುವುದಿಲ್ಲ. ಶಾಸ್ತ್ರ ಸಂಪ್ರದಾಯದಲ್ಲಿ ಆಸಕ್ತಿ ಮೂಡುತ್ತದೆ. ಪ್ರತಿ ವಿಚಾರವನ್ನೂ ಮನಸ್ಸಿಟ್ಟು ಅಭ್ಯಾಸ ಮಾಡುವಿರಿ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬಾಳುವಿರಿ. ಬೇರೆಯವರಿಗೆ ಉತ್ತಮ ಸ್ಪೂರ್ತಿಯಾಗುವಿರಿ. ಅತಿಯಾದ ಮಾತಿನಿಂದ ಮನದಲ್ಲಿರುವ ವಿಚಾರಗಳನ್ನೆಲ್ಲ ಬೇರೆಯವರಿಗೆ ತಿಳಿಸುವಿರಿ.

ತುಲಾ

ಮನದಲ್ಲಿರುವ ವಿಚಾರವನ್ನು ಸಂಕೋಚದ ಕಾರಣ ಯಾರಿಗೂ ತಿಳಿಸುವುದಿಲ್ಲ. ವಿಶೇಷ ಬುದ್ಧಿವಂತಿಕೆ ಇರುತ್ತದೆ. ಚಿಂತೆ ಮಾಡುವುದನ್ನು ಬಿಟ್ಟು ಕೆಲಸ ಮಾಡಿದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ನಿಮ್ಮ ರೀತಿ ನೀತಿಗಳು ಇತರರಿಗೆ ಸ್ಪೂರ್ತಿಯಾಗುತ್ತವೆ. ಬೇಡದ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವಿರಿ. ಸಂಘ ಸಂಸ್ಥೆಯ ನೇತೃತ್ವವು ನಿಮಗೆ ದೊರೆಯಲಿದೆ. ಶಿಸ್ತಿನ ಜೀವನ ನಡೆಸುವವರನ್ನು ಗೌರವಿಸುವಿರಿ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿ ತೆಗೆದುಕೊಳ್ಳುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ನಿಮ್ಮಲ್ಲಿರುವ ವಿಚಾರಗಳನ್ನು ಬೇರೆಯವರಿಗೂ ಹಂಚುವಿರಿ. ಅತಿಯಾದ ಆತುರತೆ ಒಳ್ಳೆಯದಲ್ಲ.

ವೃಶ್ಚಿಕ

ಸಣ್ಣಪುಟ್ಟ ವಿವಾದಗಳನ್ನು ದೊಡ್ಡದು ಮಾಡುವಿರಿ. ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ. ತಪ್ಪು ಮಾಡಿದ ನಂತರ ಪಶ್ಚಾತ್ತಾಪಪಡುವಿರಿ. ನಿಮ್ಮ ಮನಸ್ಸಿಗೆ ಮುದ ನೀಡುವ ವಸ್ತುಗಳನ್ನು ಕೊಳ್ಳುವಿರಿ. ವಿದ್ಯಾರ್ಥಿಗಳ ಅಭ್ಯಾಸವು ಉನ್ನತ ಮಟ್ಟದಲ್ಲಿರುತ್ತದೆ. ಯಾವುದೇ ವಿಚಾರವಾದರೂ ಅದರ ಮೂಲವನ್ನು ತಿಳಿದು ನಂತರ ಮುಂದುವರಿಯುವಿರಿ. ಬುದ್ಧಿವಂತಿಕೆಯ ಮಾತುಗಳಿಂದ ವಿರೋಧಿಗಳ ಮನಸ್ಸನ್ನು ಗೆಲ್ಲುವಿರಿ. ಹಾಸ್ಯಪ್ರಿಯರು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಕೌಶಲ್ಯ ಇರುತ್ತದೆ. ಆರ್ಥಿಕ ಪರಿಸ್ಥಿತಿಯು ಕ್ರಮೇಣವಾಗಿ ಉತ್ತಮಗೊಳ್ಳುತ್ತದೆ. ಕೂಡಿಟ್ಟ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ.

ಧನುಸ್ಸು

ಉದ್ಯೋಗದ ಸಲುವಾಗಿ ಪ್ರವಾಸ ಮಾಡಬೇಕಾಗುತ್ತದೆ. ಕುಟುಂಬದ ಸದಸ್ಯರ ಹೊರತು ಬೇರೊಬ್ಬರ ಜೆಏಎಏತೆ ಬೆರೆಯುವುದಿಲ್ಲ. ಸಭೆ ಸಮಾರಂಭಗಳಲ್ಲಿಯೂ ಏಕಾಂಗಿಯಾಗಿ ಇರುವಿರಿ. ಎಲ್ಲರೂ ನಿಮ್ಮನ್ನು ವಿಶ್ವಾಸದಿಂದ ಕಾಣಬೇಕು, ಗೌರವಿಸಬೇಕು ಎಂಬ ಭಾವನೆ ಇರುತ್ತದೆ. ಬೇರೆಯವರ ಗಮನ ಸೆಳೆಯುವ ಕೆಲಸ ಮಾಡುವಿರಿ. ದೈಹಿಕ ಸದೃಢತೆ ಇರುವುದಿಲ್ಲ. ಪ್ರಾಮಾಣಿಕರಾಗಿ ನಡೆದುಕೊಳ್ಳುವ ಕಾರಣ ಎಲ್ಲರ ಪ್ರೀತಿ ಗಳಿಸುವಿರಿ. ನಿಮ್ಮಲ್ಲಿನ ಸಮರ್ಪಣಾ ಮನೋಭಾವನೆಯಿಂದ ಉದ್ಯೋಗದಲ್ಲಿ ವಿಶೇಷ ಸ್ಥಾನ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಅವಶ್ಯಕತೆ ಇದ್ದಲ್ಲಿ ಮಾತ್ರ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದಲ್ಲಿ ಏರಳಿತ ಕಂಡುಬರುತ್ತದೆ. ಆದರೆ ಯಾವುದೇ ತೊಂದರೆ ಇರುವುದಿಲ್ಲ.

ಮಕರ
ವಿಶೇಷವಾದ ಆಕರ್ಷಣ ಶಕ್ತಿ ಇರುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ಮನಸ್ಸಿಟ್ಟು ಮಾಡುವಿರಿ. ಎಲ್ಲರ ಜತೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಆದರೆ ಯಾರಿಂದಲೂ ಯಾವುದೇ ನಿರೀಕ್ಷೆ ಇರುವುದಿಲ್ಲ. ತಪ್ಪಾದ ತೀರ್ಮಾನ ತೆಗೆದುಕೊಳ್ಳುವವರಿಂದ ದೂರವಿರಿ. ಶಾಂತಿ ಸಹನೆಯಿಂದ ಬಾಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಮಾತ್ರ ಕೋಪಗೊಳ್ಳುವಿರಿ. ಮೃದುವಾದ ಸ್ವಭಾವ ಇರುತ್ತದೆ. ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸುವಿರಿ. ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಮಕ್ಕಳನ್ನು ಅತಿಯಾಗಿ ಪ್ರೀತಿಸುವಿರಿ. ನಿಮ್ಮ ಕಷ್ಟ ನಷ್ಟದ ನಡುವೆಯೂ ಮಕ್ಕಳ ಬೇಡಿಕೆಗಳನ್ನು ಪೂರೈಸುವಿರಿ.

ಕುಂಭ

ಸ್ಥಿರವಾದ ಮನಸ್ಸಿರುವುದಿಲ್ಲ. ಗೊಂದಲದಿಂದ ಕೆಲಸ ಕಾರ್ಯಗಳನ್ನು ಆರಂಭಿಸಿ ತೊಂದರೆ ಅನುಭವಿಸುವಿರಿ. ನಿಮ್ಮ ಮನದಲ್ಲಿ ಅಸುರಕ್ಷಿತ ಭಾವನೆ ಮನೆ ಮಾಡುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಸಂಧಾನ ಸಭೆಗಳಿಂದ ಸಣ್ಣಪುಟ್ಟ ವಿವಾದಗಳನ್ನು ಬಗೆಹರಿಸುವಿರಿ. ಕೋಪ ಬಂದರು ಬಹುಕಾಲ ನಿಲ್ಲುವುದಿಲ್ಲ. ನಿಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಕಾರ್ಯ ನೈಪುಣ್ಯತೆಯನ್ನು ಮೆಚ್ಚುತ್ತಾರೆ. ತಂದೆ ತಾಯಿಗಳ ಜತೆ ಅನಾವಶ್ಯಕ ಭಿನ್ನಾಭಿಪ್ರಾಯಗಳು ಇರುತ್ತವೆ. ಮಧ್ಯ ವಯಸ್ಸಿನ ಜನರಿಗೆ ವಿಶೇಷ ಲಾಭ ದೊರೆಯುತ್ತದೆ. ಬಾಳ ಸಂಗಾತಿಯಿಂದ ಹಣದ ಸಹಾಯ ದೊರೆಯುತ್ತದೆ. ನಿಮ್ಮ ತಪ್ಪಾದ ನಿರ್ಧಾರಗಳಿಗೆ ನೀವೇ ಬೇಸರಗೊಳ್ಳುವಿರಿ.

ಮೀನ

ಅನಿರೀಕ್ಷಿತ ಧನ ಲಾಭ. ಕೌಟುಂಬಿಕ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ನರನಿಶ್ಯಕ್ತಿ ನಿಮ್ಮನ್ನು ಕಾಡುತ್ತದೆ. ಸಂಬಂಧಿಕರ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುವಿರಿ. ಆಡಂಬರದ ಜೀವನ ಇಷ್ಟಪಡುವಿರಿ. ಜನರು ನಿಮ್ಮ ಮಾತುಗಳಿಗೆ ಮನಸೊಲುತ್ತಾರೆ. ಸಂಗಾತಿಯ ಜತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಸಾಲದ ವ್ಯವಹಾರದಿಂದ ತೊಂದರೆ ಇರುತ್ತದೆ ಎಚ್ಚರಿಕೆ ಇರಲಿ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ಹೊಸ ಜವಾಬ್ದಾರಿಗಳಿಂದ ಮನದಲ್ಲಿ ಆತಂಕದ ಭಾವನೆ ಎದುರಾಗುತ್ತದೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ.

TAGGED:01-07-2024 Gemini- Property dispute settlement Sagittarius- Special position in employment what is in your horoscope future? newsics
Share This Article
Facebook Twitter Copy Link Print
Previous Article ಬೆರಿಲ್ ಚಂಡಮಾರುತ: ಭಾರತಕ್ಕೆ ಟೀಂ ಇಂಡಿಯಾ ಆಗಮನ ವಿಳಂಬ ಸಾಧ್ಯತೆ
Next Article ಈ ಮದುವೆಯಲ್ಲಿ ಬಂದ ಅತಿಥಿಗಳಿಗೆ 66ಸಾವಿರ ರೂ. ನಗದು ಬಹುಮಾನ

Popular Posts

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?