newsics.com
ನವದೆಹಲಿ: ಕೇಂದ್ರ ಸರ್ಕಾರ 50 ವರ್ಷಗಳ ಹಿಂದಿನ ನಿಯಮಕ್ಕೆ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ನಂತರ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ಮಹಿಳಾ ಸರ್ಕಾರಿ ನೌಕರರು 180 ದಿನಗಳ ಹೆರಿಗೆ ರಜೆ ತೆಗೆದುಕೊಳ್ಳಲು ಅವಕಾಶ ಲಭಿಸಿದೆ.
ಕೇಂದ್ರ ನಾಗರಿಕ ಸೇವೆಗಳ(ರಜೆ) ನಿಯಮಗಳು, 1972 ರಲ್ಲಿ ಮಾಡಲಾದ ಬದಲಾವಣೆಗಳ ಪ್ರಕಾರ, “ಕಮಿಷನಿಂಗ್ ತಾಯಿ” (ಸರೊಗಸಿ ಮೂಲಕ ಜನಿಸಿದ ಮಗುವಿನ ಉದ್ದೇಶಿತ ತಾಯಿ) “ಕಮಿಷನಿಂಗ್ ಫಾದರ್”ಗೆ 15 ದಿನಗಳ ಪಿತೃತ್ವ ರಜೆ ಜತೆಗೆ ಮಕ್ಕಳ ಆರೈಕೆ ರಜೆಯೂ ಸಿಗಲಿದೆ.
ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲು ಇದುವರೆಗೂ ಯಾವುದೇ ನಿಯಮವಿರಲಿಲ್ಲ.
ಬಾಡಿಗೆ ತಾಯ್ತನದ ಮೂಲಕ ಪಡೆಯುವ ಪುರುಷ ಸರ್ಕಾರಿ ನೌಕರನಾಗಿರುವ ತಂದೆಗೆ ಮಗುವಿನ ಹೆರಿಗೆಯ ದಿನಾಂಕದಿಂದ 6 ತಿಂಗಳ ಅವಧಿಷಯೊಳಗೆ 15 ದಿನಗಳ ಪಿತೃತ್ವ ರಜೆ ನೀಷಡಬಹುದು ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.
ಇನ್ಮುಂದೆ ಅಂಗನವಾಡಿ ಕೇಂದ್ರಗಳಲ್ಲೇ LKG, UKG:ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ