newsics.com/ನ್ಯೂಸಿಕ್ಸ್
ಆಮ್ಸ್ಟರ್ಡ್ಯಾಮ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದ ಭಾಗವಾಗಿ ಶುಕ್ರವಾರ ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಿದ್ದಾರೆ.
https://youtube.com/shorts/usEc-tvnzJE?si=qg6iQaBO-XooXPGb
ನೆದರ್ಲೆಂಡ್ಸ್ನ ಹೇಗ್ನಲ್ಲಿ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದರು. ಜಗತ್ತು ಪ್ರಸಕ್ತ ಹಲವಾರು ಮಹತ್ವದ ಸವಾಲುಗಳನ್ನು ಎದುರಿಸುತ್ತಿದ್ದು, ಪರಿಸ್ಥಿತಿಯು ಕ್ಷಿಪ್ರವಾಗಿ ಬದಲಾಗದೆ ಇದ್ದಲ್ಲಿ ಹಲವು ದಶಕಗಳಿಂದ ಸಾಧಿಸಿದ ಸಾಧನೆಗಳು ಕೊಚ್ಚಿಹೋಗಲಿವೆ ಹಾಗೂ ಜಗತ್ತಿನ ಜನಸಂಖ್ಯೆಯ ಅತಿ ದೊಡ್ಡ ವರ್ಗವೊಂದು ಬಡತನದಲ್ಲಿ ಮುಳುಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
40 ನಿಮಿಷ ಮಾತನಾಡಿದ ಅವರು, ‘ಇಂದಿನ ಭಾರತವು ನಮಗೆ ಕೇವಲ ಬದಲಾವಣೆಯಷ್ಟೇ ಅಲ್ಲ, ಅತ್ಯುತ್ತಮವಾದದ್ದು ಬೇಕು. ಎಲ್ಲವೂ ವೇಗವಾಗಿ ಆಗಬೇಕು ಎಂದು ಬಯಸುತ್ತಿದೆ. ದೇಶದಲ್ಲಿ ಅಪರಿಮಿತವಾದ ನಿರೀಕ್ಷೆಗಳು ಇರುವಾಗ, ಅದಕ್ಕೆ ತಕ್ಕಂತೆಯೇ ಪ್ರಯತ್ನಗಳೂ ನಡೆಯುತ್ತಿವೆ’ ಎಂದು ತಿಳಿಸಿದ್ದಾರೆ.
ಜಾಗತಿಕ ಇಂಧನ ಮಾರುಕಟ್ಟೆ ಭಾರೀ ಒತ್ತಡವನ್ನು ಎದುರಿಸುತ್ತಿದ್ದು, ಇದು ಕೇವಲ ಆರ್ಥಿಕ ಸಮಸ್ಯೆಯಲ್ಲದೆ ಮಾನವೀಯ ಕಳಕಳಿಯ ವಿಚಾರವೂ ಆಗಿದೆ. ಜಾಗತಿಕವಾಗಿ ಇಂಧನ ಬೆಲೆಗಳ ಏರಿಳಿತಗಳು ಅಭಿವೃದ್ಧಿಶೀಲ ದೇಶಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ.
ತೈಲ ಹಾಗೂ ಅನಿಲ ಬೆಲೆಯೇರಿಕೆಗಳು ಸಾರಿಗೆ, ಆಹಾರ ಪೂರೈಕೆ, ಉತ್ಪಾದನೆ ಹಾಗೂ ಗೃಹ ಖರ್ಚುಗಳ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವುದು ಹಾಗೂ ಇಂಧನ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಕೆಲವೇ ಪ್ರದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಅಗತ್ಯವಿರುವುದಾಗಿ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು.