newsics.com/ನ್ಯೂಸಿಕ್ಸ್
ನೆದರ್ಲೆಂಡ್ಸ್: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಭಾಗವಾಗಿ ಅವರು ಶುಕ್ರವಾರ ನೆದರ್ಲೆಂಡ್ಸ್ ಭೇಟಿ ನೀಡಿದ್ದಾರೆ.
ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ.ನೆದರ್ಲೆಂಡ್ಸ್ನಲ್ಲಿ ಲೈಡೆನ್ ಫಲಕಗಳು ಎಂದು ಕರೆಯಲ್ಪಡುವ ಅನ್ನೈಮಂಗಲಂ ಅನ್ನು ಭಾರತಕ್ಕೆ ಮರಳಿ ತರಲು 2012ರಿಂದಲೂ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಫಲಪ್ರದವಾಗಿದೆ.
ಅನೈಮಂಗಲಂ ತಾಮ್ರ ಫಲಕಗಳು ಎಂದೇ ಪ್ರಸಿದ್ಧವಾಗಿರುವ ಈ ಫಲಕಗಳು Larger Leiden Plates ಎಂದು ಗುರುತಿಸಿಕೊಂಡಿವೆ. ಇವುಗಳ ಆಕಾರ, ರೂಪ ಹಾಗೂ ಶೈಲಿಯ ವಿವರ ನೋಡಿದರೆ ಅಚ್ಚರಿ ಉಂಟಾಗುತ್ತದೆ. 21 ದೊಡ್ಡ ತಾಮ್ರ ಫಲಕಗಳು ಮತ್ತು 3 ಚಿಕ್ಕ ಫಲಕಗಳು ಸೇರಿ ಒಟ್ಟು 24 ಫಲಕಗಳ ಈ ಸಂಚಿ ಸುಮಾರು 30 ಕಿಲೋಗ್ರಾಂ ತೂಕ ಹೊಂದಿದ್ದು, ರಾಜೇಂದ್ರ ಚೋಳ I ರ ರಾಜಮುದ್ರೆ ಹೊಂದಿದ ಬೃಹತ್ ಕಂಚಿನ ಉಂಗುರದಿಂದ ಒಟ್ಟಿಗೆ ಬಂಧಿಸಲಾಗಿದೆ.
ಫಲಕಗಳಲ್ಲಿರುವ ಶಾಸನ ವಿವರ ಅತ್ಯಂತ ಮಹತ್ವದ್ದು. ಮೊದಲ 5 ಫಲಕಗಳು ಸಂಸ್ಕೃತ ಭಾಷೆಯಲ್ಲಿ ಗ್ರಂಥ ಲಿಪಿಯಲ್ಲಿ ಚೋಳ ವಂಶಾವಳಿಯ ವಿವರ ಹೊಂದಿದ್ದು, ವಿಷ್ಣುವಿನಂತಹ ಪೌರಾಣಿಕ ಪೂರ್ವಜರಿಂದ ಆರಂಭಿಸಿ ರಾಜರ ಸಾಧನೆಗಳನ್ನು ದಾಖಲಿಸಿದೆ. ಉಳಿದ ಫಲಕಗಳು ತಮಿಳು ಭಾಷೆಯಲ್ಲಿ ಭೂ ದಾನ ಮತ್ತು ಆಡಳಿತ ವಿವರಗಳನ್ನು ಒಳಗೊಂಡಿದ್ದು ಚೋಳ ಆಡಳಿತದ ನಿಖರತೆ ಮತ್ತು ಕ್ರಮಬದ್ಧತೆಗೆ ಸಾಕ್ಷಿಯಾಗಿದೆ.
ತಮಿಳುನಾಡಿನ ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಡಚ್ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ. ಭಾರತದ ಪ್ರಾಚೀನ ಅಪರೂಪದ ವಸ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಲೇ ಇತ್ತು. ಆದರೀಗ ಫಲಪ್ರದವಾಗಿದೆ.
https://www.newsics.com/2026/05/17/cng-price-hiked-by-rs-1-again/