newsics.com/ನ್ಯೂಸಿಕ್ಸ್
ದಳಪತಿ ವಿಜಯ್ ತಮ್ಮ ಸಿಎಂ ಪವರ್ ಬಳಸಿ ಗೆಳತಿಗೆ ಒಂದು ಒಲವಿನ ಉಡುಗೊರೆಯನ್ನು ಕೊಟ್ಟಿದ್ದಾರಂತೆ.
ಯೆಸ್, ಇತ್ತೀಚಿಗೆ ತಮಿಳುನಾಡಿನಲ್ಲಿ ಸಿನಿಮಾಗಳನ್ನ ಹತ್ತು ಗಂಟೆಗೆ ಮುನ್ನ ರಿಲೀಸ್ ಮಾಡೋದನ್ನ ಬಂದ್ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆಗೆ ತೊಂದ್ರೆಯಾಗುತ್ತೆ ಅಂತ ಹಿಂದಿನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಆದ್ರೆ ಕರಪ್ಪು ಸಿನಿಮಾತಂಡ ವಿಜಯ್ ಗೆ ಮನವಿ ಮಾಡಿ ಈ ನಿಯಮದಿಂದ ವಿನಾಯತಿ ಕೊಡುವಂತೆ ಕೇಳಿಕೊಂಡಿದ್ರು. ಅರ್ಲಿ ಮಾರ್ನಿಂಗ್ ಶೋ ಹಾಕಲಿಕ್ಕೆ ಅವಕಾಶ ಕೊಡಿ ಅಂತ ಮನವಿ ಸಲ್ಲಿಸಿದ್ರು.
ವಿಜಯ್ ಕೂಡ ಸಿನಿಮಾದವರೇ. ಜೊತೆಗೆ ಹೇಳಿ ಕೇಳಿ ಗೆಳತಿ ತ್ರಿಷಾ ನಾಯಕಿ ಆಗಿರೋ ಸಿನಿಮಾ. ಸೋ ಹಿಂದೂ ಮುಂದೂ ನೋಡದೇ ವಿಜಯ್ ಇದಕ್ಕೆ ಅನುಮತಿ ಕೊಟ್ಟಿದ್ದಾರೆ. ಅರ್ಲಿ ಮಾರ್ನಿಂಗ್ ಶೋ ಹಾಕುವ ಅನುಮತಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಆದ್ರೆ ಕರಪ್ಪು ಚಿತ್ರತಂಡ ತನ್ನ ವೈಯಕ್ತಿಕ ಸಮಸ್ಯೆಗಳಿಂದ ಅನುಮತಿ ಇದ್ರೂ ಮುಂಜಾನೆಯ ಶೋ ನಡೆಸೋದಕ್ಕೆ ಸಾಧ್ಯ ಆಗಿಲ್ಲ. ಸಿಎಂ ಅನುಮತಿ ಸಿಕ್ಕರೂ ಕರಪ್ಪು ಟೀಂಗೆ ಮಾತ್ರ ಅದನ್ನ ಸರಿಯಾಗಿ ಬಳಸಿಕೊಳ್ಳೋದಕ್ಕೆ ಆಗಿಲ್ಲ.
ಸಿಎಂ ವಿಜಯ್ ಕೊಟ್ಟ ಪರವಾನಿಗೆ ಕರಪ್ಪು ಟೀಂಗೆ ಎಷ್ಟು ಯೂಸ್ ಆಯ್ತೋ ಬಿಟ್ತೋ ಗೊತ್ತಿಲ್ಲ. ಆದ್ರೆ ಇದು ಅನುಮತಿ ಕೊಡೋ ಮೂಲಕ ಗೆಳತಿ ತ್ರಿಷಾಗೆ ವಿಶೇಷ ಉಡುಗೊರೆ ಎನ್ನಲಾಗುತ್ತಿದೆ.