Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING | Today’s Horoscope ಇಂದಿನ‌ ರಾಶಿ‌ ಭವಿಷ್ಯ, 15-05-2026, ಶುಕ್ರವಾರ, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ‌ ರಾಶಿ‌ ಭವಿಷ್ಯ, 15-05-2026, ಶುಕ್ರವಾರ, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

Share
4 Min Read
SHARE

newsics.com/ನ್ಯೂಸಿಕ್ಸ್ 

ಶುಭದಿನ

ಇಂದಿನ ಪಂಚಾಂಗ/ ರಾಶಿ ಭವಿಷ್ಯ

15-05-2026, ಶುಕ್ರವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಕೃಷ್ಣ ಪಕ್ಷ ತ್ರಯೋದಶಿ/ ಚತುರ್ದಶಿ.

* ವೃಷಭ ಸಂಕ್ರಮಣ

* ಮಾಸಿಕ ಶಿವರಾತ್ರಿ

* ಅಂತಾರಾಷ್ಟ್ರೀಯ ಕುಟುಂಬಗಳ ದಿನ

—-

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 43 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:45 – 12:21, ಯಮಗಂಡ ಕಾಲ 15:32 – 17:08, ಗುಳಿಕ ಕಾಲ 07:34 – 09:10

===========

ಇಂದಿನ ರಾಶಿ ಭವಿಷ್ಯ

ಮೇಷ

ಇಷ್ಟವಿಲ್ಲದ ವಿಚಾರಗಳೇ ನಿಮ್ಮ ಸುತ್ತ ಮಾತನಾಡಿ ಮಾನಸಿಕ ಹಿಂಸೆ ಕೊಡುವರು. ಇಂದು ಸ್ವಲ್ಪ ಮಟ್ಟಿಗೆ ಆರ್ಥಿಕ ಬೆಳವಣಿಗೆ ಕಾಣಿಸಿ ಸಮಾಧಾನವಾಗುವುದು. ಹಣಕಾಸು ಯೋಜನೆಗಳಲ್ಲಿ ಸ್ಪಷ್ಟತೆ ಇರಲಿ. ನಿದ್ದೆಯ ಕೊರತೆ ದೈನಂದಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರ‌ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು.

ವೃಷಭ 

ಆಹಾರ ವ್ಯತ್ಯಾಸದಿಂದ ಉದರ ಬಾಧೆ ಹೆಚ್ಚಾಗುವುದು. ಹಿರಿಯರ‌ ಸೇವೆಯ ಬಗ್ಗೆ ಹೆಮ್ಮೆ ಇರಲಿದೆ. ಸರ್ಕಾರದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬೇಕಾಗುವುದು. ಉದ್ಯೋಗದಲ್ಲಿ ಸಣ್ಣ ಯತ್ನದಿಂದಲೇ ದೊಡ್ಡ ಫಲ ಸಿಗಬಹುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಯಾರನ್ನೂ ಅಪಮಾನ ಮಾಡುವುದು ಬೇಡ. ಅಪ್ರಯೋಜಕ ಮಾತುಗಳಿಗೆ ಕಿವಿಯಾಗುವಿರಿ.

ಮಿಥುನ 

ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ಕಾರಣ ಕಾರ್ಯವು ಸೂಚಿಸದೇ ಬಹಳ ಜಡರಾಗುವಿರಿ‌. ಹಣ ನಷ್ಟದಿಂದ ಚಿಂತೆ ಆಗಬಹುದಾದರೂ ಶೀಘ್ರವೇ ಪರಿಹಾರ ಕಂಡುಬರಲಿದೆ. ನಿಮಗೆ ಸರಿಕಂಡ ಕಾರ್ಯವನ್ನು ಯಾವುದೇ ಹಿಂಜರಿಕೆ ಇಲ್ಲದೇ ಮಾಡುವಿರಿ. ಸ್ನೇಹಿತರಿಂದ ಸಣ್ಣ ಹಾಸ್ಯದ ಸಂದರ್ಭಗಳು ಒತ್ತಡ ತಗ್ಗಿಸಬಲ್ಲವು. ದಿನದ ಅಂತ್ಯದಲ್ಲಿ ಆನಂದದ ಕ್ಷಣಗಳು ನಿಮ್ಮನ್ನು ಹತ್ತಿರದಿಂದ ತಲುಪುತ್ತವೆ. ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಉದ್ಯಮವನ್ನು ಅನ್ಯ ಮಾರ್ಗದಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ.

ಕರ್ಕಾಟಕ

ಮಕ್ಕಳಿಗಾಗಿ ವಿಶೇಷ ಅಡುಗೆಯನ್ನು ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಕಲ್ಪನೆಯ ಶಕ್ತಿ ಹೆಚ್ಚಾಗುತ್ತದೆ, ಆದರೆ ಅದು ದುರ್ಬಳಕೆಗೆ ಕಾರಣವಾಗಬಾರದು. ಕೆಲಸದಲ್ಲಿ ಗಮನ ಹರಿಸುವ ಅಗತ್ಯವಿದೆ. ವಾಹನ‌ ದುರಸ್ತಿ ಅನಿರೀಕ್ಷಿತವಾಗಬಹುದು. ಖರ್ಚು ನಿಯಂತ್ರಣ ಮಾಡದಿದ್ದರೆ ಹಣಕಾಸಿನಲ್ಲಿ ಅಸ್ವಸ್ಥತೆ ಉಂಟಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಓಡಾಟವನ್ನು ಮಾಡಬೇಕಾಗುವುದು. ಅಸೂಯೆಯ ಕಾರಣ ದ್ವೇಷಭಾವವು ಸಹೋದ್ಯೋಗಿಯ ಬಗ್ಗೆ ನಿಮ್ಮಲ್ಲಿ ಮೂಡಬಹುದು.

ಸಿಂಹ 

ನಿಮ್ಮನ್ನು ಉಪಯೋಗಿಸಿಕೊಳ್ಳುವವರ ಜೊತೆ ವಾಗ್ವಾದ. ಕಠಿಣ ಪರಿಶ್ರಮ ಇಂದು ಫಲ ನೀಡಲಿದೆ. ಉದ್ಯೋಗದಲ್ಲಿ ಉನ್ನತಿ ಅಥವಾ ಬದಲಾವಣೆಯ ಸೂಚನೆ ಇದೆ. ಹಣಕಾಸಿನಲ್ಲಿ ಲಾಭದ ಸಂದರ್ಭ ಎದುರಾಗಬಹುದು. ಕುಟುಂಬದಲ್ಲಿ ಸಣ್ಣ ಸಂಗತಿಗಳು ಸಂತೋಷ ನೀಡಬಹುದು. ಮನೋರಂಜನೆಗೆ ನಿಮಗೆ ಸಮಯವು ಸಿಗುವುದು. ಇನ್ನೊಬ್ಬರ ಕೆಲಸದ ಹೊರೆಯೂ ನಿಮಗೆ ಬರಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು.

ಕನ್ಯಾ 

ಉದ್ಯೋಗದಲ್ಲಿ ಒತ್ತಡ ನಿವಾರಣೆಯನ್ನು ನೀವೇ ಸ್ವತಃ ಮಾಡಿಕೊಳ್ಳಬೇಕಾಗುವುದು. ಮಾತುಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಎಚ್ಚರಿಕೆಯಿಂದ ಮಾತನಾಡಿ. ಒಪ್ಪಂದಗಳಿಂದ‌ ಜಾರಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಪಡೆಯುವ ಸಂಭವ. ಹಣಕಾಸಿನಲ್ಲಿ ಜ್ಞಾನದಿಂದ ನಿರ್ವಹಣೆ ಅಗತ್ಯವಿದೆ. ಸಂಗಾತಿಯ ಆರೋಗ್ಯವನ್ನು ನೋಡಿಕೊಳ್ಳುವ ಭರದಲ್ಲಿ ಕೆಲವು ಕಾರ್ಯಗಳನ್ನು ಮರೆಯಬಹುದು. ಪಾಲುದಾರಿಕೆಯಲ್ಲಿ ಆದ ಮನಸ್ತಾಪವನ್ನು ಮುಂದುವರಿಸದೇ ಸುಮ್ಮನಿರಿ.

ತುಲಾ 

ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ಹಣಕಾಸು ಪ್ರಗತಿಗೆ ಯೋಗ್ಯ ಸಮಯ. ಸರ್ವತೋಮುಖ ವಿಕಾಸಕ್ಕೆ ಸಮಯ ಸಾಕಾಗದು. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಬಹುದು. ಆರೋಗ್ಯದಲ್ಲಿ ಒತ್ತಡದ ಕಾರಣ ತಲೆನೋವು ಉಂಟಾಗಲಿದೆ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಮನೆಯಿಂದ ದೂರವಿರಲು ಯತ್ನಿಸುವಿರಿ.

ವೃಶ್ಚಿಕ 

ಉದ್ಯೋಗದಲ್ಲಿ ನೀವು ಬಹಳ ಪ್ರಾಮಾಣಿಕವಾಗಿ ಇರುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಬೆಳವಣಿಯಾಗುವುದು ಖುಷಿ ಕೊಡುವುದು. ಒತ್ತಡ ಹೆಚ್ಚಾದರೂ ಅದು ನಿಮ್ಮ ಉತ್ಸಾಹದ ಮೇಲೆ ಪರಿಣಾಮ ಬೀರದು. ವಿದ್ಯಾರ್ಥಿಗಳು ಓದಿನ ಕಡೆ ವಿಶೇಷ ಗಮನವನ್ನು ಕೊಡುವುದು ಕಷ್ಟವಾದೀತು. ಬಂಧುಗಳ ಕುಹಕಕ್ಕೆ ಸಿಲುಕುವಿರಿ. ಆಸ್ತಿಯಲ್ಲಿ ಪಾಲುದಾರಿಕೆಯು ನಿಮಗೆ ಸಮಾಧಾನ ಕೊಡದು.

ಧನುಸ್ಸು

ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆ ಗುರುತಿಸಲ್ಪಡುತ್ತದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ. ಇಂದು ಕೈ ಹಾಕಿದ ಹೊಸ ಕೆಲಸ ಶುಭದಾಯಕವಾಗಬಹುದು. ರಾಜಕೀಯದಲ್ಲಿ ಕೈಜೋಡಿಸುವ ಬಗ್ಗೆ ಕುತೂಹಲವಿರುವುದು. ಸಾಮಾಜಿಕ ಕಾರ್ಯವು ನಿಮ್ಮನ್ನು ಸೆಳೆಯುವುದು. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು.

ಮಕರ 

ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿಮಗೆ ಅನಾನುಕೂಲ ಉಂಟಾಗುವುದು. ಇಂದು ಸೃಜನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ದಿನ. ವಿದ್ಯಾರ್ಥಿಗಳಿಗೆ ಉತ್ತಮ ಅಭ್ಯಾಸದಿಂದ ಲಾಭ. ಹಣಕಾಸಿನಲ್ಲಿ ಖರ್ಚು ಹೆಚ್ಚಾಗಬಹುದು. ಇಂದು ನಿಮ್ಮ ನಿರ್ಧಾರಗಳು ಉತ್ತಮ ಫಲ ನೀಡಲಿವೆ. ಮೇಲಧಿಕಾರಿಗಳ ಜೊತೆಗಿನ ಸಲುಗೆಯು ದುರುಪಯೋಗ ಆಗಬಹುದು. ವ್ಯವಹಾರದಲ್ಲಿ ಚುರುಕು ಸಾಲದು. ನಿಮ್ಮ ಸರಳತೆಯು ಜೊತೆಗಾರರಿಗೆ ಇಷ್ಟವಾಗುವುದು.

ಕುಂಭ 

ನೆರೆ ಹೊರೆಯವರು ನಿಮಗೆ ಸಹಕಾರ ನೀಡದೇ ಕಷ್ಟವಾಗುವುದು. ಸಂಗಾತಿಯ ಜೊತೆ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ದಿನ. ಕೆಲಸದಲ್ಲಿ ನೀವು ನಿರೀಕ್ಷಿಸುವ ಪ್ರಗತಿ ಕಾಣಬಹುದು. ಹಣಕಾಸಿನಲ್ಲಿ ಬುದ್ಧಿವಂತಿಕೆ ಅಗತ್ಯವಿದೆ. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ. ಆತುರದಲ್ಲಿ ಯಾವ ನಿರ್ಧಾರಕ್ಕೂ ಬರದೇ, ತಾಳ್ಮೆಯಿಂದ ಎಲ್ಲವೂ ತಿಳಿಯಾದಮೇಲೆ ನಿರ್ಧರಿಸಿ. ಎಲ್ಲವೂ ಸರಿಯಾಗುವುದು.

ಮೀನ 

ಕೆಟ್ಟ ವಾಹನದ ಚಾಲನೆಯಿಂದ ಅಪಘಾತ ಸಂಭವಿಸಬಹುದು. ನ್ಯಾಯಾಲಯದ ಬಗ್ಗೆ ನಿಮಗೆ ಬಹಳ ಚಿಂತೆ‌ ಕಾಡುವುದು. ನಿಮ್ಮ ಹಣಕಾಸಿನ ಸ್ಥಿತಿಯನ್ನು ಹೇಳಿಕೊಳ್ಳಲು ಇಷ್ಟವಾಗದು. ಹೊಸ ಯೋಚನೆಗಳು ಬೆಳಕಿಗೆ ಬರುತ್ತವೆ. ಉದ್ಯೋಗದಲ್ಲಿ ಹೊಸ ಯೋಜನೆ ಆರಂಭವಾಗುವ ಯೋಗವಿದೆ. ಹಣಕಾಸಿನಲ್ಲಿ ನೂತನ ಆದಾಯದ ಮಾರ್ಗಗಳು ರೂಪುಗೊಳ್ಳಬಹುದು. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು.

 

TAGGED:#almanac #zodiac #prediction #15-05-2026 #friday #horoscope #planetary #positions #newsics #news #ನ್ಯೂಸಿಕ್ಸ್ #ಭವಿಷ್ಯ
Share This Article
Facebook Twitter Copy Link Print
Previous Article Indian Ship ಒಮಾನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ : 14 ಸಿಬ್ಬಂದಿ ರಕ್ಷಣೆ
Next Article ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತು ನಿಷೇಧಿಸಿದ ಕೇಂದ್ರ : ಕಾರಣವೇನು?

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?