newsics.com
ಮಂಡ್ಯ: 60ರ ಅರ್ಚಕನ ಜೊತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್ ಮಾಡಿರೋ ಆರೋಪ ಕೇಳಿ ಬಂದಿದೆ.
ಪಾಂಡವಪುರದ ಅರ್ಚಕನಿಗೆ ತೆಲಂಗಾಣದ ಮಹಿಳೆಯ ಫೋಟೋ ಬಳಸಿ ಮೋಸ ಮಾಡಲಾಗಿದೆ. ತೆಲಂಗಾಣ ಮೂಲದ ಸಿರಿ ಶ್ರೇಷಾ ಸರಿತಾ ಅನ್ನೋ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ಓಪನ್ ಮಾಡಲಾಗಿದೆ. ಅದರಲ್ಲಿ 60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿ ಮೋಸ ಮಾಡಿದೆ ಎಂದು ದೂರು ನೀಡಲಾಗಿದೆ.
60 ವರ್ಷದ ವೃದ್ಧನ ಜೊತೆ 20 ವರ್ಷದ ಯುವತಿ ವಾಟ್ಸಾಆ್ಯಪ್‌ನಲ್ಲಿ ಚಾಟಿಂಗ್ ಮಾಡಿದ್ದಾರೆ. ಯುವತಿ ಮಾತು ನಂಬಿದ ಅರ್ಚಕರು ಆನ್‌ಲೈನ್‌ನಲ್ಲಿ ಹಣ ಕಳುಹಿಸಿ ಲಕ್ಷ, ಲಕ್ಷ ಹಣ ಕಳೆದುಕೊಂಡಿದ್ದಾರೆ.
ಮಂಡ್ಯದ ಪಾಂಡವಪುರ ಮೂಲದ ಅರ್ಚಕ ಈಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.