Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > WH- hot topic right now ವರ್ಕ್ ಫ್ರಂ ಹೋಂ ಯಾವಾಗ? ಟೆಕ್ಕಿಗಳಿಗೆ ಹೊಸ ಆಸೆ ಹುಟ್ಟಿಸಿದ್ರಾ ಮೋದಿ? ಕಚೇರಿಗಳಲ್ಲೀಗ ಭಾರೀ ಚರ್ಚೆ!
ಕರ್ನಾಟಕದೇಶಪ್ರಮುಖ

WH- hot topic right now ವರ್ಕ್ ಫ್ರಂ ಹೋಂ ಯಾವಾಗ? ಟೆಕ್ಕಿಗಳಿಗೆ ಹೊಸ ಆಸೆ ಹುಟ್ಟಿಸಿದ್ರಾ ಮೋದಿ? ಕಚೇರಿಗಳಲ್ಲೀಗ ಭಾರೀ ಚರ್ಚೆ!

Share
3 Min Read
SHARE

newsics.com/ನ್ಯೂಸಿಕ್ಸ್

ಪ್ರಧಾನಿ ನರೇಂದ್ರ ಮೋದಿ ಇಂಧನ ಉಳಿತಾಯಕ್ಕಾಗಿ ‘ವರ್ಕ್ ಫ್ರಮ್ ಹೋಮ್’ ಮಾಡುವಂತೆ ಸಲಹೆ ನೀಡಿದ್ದೇ ತಡ, ಐಟಿ ಉದ್ಯೋಗಿಗಳಲ್ಲಿ ಹೊಸ ಭರವಸೆ ಗರಿಗೆದರಿದೆ.

ನಮ್ಮ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಯಾವಾಗ ಶುರುವಾಗುತ್ತೆ? ಎಂದು ಟೆಕ್ಕಿಗಳು ತಮ್ಮ ಎಚ್‌ಆರ್ ಮತ್ತು ಟೀಮ್ ಮ್ಯಾನೇಜರ್‌ಗಳ ದುಂಬಾಲು ಬಿದ್ದಿದ್ದಾರೆ.

ವೈಟ್‌ಫೀಲ್ಡ್, ಔಟರ್ ರಿಂಗ್ ರೋಡ್ ಮತ್ತು ಬೆಳ್ಳಂದೂರಿನ ಟ್ರಾಫಿಕ್ ನರಕದಿಂದ ಮತ್ತೆ ಮುಕ್ತಿ ಸಿಗಲಿದೆಯೇ ಎಂಬ ಮಾತುಕತೆಗಳು ಆ ಭಾಗದ ಐಟಿ ಪಾರ್ಕ್‌ಗಳ ಕ್ಯಾಂಟೀನ್‌ಗಳಲ್ಲಿ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಜೋರಾಗಿ ನಡೆಯುತ್ತಿವೆ. ಮೋದಿಯವರ ಕರೆಯೇ ಇದಕ್ಕೆ ಕಾರಣವಾಗಿದೆ.

ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಹಾಗೂ ಜಾಗತಿಕ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇಂಧನ ಉಳಿಸಲು ಕರೆ ನೀಡಿದ್ದರು. ಕೋವಿಡ್ ಕಾಲದ ‘ವರ್ಕ್ ಫ್ರಮ್ ಹೋಮ್’ ಪದ್ಧತಿ, ಆನ್‌ಲೈನ್ ಮೀಟಿಂಗ್‌ಗಳನ್ನು ಮತ್ತೆ ಅಳವಡಿಸಿಕೊಳ್ಳುವ ಮೂಲಕ ಹಾಗೂ ಪಬ್ಲಿಕ್ ಟ್ರಾನ್ಸ್‌ಪೋರ್ಟ್, ಕಾರ್ ಪೂಲಿಂಗ್ ಬಳಸುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸಲು ಅವರು ಸಲಹೆ ನೀಡಿದ್ದರು.

ಮ್ಯಾನೇಜರ್‌ಗಳ ಬಳಿ ಟೆಕ್ಕಿಗಳ ವಿಚಾರಣೆ

ಸೋಮವಾರ ಕಚೇರಿ ಶುರುವಾಗುತ್ತಿದ್ದಂತೆ ಅನೇಕ ಉದ್ಯೋಗಿಗಳು ತಮ್ಮ ಮ್ಯಾನೇಜರ್‌ಗಳನ್ನು ಸಂಪರ್ಕಿಸಿ ‘ವರ್ಕ್ ಫ್ರಮ್ ಹೋಮ್’ ಬಗ್ಗೆ ವಿಚಾರಿಸುತ್ತಿದ್ದಾರೆ. ಈ ಬಗ್ಗೆ ಇ-ಕಾಮರ್ಸ್ ಸಂಸ್ಥೆಯ ಹಿರಿಯ ಮ್ಯಾನೇಜರ್ ಒಬ್ಬರು ಇದನ್ನು ಖಚಿತಪಡಿಸಿದ್ದಾರೆ.

“ನನ್ನ ತಂಡದ ಅನೇಕರು ನೇರವಾಗಿ ಬಂದು, ಕಂಪನಿ ಮತ್ತೆ ಮನೆಯಿಂದ ಕೆಲಕ್ಕೆ ಅನುಮತಿ ನೀಡಲಿದೆಯೇ ಎಂದು ಕೇಳಿದ್ದಾರೆ. ಇಂಧನ ಮತ್ತು ಸಮಯ ಉಳಿತಾಯವಾಗುವುದು ನಿಜವಾದರೂ, ಸಂಪೂರ್ಣವಾಗಿ ಮನೆಯಿಂದಲೇ ಕೆಲಸ ಮಾಡಿದರೆ ಟೀಮ್ ವರ್ಕ್ ಕಡಿಮೆಯಾಗುತ್ತದೆ. ಜತೆಗೆ, ಕ್ಯಾಬ್ ಚಾಲಕರು, ಸ್ಥಳೀಯ ರೆಸ್ಟೋರೆಂಟ್‌ಗಳು ಸೇರಿದಂತೆ ಕಚೇರಿ ಉದ್ಯೋಗಿಗಳನ್ನು ನೆಚ್ಚಿಕೊಂಡಿರುವ ಸ್ಥಳೀಯ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿದೆ. ತೈಲ ಬಿಕ್ಕಟ್ಟು ಮಿತಿಮೀರಿದರೆ ಮಾತ್ರ ಸಂಪೂರ್ಣವಾಗಿ ಪರಿಗಣಿಸಬಹುದು. ಸದ್ಯಕ್ಕೆ ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ಹೈಬ್ರಿಡ್ ವ್ಯವಸ್ಥೆಯೇ ಸೂಕ್ತ ಎಂದು ಅವರು ವಿವರಿಸಿದರು.

ಕುಟುಂಬದೊಂದಿಗಿರುವಾಸೆ…

ಕೋವಿಡ್-19 ಲಾಕ್‌ಡೌನ್ ಅನೇಕರಿಗೆ ಕಷ್ಟಕರವಾಗಿದ್ದರೂ, ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಟ್ರಾಫಿಕ್ ಇಲ್ಲದೆ ಮನೆಯಿಂದಲೇ ಕೆಲಸ ಮಾಡುವುದು ವರದಾನವಾಗಿತ್ತು. ಪ್ರಧಾನಿ ಮೋದಿಯವರ ಹೊಸ ಹೇಳಿಕೆ ಈ ನೆನಪುಗಳನ್ನು ಮತ್ತೆ ತಂದಿದೆ.

ಐಟಿ ಕಂಪನಿ ಸಂಸ್ಥೆಯ ಉದ್ಯೋಗಿ ಅನುಷಾ ಹೇಳುವಂತೆ, ಕಚೇರಿಗೆ ಬರುವುದು ಕಡ್ಡಾಯವಾದಾಗಿನಿಂದ ನನ್ನ 2 ವರ್ಷದ ಮಗುವಿನೊಂದಿಗೆ ಸಮಯ ಕಳೆಯಲು ಆಗುತ್ತಿಲ್ಲ. ದಿನದಲ್ಲಿ ಕೆಲವೇ ಗಂಟೆ ಮಾತ್ರ ಮಗುವನ್ನು ನೋಡುವಂತಾಗಿದೆ. ಈಗ ಖುದ್ದು ಪ್ರಧಾನಿಯವರೇ ಮನವಿ ಮಾಡಿದ್ದರಿಂದ, ಕಂಪನಿಗಳು ನಮ್ಮ ಪರಿಸ್ಥಿತಿ ಅರ್ಥಮಾಡಿಕೊಂಡು ಮತ್ತೆ ವರ್ಕ್ ಫ್ರಮ್ ಹೋಮ್ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ.

ಹೈಬ್ರಿಡ್ ಬೆಸ್ಟ್

ಕನಕಪುರ ರಸ್ತೆಯಿಂದ ಎಂಜಿ ರಸ್ತೆಗೆ ಪ್ರತಿದಿನ ಪ್ರಯಾಣಿಸುವ ಟೆಕ್ ಕಂಪನಿ ಉದ್ಯೋಗಿಯೊಬ್ಬರು, ಕಚೇರಿಯಲ್ಲಿ ವರ್ಕ್‌ ಫ್ರಂ ಹೋಮ್‌ ಚರ್ಚೆಗಳು ಆರಂಭವಾಗಿವೆ. ಪ್ರತಿದಿನ ಟ್ರಾಫಿಕ್‌ನಲ್ಲಿ ಎರಡೂವರೆ ಗಂಟೆ ವ್ಯರ್ಥ ಮಾಡುವುದನ್ನು ತಪ್ಪಿಸಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ. ಹೀಗಾಗಿ, ವಾರದಲ್ಲಿ ಕೆಲವು ದಿನ ಮಾತ್ರ ಕಚೇರಿಗೆ ಬರುವ ‘ಹೈಬ್ರಿಡ್ ಮಾಡೆಲ್’ ನನಗೆ ಸೂಕ್ತ ಎನಿಸುತ್ತದೆ ಎನ್ನುತ್ತಾರೆ.

ಬೆಂಗಳೂರಿನ ಅನೇಕ ಟೆಕ್ಕಿಗಳ ಮನೆಗಳಲ್ಲಿ ಈಗಾಗಲೇ ಸುಸಜ್ಜಿತ ವರ್ಕ್-ಸ್ಟೇಷನ್‌ಗಳಿವೆ. ಧೂಳು, ಗುಂಡಿಬಿದ್ದ ರಸ್ತೆಗಳು ಮತ್ತು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಅನುಭವಿಸಿ ಕಚೇರಿಗೆ ಹೋಗಿ ಅದೇ ಲ್ಯಾಪ್‌ಟಾಪ್ ಮುಂದೆ ಕೂರುವ ಬದಲು, ಪ್ರಧಾನಿ ಮೋದಿಯವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಐಟಿ ಕಂಪನಿಗಳು ಮತ್ತೆ ‘ವರ್ಕ್ ಫ್ರಮ್ ಹೋಮ್’ ಅಧಿಕೃತವಾಗಿ ಘೋಷಿಸಲಿ ಎಂದು ಸಿಲಿಕಾನ್ ಸಿಟಿಯ ಟೆಕ್ಕಿಗಳು ಕಾತರದಿಂದ ಕಾಯುತ್ತಿದ್ದಾರೆ.

 

ತಾಯಿ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದು ಟೆಕ್ಕಿ ಸಾವು

Woman techie horrified ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಮಾಡಿದ ಪಕ್ಕದ್ಮನೆ ಯುವಕ! ಕಂಗಾಲಾದ ಟೆಕ್ಕಿ

TAGGED:When is work from home? It's a hot topic in many offices right now!
Share This Article
Facebook Twitter Copy Link Print
Previous Article BSc student dies herself ಹಾಸ್ಟೆಲ್‌ನಲ್ಲಿ ಜನ್ಮದಿನದಂದೇ ಜೀವ ಕಳೆದುಕೊಂಡ ಬಿಎಸ್ಸಿ ವಿದ್ಯಾರ್ಥಿನಿ! ಎಂಗೇಜ್ಮೆಂಟ್ ಕಾರಣವಾ?
Next Article ತಾಯಿ ಇಲ್ಲದ ನೋವಲ್ಲಿ ದೇವರಾಯನದುರ್ಗ ಬೆಟ್ಟದಿಂದ ಜಿಗಿದು PWD ಇಂಜಿನಿಯರ್ ಇಂಜಿನಿಯರ್ ಆತ್ಮ*ಹತ್ಯೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?