newsics.com/ನ್ಯೂಸಿಕ್ಸ್
ದಕ್ಷಿಣ ಕನ್ನಡ: ಕರ್ನಾಟಕದ ಇತಿಹಾಸ ಪ್ರಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಈ ಬಾರಿ ಮತ್ತೆ ಹೆಚ್ಚಳವಾಗಿದೆ. 2025- 26 ನೇ ಸಾಲಿನ ಆರ್ಥಿಕ ವರ್ಷದಲ್ಲಿ 167.89 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಆ ಮೂಲಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
https://youtube.com/shorts/QmBsVJxCxsg?si=FaYAZtjO3Xv8e1rn
ವರ್ಷದಿಂದ ವರ್ಷಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಈ ಬಾರಿ ಕೂಡ ವಾರ್ಷಿಕ ಆದಾಯದಲ್ಲಿ ಏರಿಕೆಯಿಂದಾಗಿ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತನ್ನ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ಗುತ್ತಿಗೆಗಳಿಂದ 2.53 ಕೋಟಿ ರೂ.,ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನದಿಂದ 10.50 ಲಕ್ಷ ರೂ., ಕಟ್ಟಡ ಮತ್ತು ಅಂಗಡಿಗಳ ಬಾಡಿಗೆಯಿಂದ 94.46 ಲಕ್ಷ ರೂ., ಕಾಣಿಕೆಯಿಂದ 5.47 ಕೋಟಿ ರೂ.ಆದಾಯ ಬಂದಿದೆ
ಅದೇ ರೀತಿಯಾಗಿ ಇ- ಹುಂಡಿಯಿಂದ 38.01 ಲಕ್ಷ ರೂ., ಹುಂಡಿಯಿಂದ 24.69 ಕೋಟಿ ರೂ., ಹರಕೆ ಸೇವೆಗಳಿಂದ 64.08 ಕೋಟಿ ರೂಪಾಯಿ, ಅನುದಾನದಿಂದ 1.67 ಲಕ್ಷ ರೂ.ಆದಾಯ ಬಂದಿದೆ.
ಹುಂಡಿ ಹಣದ ಮೇಲಿನ ಬಡ್ಡಿ 49.11 ಲಕ್ಷ ರೂಪಾಯಿ, ಉಳಿತಾಯ ಖಾತೆ ಮತ್ತು ಇತರೆ ಬಡ್ಡಿ 41.80 ಲಕ್ಷ ರೂ., ಇತರೆ ಬಾಬ್ತುಗಳು 3.20 ಲಕ್ಷ ರೂಪಾಯಿ, ಛತ್ರ ಸಂರಕ್ಷಣಾ ವಂತಿಗೆ 6.93 ಲಕ್ಷ ರೂಪಾಯಿ, ಅನ್ನ ಸಂತರ್ಪಣೆ ನಿಧಿಯಿಂದ 9.14 ಲಕ್ಷ ರೂಪಾಯಿ, ಅಭಿವೃದ್ಧಿ ನಿಧಿ 14.17 ಲಕ್ಷ ರೂಪಾಯಿ, ಶಾಶ್ವತ ಸೇವಾ ಮೂಲದ 56.70 ಲಕ್ಷ ರೂ. ಹೀಗೆ ಒಟ್ಟು 167.89 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬಂದಿದೆ ಎಂದು ಹೇಳಲಾಗಿದೆ.
https://www.newsics.com/2026/05/11/thunderstorms-expected-in-bengaluru-for-next-two-days/