Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಿಜಯ್ ಸರ್ಕಾರದ ಕುರಿತು ವೇಣು ಸ್ವಾಮಿ ಹೇಳಿದ್ದೇನು?
ಪ್ರಮುಖಮನರಂಜನೆ

ವಿಜಯ್ ಸರ್ಕಾರದ ಕುರಿತು ವೇಣು ಸ್ವಾಮಿ ಹೇಳಿದ್ದೇನು?

Share
2 Min Read
SHARE

newsics.com/ನ್ಯೂಸಿಕ್ಸ್

ದಳಪತಿ ವಿಜಯ್ ಸರ್ಕಾರದ ಕುರಿತು ವೇಣು ಸ್ವಾಮಿ ಆಘಾತಕಾರಿ ಭವಿಷ್ಯವನ್ನು ನುಡಿದಿದ್ಧಾರೆ.

ಹೌದು, ವೇಣು ಸ್ವಾಮಿ ಸದ್ಯ ತಮಿಳುನಾಡಿನ ರಾಜಕಾರಣದ ಕುರಿತು ಭವಿಷ್ಯ ಹೇಳಿದ್ಧಾರೆ. ವಿಜಯ್ ಪಕ್ಕದಲ್ಲಿ ತ್ರಿಶಾ ಇಲ್ಲದಿದ್ದರೆ ಕಥೆ ಬೇರೆಯೇ ಇರುತ್ತಿತ್ತು ಎಂದಿದ್ಧಾರೆ.

ಈ ಕುರಿತು ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವ ವೇಣುಸ್ವಾಮಿ, ವಿಜಯ್ ಪಕ್ಕದಲ್ಲಿ ತ್ರಿಶಾ ಇಲ್ಲದಿದ್ದರೆ ಅವರ ಜಾತಕದ ಫಲವೇ ಬೇರೆಯಾಗಿರುತ್ತಿತ್ತು. ಅವರು ಈ ಮಟ್ಟದ ರಾಜಕೀಯ ಯಶಸ್ಸು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ವಿಜಯ್ ಮತ್ತು ತ್ರಿಶಾ ಇಬ್ಬರ ಜಾತಕ ಚಕ್ರಗಳ ಗ್ರಹಗತಿಗಳ ಮಿಲನವು ವಿಜಯ್ ಅವರ ರಾಜಕೀಯ ಏಳಿಗೆಗೆ ಪೂರಕವಾಗಿದೆ ಎಂದು ಹೇಳಿರುವ ವೇಣು ಸ್ವಾಮಿ, ತ್ರಿಶಾ ಅವರ ಜಾತಕದ ಪ್ರಭಾವ ವಿಜಯ್ ಅವರ ಅದೃಷ್ಟವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ದಳಪತಿ ವಿಜಯ್ ಈಗ ತಮಿಳುನಾಡಿನ ಅಧಿಪತಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ.. ಈ ಸಂಭ್ರಮ.. ಸಡಗರ.. ಕೇವಲ ಒಂದು ವರ್ಷಕ್ಕಷ್ಟೇ ಸೀಮಿತ ಎನ್ನುತ್ತೆ ವೇಣುಸ್ವಾಮಿಯ ಜ್ಯೋತಿಷ್ಯ ಶಾಸ್ತ್ರ.

ಈ ಕುರಿತು ಮಾತನಾಡಿರುವ ವೇಣು ಸ್ವಾಮಿ ವಿಜಯ್ ಸಿಎಂ ಆದರೂ ಸರ್ಕಾರ ಉಳಿಯುವುದು ಕಷ್ಟ ಎಂದು ಹೇಳಿದ್ಧಾರೆ. ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ, ಆ ಅಧಿಕಾರ ಅವರಿಗೆ ದೀರ್ಘಕಾಲ ಉಳಿಯುವುದಿಲ್ಲ ಎಂದು ಹೇಳಿರುವ ವೇಣುಸ್ವಾಮಿ, ವಿಜಯ್ ಸಿಎಂ ಆದ ಒಂದು ತಿಂಗಳು, ಆರು ತಿಂಗಳು ಅಥವಾ ಅಬ್ಬಬ್ಬಾ ಅಂದರೆ ಒಂದು ವರ್ಷದೊಳಗೆ ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಎದುರಾಗುವ ಸಾಧ್ಯತೆ ಶೇಕಡ 100 ರಷ್ಟಿದೆ ಎಂದು ಹೇಳಿದ್ದಾರೆ.

ಗುರು ಗ್ರಹದ ಬದಲಾವಣೆಯಿಂದಾಗಿ ತಮಿಳುನಾಡಿನಲ್ಲಿ ಸ್ಥಿರ ಸರ್ಕಾರ ರಚನೆಯಾಗುವುದು ಕಷ್ಟ. ರಾಜಕೀಯವಾಗಿ ದೊಡ್ಡ ಮಟ್ಟದ ಏರುಪೇರುಗಳು ಸಂಭವಿಸಲಿವೆ ಎಂದು ಹೇಳಿರುವ ವೇಣುಸ್ವಾಮಿ ಕೇವಲ ತಮಿಳುನಾಡು ಮಾತ್ರವಲ್ಲ ದೇಶದ ಇತರ ರಾಜ್ಯಗಳ ಮೇಲೂ ಗ್ರಹಗತಿಗಳ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲ ಪಶ್ಚಿಮ ಬಂಗಾಳದ ಕುರಿತು ಕೂಡ ಭವಿಷ್ಯ ಹೇಳಿರುವ ವೇಣುಸ್ವಾಮಿ ಅಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ. ಗ್ರಹಗಳ ಬದಲಾವಣೆಯಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಊಹಿಸಲೂ ಸಾಧ್ಯವಾಗದಂತಹ ರಾಜಕೀಯ ಬಿಕ್ಕಟ್ಟುಗಳು ತಲೆದೂರಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ವೇಣು ಸ್ವಾಮಿಯ ಈ ಭವಿಷ್ಯ ವಿಜಯ್ ಅಭಿಮಾನಿಗಳನ್ನು ಕೆರಳಿಸಿದೆ. ರಾಜಕೀಯ ವಲಯದಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದೆ.

ಅಂದ್ಹಾಗೇ ಈ ವ್ಯಕ್ತಿ ಹೇಳಿದ್ದೆಲ್ಲವೂ ನಡೆದಿದೆ ಅಂತಲ್ಲ. ಯಾಕೆಂದರೆ ತಮ್ಮ ಭವಿಷ್ಯ ಯಾವತ್ತು ಸುಳ್ಳಾಗಲ್ಲ ಎಂದು ವೇಣು ಸ್ವಾಮಿ ಹೇಳಿಕೊಂಡರು, ಜಗನ್ ವಿಚಾರದಲ್ಲಿ ಈ ವ್ಯಕ್ತಿ ನುಡಿದಿದ್ದ ಭವಿಷ್ಯ ಸುಳ್ಳಾಗಿತ್ತು.

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಜಗನ್ ಮೋಹನ್ ರೆಡ್ಡಿ ಗೆದ್ದೇ ಗೆಲ್ಲುತ್ತಾರೆ, ಮತ್ತೆ ಸಿಎಂ ಆಗುತ್ತಾರೆ ಎಂದು ಭಾರಿ ಭರವಸೆಯ ಮಾತುಗಳನ್ನಾಡಿದ್ದರು ವೇಣು. ಆದರೆ ಅದು ನಿಜವಾಗಲಿಲ್ಲ. ಹೀಗಾಗಿ ವಿಜಯ್ ವಿಷಯದಲ್ಲಿ ನುಡಿದ ಈ ಭವಿಷ್ಯ ನಿಜವಾಗುತ್ತಾ,..? ಎನ್ನುವುದನ್ನು ಈಗ ಕಾದು ನೋಡಬೇಕಿದೆ.

https://x.com/SkyCMedia/status/2052948533934752155?ref_src=twsrc%5Etfw%7Ctwcamp%5Etweetembed%7Ctwterm%5E2052948533934752155%7Ctwgr%5E6fab78eed9167e9752caba9cf636926b906a0a01%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಪೊಲೀಸರಿಗೆ ತಲೆಬಿಸಿ ​​ತಂದ ಭದ್ರತೆ

 

TAGGED:Venu Swamy on Vijay government
Share This Article
Facebook Twitter Copy Link Print
Previous Article ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಪೊಲೀಸರಿಗೆ ತಲೆಬಿಸಿ ​​ತಂದ ಭದ್ರತೆ
Next Article ದಳಪತಿ ವಿಜಯ್ ಸಿಎಂ ಪ್ರಮಾಣವಚನದ ಕಾರ್ಯಕ್ರಮಕ್ಕೆ ಪತ್ನಿ-ಮಕ್ಕಳು ಗೈರು!

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?