newsics.com/ನ್ಯೂಸಿಕ್ಸ್
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದ ಅನೇಕ ತಾರೆಯರು ರಾಜಕೀಯ ರಂಗದಲ್ಲಿ ಗೆದ್ದು ಸಿಂಹಾಸವೇರಿದ ಅನೇಕ ಉದಾಹರಣೆಗಳಿವೆ. ಎಂಜಿಆರ್ ರಿಂದ ಹಿಡಿತು ಜಯಲಲಿತಾ ವರೆಗೆ, ಸಿನೆಮಾ ಮತ್ತು ರಾಜಕೀಯದ ನಡುವಿನ ಸೇತುವೆ ಯಾವಾಗಲೂ ಬಲವಾಗಿಯೇ ಉಳಿದಿದೆ. ಇದೀಗ ಆ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ಮತ್ತೊಬ್ಬ ದೊಡ್ಡ ಹೆಸರು ದಳಪತಿ ವಿಜಯ್.
ಈ ರಾಜಕೀಯ ಸಂಚಲನದ ನಡುವೆಯೇ ವಿಜಯ್ ಅವರ ಆಸ್ತಿ ವಿವರಗಳು ಕೂಡ ಸಖತ್ ಹೈಲೈಟ್ ಆಗುತ್ತಿವೆ. ರಾಜಕೀಯದಲ್ಲಿ ಕಿಂಗ್ ಆಗಲು ಹೊರಟಿರುವ ವಿಜಯ್, ಆರ್ಥಿಕವಾಗಿಯೂ ಭಾರಿ ಶಕ್ತಿವಂತ ಎನ್ನುವುದು ಈಗ ಸಾಬೀತಾಗಿದೆ.
ಚೆನ್ನೈನ ಪೆರಂಬೂರ್ ಮತ್ತು ತಿರುಚ್ಚಿ ಈಸ್ಟ್ ಎರಡೂ ಕ್ಷೇತ್ರಗಳಲ್ಲೂ ವಿಜಯ್ ಭಾರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ತಮ್ಮ ನಾಯಕತ್ವದ ಪವರ್ ತೋರಿಸಿದ್ದಾರೆ. ರಾಜಕೀಯ ಯಶಸ್ಸಿನ ಜೊತೆಜೊತೆಗೆ ವಿಜಯ್ ಅವರ ಆಸ್ತಿ ವಿವರಗಳು ಈಗ ಎಲ್ಲರ ಬಾಯಿ ನಾಲಿಗೆಯಲ್ಲಿದೆ. ಅಫಿಡವಿಟ್‌ನಲ್ಲಿ ಘೋಷಿಸಿರುವಂತೆ ವಿಜಯ್ ಬಳಿ ಬರೋಬ್ಬರಿ 625 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ.
ಇದರಲ್ಲಿ 404 ಕೋಟಿಗೂ ಅಧಿಕ ಚರಾಸ್ತಿ ಇದ್ದರೆ, 220 ಕೋಟಿಗೂ ಅಧಿಕ ಸ್ಥಿರಾಸ್ತಿಯಿದೆ. ವಿಶೇಷ ಅಂದ್ರೆ ಇಷ್ಟು ಕೋಟಿ ಆಸ್ತಿ ಇದ್ದರೂ ದಳಪತಿಗೆ ಯಾವುದೇ ಸಾಲ ಇಲ್ಲ.
ವಿಜಯ್ ಅವರ ಬ್ಯಾಂಕ್ ಡೆಪಾಸಿಟ್‌ಗಳೇ 213 ಕೋಟಿಗೂ ಅಧಿಕವಾಗಿವೆ. ಲಕ್ಸುರಿ ಕಾರುಗಳು, ಚೆನ್ನೈನ ನೀಲಂಕರೈನಲ್ಲಿರೋ ಭವ್ಯ ಬಂಗಲೆ ಅವರ ವೈಭೋಗಕ್ಕೆ ಸಾಕ್ಷಿಯಾಗಿದೆ. ಒಬ್ಬ ಸಾಮಾನ್ಯ ನಟನಾಗಿ ಶುರುಮಾಡಿ, ಇಂದು ನೂರಾರು ಕೋಟಿ ಸಂಪಾದಿಸಿ, ಈಗ ಇಡೀ ರಾಜ್ಯವನ್ನೇ ಆಳುವ ಮಟ್ಟಕ್ಕೆ ಬೆಳೆದಿರೋದು ನಿಜಕ್ಕೂ ಕುತೂಹಲಕಾರಿ.