newsics.com/ನ್ಯೂಸಿಕ್ಸ್
ದಕ್ಷಿಣ ಕರ್ನಾಟಕದ ಐದು ಜಿಲ್ಲೆಗಳ ಶ್ರೀವಾರಿ ಭಕ್ತರಿಗಾಗಿ ಚಾಮರಾಜನಗರದಿಂದ ತಿರುಪತಿಗೆ ನೇರ ರೈಲು ಸೇವೆ ಲಭ್ಯವಿದೆ. ಈ ರೈಲು ಪ್ರತಿದಿನ ಸಂಚರಿಸಲಿದ್ದು, ಸುಮಾರು 12 ಗಂಟೆಗಳಲ್ಲಿ ತಿರುಪತಿ ತಲುಪುತ್ತದೆ ಮತ್ತು ರಾಜ್ಯದ 20 ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲುತ್ತದೆ.
https://youtube.com/shorts/1MGAmJmhYq0?si=nMc-nPA4I0KAHwKo
ಚಾಮರಾಜನಗರದಿಂದ ಮಧ್ಯಾಹ್ನ 3.50ಕ್ಕೆ ಪ್ರಯಾಣ ಆರಂಭಿಸಿ, ಮರದಿನ ಬೆಳಗಿನ ಜಾವ 4 ಗಂಟೆ 5 ನಿಮಿಷಕ್ಕೆ ತಲುಪಲಿದೆ. ಈ ರೈಲು ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ. 5 ಜಿಲ್ಲೆಯ ಬಾಲಾಜಿಯ ಭಕ್ತರು ನೇರವಾಗಿ ಈ ರೈಲಿನ ಮೂಲಕ ತಿರುಪತಿಗೆ ತೆರಳಬಹುದಾಗಿದೆ. ರಾತ್ರಿ 8 ಗಂಟೆ 10 ನಿಮಿಷಕ್ಕೆ KSR ಬೆಂಗಳೂರಿನಲ್ಲಿರಲಿದೆ.
ಚಾಮರಾಜನಗರ, ನಂಜನಗೂಡು, ಅಶೋಕಪುರಂ, ಚಾಮರಾಜಪುರಂ, ಮೈಸೂರು, ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ, ನಾಯಂಡಹಳ್ಳಿ, ಕೆಎಸ್‌ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಕೆಆರ್ ಪುರಂ, ವೈಟ್‌ಫೀಲ್ಡ್, ಮಾಲೂರು, ತಯ್ಯಕಲ್, ಬಂಗಾರಪೇಟೆ, ಕಾಮಸಮುದ್ರಂ
ಪ್ರತಿದಿನ ತಿರುಪತಿ ನಿಲ್ದಾಣದಿಂದ ರಾತ್ರಿ 9.40ಕ್ಕೆ ತನ್ನ ಪ್ರಯಾಣ ಆರಂಭಿಸುತ್ತದೆ. ಮರುದಿನ ಬೆಳಗ್ಗೆ 9.20ಕ್ಕೆ ಅಂತಿಮ ನಿಲ್ದಾಣವನ್ನು ಚಾಮರಾಜನಗರವನ್ನು ತಲುಪುತ್ತದೆ.
https://www.newsics.com/2026/05/04/rbi-gives-shock-to-borrowers-new-rules-implemented/