newsics.com/ನ್ಯೂಸಿಕ್ಸ್
ತಮಿಳು ಚಿತ್ರರಂಗದ ನಟ ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಗೆಲುವು ಸಾಧಿಸಿದ್ದಾರೆ. ತಾವೇ ಸ್ಥಾಪಿಸಿದ ಟಿವಿಕೆ ಪಕ್ಷದ ಮೂಲಕ ಅವರು ಮೊದಲ ಚುನಾವಣೆಯಲ್ಲೇ ಜಯಭೇರಿ ಬಾರಿಸಿದ್ದಾರೆ. ಅವರ ಈ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಬಹುಮತಕ್ಕೆ ಅಗತ್ಯ ಇರುವುದು 118 ಸ್ಥಾನಗಳಿಗೆ ಸುಮಾರು 10-11 ಸ್ಥಾನಗಳ ಕೊರತೆ ಎದುರಾಗಬಹುದು. ವಿಜಯ್ ಅವರು ಈ ಕೊರತೆ ತುಂಬಿಕೊಂಡರೆ ಕಿಂಗ್ ಮೇಕರ್ ಬದಲು ಕಿಂಗ್ ಆಗುವ ಅವಕಾಶ ಇದೆ.
ಚುನಾವಣೆಗೆ ಮುನ್ನ ವಿಜಯ್ ತಮ್ಮ ರಾಜಕೀಯ ನಿಲುವನ್ನು ಬಹಳ ಸ್ಪಷ್ಟವಾಗಿ ಬಹಿರಂಗಪಡಿಸಿದ್ದರು. ಡಿಎಂಕೆ ಪಕ್ಷ ತನ್ನ ರಾಜಕೀಯ ವಿರೋಧಿ, ಬಿಜೆಪಿ ತನ್ನ ಸೈದ್ಧಾಂತಿಕ ವಿರೋಧಿ ಎಂದು ವಿಜಯ್ ಹೇಳಿದ್ದರು. ಬಿಜೆಪಿಯ ಹಲವು ವಿಚಾರಗಳನ್ನು ಅವರು ವಿರೋಧಿಸಿದ್ದಿದೆ. ಅವರ ಕೊನೆಯ ಸಿನಿಮಾ ಜನನಾಯಗನ್ ಬಿಡುಗಡೆಗೆ ಕೇಂದ್ರದ ಬಿಜೆಪಿ ತಡೆಗಲ್ಲು ಹಾಕಲು ಯತ್ನಿಸಿತು ಎನ್ನುವ ಅಸಮಾಧಾನವೂ ಅವರಿಗಿದೆ. ಹೀಗಾಗಿ, ಬಿಜೆಪಿ ಜೊತೆ ಅವರು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ.
ಹಾಗಾದರೆ, ವಿಜಯ್ ಅವರ ಟಿವಿಕೆ ಪಕ್ಷದ ಮುಂದಿರುವ ಆಯ್ಕೆಗಳೇನು? ಟಿವಿಕೆಗೆ ಬೆಂಬಲ ಕೊಡಬಹುದಾದ ಇತರ ಪಕ್ಷಗಳ್ಯಾವುವು? ಡಿಎಂಕೆ ಜೊತೆ ಮೈತ್ರಿ ಹೊಂದಿರುವ ಇತರ ಪಕ್ಷಗಳು, ಹಾಗೂ ಬಿಜೆಪಿ ಹೊರತಾದ ಎನ್ಡಿಎ ಮಿತ್ರ ಪಕ್ಷಗಳು ಈಗ ವಿಜಯ್ ಅವರಿಗಿರುವ ಆಯ್ಕೆಗಳಾಗಿವೆ.