newsics.com/ನ್ಯೂಸಿಕ್ಸ್
ಎವೆಲಿನ್ ಶರ್ಮಾ ತಮ್ಮ ಪತಿ ತುಶಾನ್ ಭಿಂಡಿಯಿಂದ ವಿಚ್ಛೇದನ ಪಡೆದಿರುವುದನ್ನು ಖಚಿತಪಡಿಸಿದ್ದಾರೆ. ಇದು ಪರಸ್ಪರ ಸಮ್ಮತಿಯ ನಿರ್ಧಾರವಾಗಿದ್ದು, ಐದು ವರ್ಷಗಳ ವೈವಾಹಿಕ ಜೀವನಕ್ಕೆ ವಿದಾಯ ಹೇಳಿದ್ದಾರೆ.
https://youtube.com/shorts/xzgXqaAsbcA?si=TkhVxPE1WLxdWyg8
ಕಳೆದ ಕೆಲವು ಸಮಯದಿಂದ ಇವರ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ಸ್ವತಃ ಎವೆಲಿನ್ ಶರ್ಮಾ ಅವರೇ ವಿಚ್ಛೇದನದ ಬಗ್ಗೆ ಮಾಹಿತಿ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಎವೆಲಿನ್ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡುತ್ತಾ, ಇದು ನಮ್ಮ ಒಮ್ಮತದ ನಿರ್ಧಾರವಾಗಿದೆ, ಇಬ್ಬರೂ ಗೌರವಪೂರ್ವಕವಾಗಿ ತಮ್ಮ ಜೀವನದ ಹೊಸ ಹಾದಿಯನ್ನು ಹಿಡಿಯಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ನಾವು ಬೇರೆಯಾಗುತ್ತಿದ್ದರೂ, ನಮ್ಮ ಮಕ್ಕಳ ಭವಿಷ್ಯಕ್ಕೆ ಒಟ್ಟಾಗಿ ಜವಾಬ್ದಾರಿಯಾಗಿ ನಿಲ್ಲುವೆವು ಎಂದು ಅವರು ತಿಳಿಸಿದ್ದಾರೆ.
ಜೊತೆಗೆ ಈ ಹೊಸ ಅಧ್ಯಾಯವನ್ನು ಸ್ನೇಹ, ಪರಸ್ಪರ ಗೌರವ ಮತ್ತು ಮಕ್ಕಳ ಸಹ-ಪೋಷಣೆಯ ಆಧಾರದ ಮೇಲೆ ಕಟ್ಟಿಕೊಳ್ಳುತ್ತಿದ್ದೇವೆ ಎಂದು ನಟಿ ಹೇಳಿದ್ದಾರೆ. ಹಾಗೆಯೇ ತಮ್ಮ ಖಾಸಗಿತನವನ್ನು ಗೌರವಿಸಲು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಇದೀಗ ವಿಚ್ಛೇದನ ಘೋಷಿಸಿರುವ ಎವೆಲಿನ್ ಶರ್ಮಾ ತಮ್ಮ ಮುಂದಿನ ಹಾದಿಯನ್ನು ಪರಿಪಕ್ವವಾಗಿ ಕಾಣುತ್ತಿದ್ದಾರೆ. ಮಕ್ಕಳು ಮೊದಲ ಆದ್ಯತೆ ಎಂದು ಹೇಳಿದ ಅವರು, ತಮ್ಮ ಜೀವನದ ಹೊಸ ಅಧ್ಯಾಯವನ್ನು ಶಾಂತಿ, ಗೌರವ ಮತ್ತು ಸ್ಥಿರತೆಯೊಂದಿಗೆ ಆರಂಭಿಸುತ್ತಿದ್ದಾರೆ. ಬಾಲಿವುಡ್‌ಗೆ ಮತ್ತೆ ಮರಳುವಿರಾ ಎಂಬ ಪ್ರಶ್ನೆಗೆ ಅವರು ಇದೀಗ ಸ್ಪಷ್ಟ ಉತ್ತರ ನೀಡದಿದ್ದರೂ, ಅಭಿಮಾನಿಗಳು ಅವರ ರೀ ಎಂಟ್ರಿಗಾಗಿ ಕಾಯುತ್ತಿದ್ದಾರೆ.
ಎವ್ಲಿನ್, ಬಳಿಕ ಪ್ರಭಾಸ್ ನಟನೆಯ ಸಾಹೋ ಚಿತ್ರದಲ್ಲಿ ಕಾಣಿಸಿದ್ದರು. ಈ ಸಿನಿಮಾದ ಬಳಿಕ ಎವ್ಲಿನ್ ಸಿನಿಮಾ ರಂಗದಿಂದ ದೂರ ಉಳಿದರು.
https://www.newsics.com/2026/05/02/shilpa-shetty-suffers-serious-injury-broken-leg/