newsics.com/ನ್ಯೂಸಿಕ್ಸ್
ಯಾವುದೇ ಪ್ರೊಮೋಷನ್ ಇಲ್ಲದೇ, ಪ್ರೀಮಿಯರ್ ಶೋಗಳನ್ನು ಮಾಡಿ, ದುಡ್ಡು ಕೊಟ್ಟು ನೋಡಿದ ಜನರ ಬಾಯಿ ಮಾತಿನಿಂದಲೇ ರಾಜ್ಯಾದ್ಯಂತ ಹೌಸು ಫುಲ್ ಪ್ರಮೋಷನ್ ಪಡೆದಿರುವಂತಹ ಚಿತ್ರ ಅಂದರೆ ಅದು SU from SO ಚಿತ್ರ. ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅದೊಂದು ದಾಖಲೆ ಬರೆದಿತ್ತು.
https://youtube.com/shorts/A7gPa–K6QY?si=UClQxtCV5fiwGWUd
ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸಿತ್ತು. ಅದರಲ್ಲಿ ರವಿಯಣ್ಣ ಪಾತ್ರ ಕನ್ನಡಿಗರ ಮನಸ್ಸು ಗೆದ್ದಿತ್ತು. ಈ ಪಾತ್ರದಲ್ಲಿ ಶನೀಲ್ ಗೌತಮ್ ನಟಿಸಿದ್ದರು.ರವಿಯಣ್ಣ ಪಾತ್ರ ಕನ್ನಡಿಗರ ಮನಸ್ಸು ಗೆದ್ದಿತ್ತು. ಈ ಪಾತ್ರದಲ್ಲಿ ಶನೀಲ್ ಗೌತಮ್ ನಟಿಸಿದ್ದರು. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ರೈಟರ್ ಆಗಿ ಗುರುತಿಸಿಕೊಂಡಿರುವ ಶನೀಲ್ ಗೌತಮ್ ‘ಸು ಫ್ರಮ್ ಸೋ’ ಸಿನಿಮಾ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದರು.
ಇದೀಗ ‘ಸು ಫ್ರಮ್ ಸೋ’ ಬಳಿಕ ರಾಜ್ ಬಿ ಶೆಟ್ಟಿ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಸಿನಿಮಾಗೆ ಶನೀಲ್ ಗೌತಮ್ ಹೀರೋ. ಹೀಗಾಗಲೇ ಸಿನಿಮಾ ಕಥೆ ಎಲ್ಲಾ ಲಾಕ್ ಆಗಿ, ಶೂಟಿಂಗ್ ಕೂಡ ಶುರುವಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಬಾರಿ ರಾಜ್ ಬಿ ಶೆಟ್ಟಿಗೆ ನಿರ್ಮಾಪಕ ಗಂಗಾಧರ್ ಸಾಥ್ ನೀಡಿದ್ದು, ಈಗಾಗಲೇ ಮಂಗಳೂರು ಭಾಗದಲ್ಲಿ ಸಿನಿಮಾದಲ್ಲಿ 10 ದಿನಗಳ ಕಾಲ ಶೂಟಿಂಗ್ ಕೂಡ ನಡೆದಿದೆ ಅನ್ನೋ ಮಾತು ಹೇಳಿ ಬರುತ್ತಿದೆ. ಒಟ್ಟು 45 ದಿನಗಳ ಪ್ರಾಜೆಕ್ಟ್ ಇದು ಎನ್ನಲಾಗಿದೆ.
ರವಿಯಣ್ಣನಾಗಿ ಫೇಮಸ್ ಆಗಿರುವ ಶನೀಲ್ ಗೌತಮ್‌ಗೆ ಒಳ್ಳೊಳ್ಳೆ ಆಫರ್‌ಗಳು ಬರುತ್ತಿವೆ. ಅದರಲ್ಲಿ ರಾಜ್ ಬಿ ಶೆಟ್ಟಿ ಹಾಗೂ ಗಂಗಾಧರ್ ನಿರ್ಮಾಣ ಮಾಡುತ್ತಿರುವ ಸಿನಿಮಾ ಕೂಡ ಒಂದು. ಈಗಾಗಲೇ ಶನೀಲ್ ಗೌತಮ್ ಕೂಡ ಮಾಧ್ಯಮಗಳಿಗೆ ಕನ್ಫರ್ಮ್ ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾಗೆ ಟೈಟಲ್ ಕೂಡ ಫಿಕ್ಸ್ ಮಾಡಲಾಗಿದ್ಯಂತೆ. ‘ಶ್ರೀರಾಮ-ಚಂದ್ರ’ ಎಂದು ಶೀರ್ಷಿಕೆ ಇಡಲಾಗಿದೆ ಎಂದು ಗಾಂಧಿನಗರದಲ್ಲಿ ಸುದ್ದಿ ಹಬ್ಬಿದೆ.
ಕಳೆದ ವರ್ಷ ರಿಲೀಸ್ ಆಗಿದ್ದ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ‘ಫಾರೆಸ್ಟ್’ಗೆ ಆಕ್ಷನ್ ಕಟ್ ಹೇಳಿದ್ದ ಚಂದ್ರ ಮೋಹನ್ ಈ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ಈ ಸಿನಿಮಾದ ಟೈಟಲ್ ಬಗ್ಗೆ ಶನೀಲ್ ಗೌತಮ್ ಆಗಲಿ, ರಾಜ್ ಬಿ ಶೆಟ್ಟಿ ಆಗಲಿ ಇಲ್ಲಾ ಸಿನಿಮಾ ತಂಡವಾಗಲಿ ಸುಳಿವನ್ನು ಬಿಟ್ಟು ಕೊಟ್ಟಿಲ್ಲ.
https://www.newsics.com/2026/04/29/birur-psis-wife-commits-suicide/