Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ನಟಿ ದುರ್ಗಶ್ರೀ ಐಸಿಯುಗೆ ಶಿಫ್ಟ್​; ಆಗಿದ್ದೇನು?
ಪ್ರಮುಖಮನರಂಜನೆ

ನಟಿ ದುರ್ಗಶ್ರೀ ಐಸಿಯುಗೆ ಶಿಫ್ಟ್​; ಆಗಿದ್ದೇನು?

Share
2 Min Read
SHARE

newsics.com/ನ್ಯೂಸಿಕ್ಸ್

ಕಲರ್ಸ್ ಕನ್ನಡದ ‘ವಧು’ ಸೀರಿಯಲ್​ನಲ್ಲಿ ಈ ಪಾತ್ರ ಮಾಡುವ ಮೂಲಕ ಜನಮನ ಗೆದ್ದಿರೋ ನಟಿ ದುರ್ಗಶ್ರೀ ಸದ್ಯ ತೆಲುಗು ಸೀರಿಯಲ್​ನಲ್ಲಿ ಬಿಜಿ ಇದ್ದರು. ಆದರೆ ಏಕಾಏಕಿ ನಟಿ ಸೀರಿಯಲ್​ನಿಂದ ಹೊರಬಂದು ಅಚ್ಚರಿ ಮೂಡಿಸಿದ್ದರು. ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಡಿಯೋ ಶೇರ್​ ಮಾಡಿ ಅಭಿಮಾನಿಗಳನ್ನು ದಂಗು ಬಡಿಸಿದ್ದರು.

ಅಷ್ಟಕ್ಕೂ ನಟಿ ದುರ್ಗಶ್ರೀ ವಧು ಸೀರಿಯಲ್​ಗೂ ಮುನ್ನ ಉದಯ ಟಿವಿಯ ಜನಪ್ರಿಯ ಧಾರಾವಾಹಿ ‘ನೇತ್ರಾವತಿ’ ಕನ್ನಡಕ್ಕೆ ಪರಿಚಿತರಾದವರು. ತೆಲುಗುವಿನಲ್ಲಿಯೂ ಇವರು ಫೇಮಸ್​ ನಟಿ. ‘ಅರ್ಧಾಂಗಿ’, ‘ಮಧುರಾ ನಗರಿಯಲೋ’ ಸೀರಿಯಲ್‌ಗಳಲ್ಲಿ ನಟಿಸಿದ್ದದಾರೆ. ‘ಸಂಧ್ಯಾರಾಗಂ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ದುರ್ಗಶ್ರೀ ಮಾಡುತ್ತಿದ್ದರು. ಆದರೆ, ಅಲ್ಲಿಂದ ಹೊರನಡೆದರು.

ನಟಿಗೆ ಏನಾಯ್ತು ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಕೊನೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದು ಕೇಳಿ ಮತ್ತಷ್ಟು ಶಾಕ್​ಗೆ ಒಳಗಾಗಿದ್ದರು. ಇದೀಗ ಆ ವಿಷಯವನ್ನು ಸೋಷಿಯಲ್​ ಮೀಡಿಯಾದಲ್ಲಿ ನಟಿ ಶೇರ್​ ಮಾಡಿಕೊಂಡಿದ್ದಾರೆ. ಗರ್ಭಾಶಯದಲ್ಲಿ ಸಿಸ್ಟ್  ಕಾಣಿಸಿಕೊಂಡಿದ್ದರಿಂದ ತುರ್ತಾಗಿ ಆಪರೇಷನ್​ ಅಗತ್ಯವಿತ್ತು. ಈ ಕಾರಣದಿಂದ ಸೀರಿಯಲ್​​ ಬಿಟ್ಟು ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದೆ ಎಂದಿದ್ದಾರೆ.

ವಿಡಿಯೋದಲ್ಲಿ ನಟಿ, ಸಂಧ್ಯಾರಾಗಂ ಸೀರಿಯಲ್​ ಆರಂಭವಾಗಿ ಒಂದು ವರ್ಷವಾಯ್ತು. ಈ ಸೀರಿಯಲ್​ನಲ್ಲಿ ಜನ ನನ್ನನ್ನು ತುಂಬಾ ಇಷ್ಟಪಟ್ಟಿದ್ದರು. ಆದರೆ ನಾನು ಹೊರಬರಬೇಕಾಯ್ತು. ಹಲವಾರು ಅಭಿಮಾನಿಗಳು ಈ ಬಗ್ಗೆ ನನ್ನನ್ನು ಪ್ರಶ್ನಿಸಿದ್ದರು. ಆದರೆ ಅವರಿಗೆ ಉತ್ತರಿಸುವ ಅವಕಾಶ ನನಗೆ ಸಿಕ್ಕಿರಲಿಲ್ಲ. ಇದಕ್ಕಾಗಿ ತುಂಬಾ ಮಂದಿ ಬೇಸರ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಈಗ ವಿಡಿಯೋ ಮೂಲಕ ವಿಷಯ ತಿಳಿಸುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ.

ಅಷ್ಟಕ್ಕೂ ಸಂಧ್ಯಾರಾಗಂ ನನ್ನ ಕನಸಿನ ಪ್ರಾಜೆಕ್ಟ್ ಆಗಿತ್ತು. ಇಲ್ಲಿ ಛಾನ್ಸ್​ ಸಿಕ್ಕಾಗ ಕುಣಿದಾಡಿದ್ದೆ. ಆದರೆ ನನ್ನ ಆರೋಗ್ಯ ಕೈಕೊಟ್ಟಿತು. ಆದ್ದರಿಂದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಹೈದರಾಬಾದ್‌ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದ ತಕ್ಷಣ ಆರೋಗ್ಯ ತೀವ್ರವಾಗಿ ಕ್ಷೀಣಿಸಿತು ಎಂದಿದ್ದಾರೆ.

ಆಗ ತುರ್ತಾಗಿ ಅಡ್ಮಿಟ್​ ಆಗಲೇಬೇಕಾಯಿತು. ವೈದ್ಯರು ನನ್ನನ್ನು ಐಸಿಯುಗೆ ಶಿಫ್ಟ್ ಮಾಡಿದರು. ನಂತರ ಗರ್ಭಾಶಯದಲ್ಲಿ ಸಿಸ್ಟ್ ಇರುವುದು ತಿಳಿದು ಆಪರೇಷನ್​ ಮಾಡಬೇಕಾಯ್ತು. ಆದ್ದರಿಂದ ಆ ಸಮಯದಲ್ಲಿ ಈ ವಿಷಯವನ್ನು ಯಾರಿಗೂ ಹೇಳಲು ಆಗಲಿಲ್ಲ. ಆಪರೇಷನ್ ನಂತರ ಸುಮಾರು ಒಂದೂವರೆ ತಿಂಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್‌ನಲ್ಲಿ ಇದ್ದೆ. ಈಗ ವಿಷಯ ತಿಳಿಸುತ್ತಿದ್ದೇನೆ ಎಂದಿದ್ದಾರೆ.

ಮೇ 2026 ರಲ್ಲಿ ಈ 13 ದಿನಗಳು ಬ್ಯಾಂಕ್ ರಜೆ

TAGGED:Actress Durgasree shifted to ICU; What happened?
Share This Article
Facebook Twitter Copy Link Print
Previous Article ಮೇ 2026 ರಲ್ಲಿ ಈ 13 ದಿನಗಳು ಬ್ಯಾಂಕ್ ರಜೆ
Next Article ಭಾಷಣ ಅರ್ಧಕ್ಕೆ ನಿಲ್ಲಿಸಿ ಸಿಎಂ ಮಮತಾ ಹೋಗಿದ್ಯಾಕೇ?

Popular Posts

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

You Might Also Like

ವಿದೇಶಮನರಂಜನೆ

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?