newsics.com/ನ್ಯೂಸಿಕ್ಸ್
ನವದೆಹಲಿ: ಭಾರತದಲ್ಲಿ ಹೀಟ್ ವೇವ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಗತ್ತಿನ ಹೆಚ್ಚು ತಾಪಮಾನ ಹೊಂದಿದ 100 ನಗರಗಳ ಪೈಕಿ 98 ನಗರಗಳು ನಮ್ಮ ದೇಶದಲ್ಲಿಯೇ ಇವೆ.ಅಂದಹಾಗೆ, ಈ 95ರಲ್ಲಿ ಕರ್ನಾಟಕದಲ್ಲೂ 3 ಹಾಟ್ಸ್ಪಾಟ್ಗಳಿವೆ. ರಿಯಲ್ ಟೈಮ್ ಗ್ಲೋಬಲ್ ಟೆಂಪರೇಚರ್ ಅಂಕಿಅಂಶಗಳ ಪ್ರಕಾರ, ಏಪ್ರಿಲ್ ಅಂತ್ಯಕ್ಕೆ ಭಾರತವು ಜಗತ್ತಿನ ‘ಹಾಟ್ ಸೆಂಟರ್’ ಆಗಿ ಬದಲಾಗಿದೆ.
https://youtube.com/shorts/eOoYZp9a9F0?si=CP6V90gKWCTFTFCS
ವಿಶ್ವದ ಅತ್ಯಂತ ಬಿಸಿಯಾದ 100 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೂರು ಜಿಲ್ಲೆಗಳು ಸ್ಥಾನ ಪಡೆದಿದೆ. ಇದು ರಾಜ್ಯದಲ್ಲಿ ತಾಪಮಾನ ಏರುತ್ತಿರುವುದಕ್ಕೆ ಸಾಕ್ಷಿಯಾಗಿದೆ
Ll
ರಾಯಚೂರು: ಜಗತ್ತಿನಲ್ಲೇ 54ನೇ ಸ್ಥಾನ
ಬಾಗಲಕೋಟೆ: ಜಗತ್ತಿನಲ್ಲೇ 74ನೇ ಸ್ಥಾನ
ಯಾದಗಿರಿ: ಜಗತ್ತಿನಲ್ಲೇ 88ನೇ ಸ್ಥಾನ
ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಸೂರ್ಯನ ಪ್ರತಾಪ ಅತಿಯಾಗಿದ್ದು, ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುವ ನಗರಗಳಲ್ಲಿ ಉತ್ತರ ಪ್ರದೇಶದ ಒರೈ ಮತ್ತು ಔರೈಯಾ, ರಾಜಸ್ಥಾನದ ಜೈಸಲ್ಮೇರ್ ಮತ್ತು ಫಲೋಡಿ ಸೇರಿವೆ.
ಹೆಚ್ಚುತ್ತಿರುವ ತಾಪಮಾನದ ಮಧ್ಯೆ ಬಿಸಿಲು ಮಾತ್ರವಲ್ಲದೆ, ವಾಯು ಗುಣಮಟ್ಟವೂ ಕಳಪೆ ಮಟ್ಟಕ್ಕೆ ಕುಸಿದಿರುವುದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.