Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Mangli Remuneration ಮಂಗ್ಲಿ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು?
ದೇಶಪ್ರಮುಖಮನರಂಜನೆ

Mangli Remuneration ಮಂಗ್ಲಿ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು?

Share
2 Min Read
SHARE

newsics.com/ನ್ಯೂಸಿಕ್ಸ್

ಪ್ಯಾನ್​ ಇಂಡಿಯಾ ಪುಷ್ಪ 2 ಚಿತ್ರದ ಹೂ ಅಂತೀಯಾ, ಕನ್ನಡದ ವೇದ ಚಿತ್ರದ ಗಿಲ್ಲಕ್ಕೋ ಶಿವ, ಕಾಟೇರ ಸಿನಿಮಾದ ಪಸಂದಾಗವ್ನೆ ಸೇರಿ ಹಲವು ಹಿಟ್​ ಹಾಡುಗಳಿಗೆ ಧ್ವನಿಯಾಗಿರುವ ಹೆಗ್ಗಳಿಕೆ ತೆಲುಗು ಗಾಯಕಿ ಮಂಗ್ಲಿಗೆ ಸಲ್ಲುತ್ತದೆ. ಹೀಗಾಗಿಯೇ ಅವರಿಗೆ ತೆಲುಗು ರಾಜ್ಯಗಳಲ್ಲಿರುಷ್ಟೇ ಅಭಿಮಾನಿಗಳು ಕರ್ನಾಟಕದಲ್ಲೂ ಇದ್ದಾರೆ. ಇಂತಹ ಮಂಗ್ಲಿಗೆ ಇದೀಗ ಮೈಕ್ರೋ ಫೈನಾನ್ಸ್​ ವಿವಾದವೊಂದು ಸುತ್ತಿಕೊಂಡಿದೆ. ಸುಬ್ಬರಾವ್​ ಎಂಬ ವಕೀಲರೊಬ್ಬರು ಪಂಜಗುಟ್ಟ ಪೊಲೀಸ್​ ಠಾಣೆಯಲ್ಲಿ ಮೈಕ್ರೋ ಫೈನಾನ್ಸ್​ ಸ್ಕೀಮ್​ ಹೆಸರಿನಲ್ಲಿ ಮಂಗ್ಲಿ ತಮಗೆ ₹10 ಕೋಟಿ ವಂಚಿಸಿದ್ದಾರೆಂದು ಗಾಯಕಿಯ ವಿರುದ್ಧ ದೂರು ದಾಖಲಿಸಿದ್ದಾರೆ.

https://youtube.com/shorts/eOoYZp9a9F0?si=CP6V90gKWCTFTFCS

ಈ ದೂರಿನ ಬಗ್ಗೆ ಗಾಯಕಿ ಮಂಗ್ಲಿ ಪ್ರತಿಕ್ರಿಯಿಸಿದ್ದಾರೆ. ಮೈಕ್ರೋ ಫೈನಾನ್ಸ್ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತನಗೆ ಹಣದ ಆಸೆ ಇಲ್ಲ, ಹಾಡುಗಳೇ ತನ್ನ ಜಗತ್ತು ಎಂದಿದ್ದಾರೆ. ಈ ಪ್ರಕರಣದಲ್ಲಿ ತನ್ನ ಸಹೋದರನ ಪಾತ್ರವೂ ಇಲ್ಲ. ವಕೀಲ ಸುಬ್ಬು ಪ್ರಚಾರಕ್ಕಾಗಿ ಮತ್ತು ಬಿಗ್ ಬಾಸ್‌ಗೆ ಹೋಗುವ ಉದ್ದೇಶದಿಂದ ತನ್ನ ಮೇಲೆ ಕೇಸ್ ಹಾಕಿದ್ದಾರೆ ಎಂದು ಮಂಗ್ಲಿ ಹೇಳಿದ್ದಾರೆ. ‘

ಮಂಗ್ಲಿ ಎನ್ನುವುದು ಅವರ ಅಜ್ಜಿಯ ಹೆಸರು. ಸತ್ಯವತಿ ಆಗಿದ್ದವರು ಮಂಗ್ಲಿ ಎಂದು ಹೆಸರು ಬದಲಿಸಿಕೊಂಡು ಕಿರುತೆರೆ ನಿರೂಪಕಿ ಆಗಿದ್ದರು. ಮುಂದೆ ಅದೇ ಹೆಸರಿನಲ್ಲಿ ಜನಪ್ರಿಯರಾದರು. ಆರಂಭದ ದಿನಗಳಲ್ಲಿ ಹಾಡೊಂದಕ್ಕೆ 10ರಿಂದ 20 ಸಾವಿರ ಸಂಭಾವನೆ ಪಡೆಯುತ್ತಿದ್ದ ಮಂಗ್ಲಿ ಜನಪ್ರಿಯತೆ ಹೆಚ್ಚಿದಂತೆ ಸಂಭಾವನೆ ಹೆಚ್ಚಿಸಿಕೊಂಡರು.

ಅವರು ಒಂದು ಸಿನಿಮಾ ಹಾಡಿಗೆ 2 ಲಕ್ಷದಿಂದ 3 ಲಕ್ಷ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ. ಮಂಗ್ಲಿ ಹಾಡಿದರೆ ಹಾಡು ಹಿಟ್ ಆಗುತ್ತದೆ ಎಂಬ ನಂಬಿಕೆಯಿಂದ ನಿರ್ಮಾಪಕರು ಇಷ್ಟು ದೊಡ್ಡ ಮೊತ್ತವನ್ನು ನೀಡಲು ಹಿಂಜರಿಯುವುದಿಲ್ಲ. ದೊಡ್ಡ ಸಿನಿಮಾಗಳಾದರೆ ಈ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಿನಿಮಾ ಹಾಡುಗಳಿಗಿಂತ ಹೆಚ್ಚಾಗಿ ಮಂಗ್ಲಿ ಸ್ಟೇಜ್ ಶೋ ಮತ್ತು ಲೈವ್ ಪರ್ಫಾರ್ಮೆನ್ಸ್‌ಗಳಿಂದ ಹೆಚ್ಚು ಸಂಪಾದಿಸುತ್ತಾರೆ. ವಿದೇಶಗಳಲ್ಲಿ ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಒಂದು ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಬೇಡಿಕೆ ಇಡುತ್ತಾರೆ ಎನ್ನಲಾಗಿದೆ.

 

ಅವರ ಹಾಡುವ ಶೈಲಿ ಮತ್ತು ವೇದಿಕೆಯ ಮೇಲಿನ ಅವರ ಎನರ್ಜಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದೇ ಇದಕ್ಕೆ ಮುಖ್ಯ ಕಾರಣ. ಮಂಗ್ಲಿ ಕೇವಲ ಸಿನಿಮಾಗಳಿಗೆ ಸೀಮಿತವಾಗದೆ, ಸ್ವಂತ ಖಾಸಗಿ ಆಲ್ಬಂಗಳನ್ನು ಮಾಡುತ್ತಾರೆ. ವಿಶೇಷವಾಗಿ ಬೊನಾಲು, ಗಣೇಶ ಹಬ್ಬ ಮತ್ತು ಸಂಕ್ರಾಂತಿ ಹಬ್ಬಗಳ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡುವ ಹಾಡುಗಳು ಕೋಟ್ಯಂತರ ವೀಕ್ಷಣೆಗಳನ್ನು ಪಡೆಯುತ್ತವೆ. ಇದರ ಮೂಲಕ ಬರುವ ಯೂಟ್ಯೂಬ್ ಆದಾಯ ಮತ್ತು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ಮಂಗ್ಲಿ ಭಾರಿ ಹಣ ಸಂಪಾದಿಸುತ್ತಾರೆ. ಹೀಗೆ ನಾಲ್ಕೈದು ಮೂಲಗಳಿಂದ ಮಂಗ್ಲಿ ಆದಾಯ ಗಳಿಸುತ್ತಿದ್ದಾರೆ. ಈಗ ಅವರ ಆದಾಯ ಸ್ಟಾರ್ ಗಾಯಕರನ್ನೂ ಮೀರಿಸಿದೆ ಎಂಬುದು ವಿಶೇಷ.

https://www.newsics.com/2026/04/27/gruk-ai-voted-for-modi-instead-of-rahul/

TAGGED:How much does Mangli get paid for a song?
Share This Article
Facebook Twitter Copy Link Print
Previous Article ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೋಕ್ ಎಐ
Next Article Rain Alert ಮುಂದಿನ ಎರಡು ದಿನ ರಾಜ್ಯದಲ್ಲಿ ಮಳೆ : 17 ಜಿಲ್ಲೆಗಳಿಗೆ ಅಲರ್ಟ್

Popular Posts

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

You Might Also Like

ದೇಶಪ್ರಮುಖ

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read
ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?