ರಾಜ್ಯದಲ್ಲಿ ಬಿಸಿಲಾಘಾತಕ್ಕೆ ಎರಡನೇ ಬಲಿಯಾಗಿದೆ. ಬೆಳಗಾವಿ ಜಿಲ್ಲೆ ರಾಯಭಾಗ ಪಟ್ಟಣದ ನಿವಾಸಿ ವೆಂಕಟೇಶ್ ಬಳ್ಳಾರಿ(35) ಮೃತಪಟ್ಟವರು ಎಂದು ಹೇಳಲಾಗಿದೆ.
ವೆಂಕಟೇಶ್ ಬಳ್ಳಾರಿ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಏಪ್ರಿಲ್ 21ರಂದು ಬಸವೇಶ್ವರ ಜಯಂತಿಯ ಸಂದರ್ಭದಲ್ಲಿ ಮೆರವಣಿಗೆ ವೇಳೆ ತಲೆ ತಿರುಗಿ ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವೆಂಕಟೇಶ್ ಅವರು ಬಿಸಿಲಿನ ತಾಪ ತಾಳದೆ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಬೀದರ್ ಜಿಲ್ಲೆಯ ಕಮಲನಗರದಲ್ಲಿ 20 ವರ್ಷದ ಯುವಕ ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್, ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ದರ್ಶನ್ ಹೆಸರನ್ನು ದುರ್ಬಳಕೆ ಮಾಡಿಕೊಂಡ ವಂಚಕ ಮಲ್ಲು ನಂಬಿ ಮೋಸ ಹೋಗಬೇಡಿ: ದಿನಕರ್ ತೂಗುದೀಪ