https://youtube.com/shorts/U8nUEfM6Yjc?si=6fq3EiIID4lUG0c4
newsics.com
ಪುನೀತ್ ರಾಜ್‌ಕುಮಾರ್ ನಟನೆಯ ‘ಬಿಂದಾಸ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದ ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಪತಿ, ಉದ್ಯಮಿ ಸೊಹೈಲ್ ಕತುರಿಯಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.
ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಮಾರ್ಚ್ 11ರಂದು ಈ ದಂಪತಿಗೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಮಂಜೂರು ಮಾಡಿದೆ. ಇದರೊಂದಿಗೆ ಸುಮಾರು ಮೂರು ವರ್ಷಗಳ ಇವರ ವೈವಾಹಿಕ ಬಾಂಧವ್ಯಕ್ಕೆ ತೆರೆ ಬಿದ್ದಿದೆ. ಈ ಬಗ್ಗೆ ಹನ್ಸಿಕಾ ಕೊನೆಗೂ ಮೌನ ಮುರಿದಿದ್ದಾರೆ.
ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ ಹನ್ಸಿಕಾ ಇಷ್ಟವಿಲ್ಲದ ಸಂಬಂಧದಲ್ಲಿ ಸಿಲುಕಿ ನೋವನ್ನು ಅನುಭವಿಸುವುದಕ್ಕಿಂತ ಸರಿಯಾದ ಸಮಯದಲ್ಲಿ ಹೊರಬರುವುದೇ ಉತ್ತಮ ಎಂದು ಹೇಳಿದ್ದಾರೆ. ಜೊತೆಗೆ ನಾವು ತಪ್ಪು ರೈಲನ್ನು ಹತ್ತಿದ್ದರೆ ಗುರಿ ತಲುಪುವವರೆಗೆ ಪ್ರಯಾಣಿಸಬೇಕೆಂಬ ನಿಯಮವಿಲ್ಲ, ಮಧ್ಯದಲ್ಲೇ ಇಳಿದು ನವ ಜೀವನ ಆರಂಭಿಸುವುದೂ ಬುದ್ಧಿವಂತಿಕೆ ಎಂದು ನಟಿ ಹೇಳಿದ್ದಾರೆ.
2026ರ ಮಾರ್ಚ್ ತಿಂಗಳಲ್ಲಿ ಹನ್ಸಿಕಾ ಮತ್ತು ಸೊಹೈಲ್ ಖತುರಿಯಾ ಅವರ ವಿಚ್ಛೇದನ ಪ್ರಕ್ರಿಯೆ ಅಧಿಕೃತವಾಗಿ ಅಂತ್ಯಗೊಂಡಿತ್ತು. ಈ ನಿರ್ಧಾರ ಬಗ್ಗೆ ಮಾತನಾಡಿದ ಅವರು, ನನ್ನ ನಿರ್ಧಾರದ ಬಗ್ಗೆ ನನಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಪ್ಪು ನಿರ್ಧಾರವನ್ನು ಮುಂದುವರಿಸುವುದಕ್ಕಿಂತ ಅದನ್ನು ಅಲ್ಲಿ ನಿಲ್ಲಿಸುವುದೇ ಉತ್ತಮ ಎಂಬ ನಂಬಿಕೆಯಲ್ಲಿ ಈ ಹೆಜ್ಜೆ ಇಟ್ಟಿದ್ದಾಗಿ ಹೇಳಿದ್ದಾರೆ.