Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಲು ಈ ಸಲಹೆಗಳನ್ನು ಪಾಲಿಸಿ
ಲೈಫ್‌ಸ್ಟೈಲ್ಆರೋಗ್ಯ

ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಲು ಈ ಸಲಹೆಗಳನ್ನು ಪಾಲಿಸಿ

Share
2 Min Read
SHARE

ನಾವು ಬೆಳಗ್ಗೆ ನಮ್ಮ ದಿನವನ್ನು ಪ್ರಾರಂಭಿಸುವ ವಿಧಾನವು ನಮ್ಮ ಇಡೀ ದಿನದ ದಿಕ್ಕನ್ನು ನಿರ್ಧರಿಸುತ್ತದೆ. ಹಾಗಾಗಿ ದಿನವನ್ನು ಧನಾತ್ಮಕ ರೀತಿಯಲ್ಲಿ ಪ್ರಾರಂಭಿಸುವುದು  ತುಂಬಾನೇ ಮುಖ್ಯ. ದಿನವನ್ನು ಸರಿಯಾಗಿ ಮತ್ತು ಧನಾತ್ಮಕವಾಗಿ ಪ್ರಾರಂಭಿಸಿದರೆ ಕೆಲಸಗಳೂ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತವೆ, ಯಶಸ್ಸಿನ ಮೆಟ್ಟಿಲನ್ನು ಕೂಡ ಸುಲಭವಾಗಿ ಏರಬಹುದು.

ದಿನವನ್ನು ಸರಿಯಾಗಿ ಮತ್ತು ಸಕಾರಾತ್ಮಕವಾಗಿ ಪ್ರಾರಂಭಿಸುವುದು ಹೇಗೆ?

ಬೆಳಗ್ಗೆ ಬೇಗ ಎದ್ದೇಳಿ: ನಿಮ್ಮ ದಿನವನ್ನು ಸಕಾರಾತ್ಮಕವಾಗಿ ಪ್ರಾರಂಭಿಸಲು ಬೆಳಗ್ಗೆ ಬೇಗನೆ ಏಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಬೆಳಗ್ಗೆ ಬೇಗನೆ ಏಳುವುದರಿಂದ ದಿನವನ್ನು ಶಾಂತವಾಗಿ ಮತ್ತು ಆತುರವಿಲ್ಲದೆ ಪ್ರಾರಂಭಿಸಬಹುದು. ಕ್ರಮೇಣ ನಿಮ್ಮ ಜಡತ್ವವೂ ದೂರವಾಗುತ್ತದೆ.

ಸಾಮಾಜಿಕ ಜಾಲತಾಣ ಮತ್ತು ಫೋನ್‌ಗಳಿಂದ ದೂರವಿರಿ: ಫೋನ್ ಬಳಸುವ ಬದಲು, ಪ್ರತಿದಿನ ನಿಮ್ಮೊಂದಿಗೆ ನೀವು ಸ್ವಲ್ಪ ಸಮಯ ಕಳೆಯಿರಿ. ಅಲ್ಲದೆ, ಸಾಮಾಜಿಕ ಮಾಧ್ಯಮದಿಂದ ದೂರವಿರಲು ಪ್ರಯತ್ನಿಸಿ, ಏಕೆಂದರೆ ಸಾಮಾಜಿಕ ಮಾಧ್ಯಮದ ಪೋಸ್ಟ್ ನಿಮ್ಮ ಮನಸ್ಥಿತಿಯನ್ನು ಯಾವಾಗ, ಹೇಗೆ ಹಾಳು ಮಾಡುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ, ಬೆಳಿಗ್ಗೆ ಎದ್ದ ನಂತರ ಫೋನ್‌ ನೋಡುತ್ತಾ ಸಮಯ ಕಳೆಯಬೇಡಿ. ಬದಲಿಗೆ ಧ್ಯಾನ ಮಾಡಿ, ವಾಕಿಂಗ್‌ ಮಾಡುತ್ತಾ ನಿಮ್ಮೊಂದಿಗೆ ನೀವು ಸಮಯ ಕಳೆಯಿರಿ. ಇದರಿಂದ ನಿಮ್ಮ ಸಂಪೂರ್ಣ ದಿನ ಸಕಾರಾತ್ಮಕವಾಗಿರುತ್ತದೆ.

ಧ್ಯಾನ ಮಾಡಿ: ದಿನವನ್ನು ಸಕಾರಾತ್ಮಕವಾಗಿ ಆರಂಭಿಸಲು ಧ್ಯಾನ ಅಥವಾ ಪ್ರಾಣಾಯಾಮವನ್ನು ಅಭ್ಯಾಸ ಮಾಡಿ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ಗಮನವನ್ನು ಸುಧಾರಿಸುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ. ಕೇವಲ 10-15 ನಿಮಿಷಗಳ ಧ್ಯಾನವು ನಿಮ್ಮ ಇಡೀ ದಿನದ ಮನಸ್ಥಿತಿಯನ್ನು ಬದಲಾಯಿಸಬಹುದು.

ವ್ಯಾಯಾಮ ಅಥವಾ ಯೋಗ ಮಾಡಿ: ಬೆಳಗಿನ ದಿನಚರಿಯಲ್ಲಿ ಲಘು ವ್ಯಾಯಾಮ, ಯೋಗ ಅಥವಾ ವಾಕಿಂಗ್‌ ಅಭ್ಯಾಸ ಮಾಡಿ. ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಲಸ್ಯವನ್ನು ನಿವಾರಿಸುತ್ತದೆ. ಮತ್ತು ನಿಮ್ಮನ್ನು ಇಡೀ ದಿನ ಚೈತನ್ಯಶೀಲರನ್ನಾಗಿರಿಸುತ್ತದೆ.

ಆರೋಗ್ಯಕರ ಉಪಹಾರ ಸೇವಿಸಿ: ಇಡೀ ದಿನ ಸಕಾರಾತ್ಮಕವಾಗಿರಲು, ಆಕ್ಟಿವ್‌ ಆಗಿರಲು ಆರೋಗ್ಯಕ ಉಪಹಾರ ಸೇವನೆ ಮಾಡುವುದು ಸಹ ಮುಖ್ಯ. ಹಾಗಾಗಿ ಮನಸ್ಸು ಮತ್ತು ದೇಹ ಎರಡಕ್ಕೂ ಸರಿಯಾದ ಶಕ್ತಿಯನ್ನು ಒದಗಿಸುವ ಆರೋಗ್ಯಕರ ಮತ್ತು ಪೌಷ್ಟಿಕ ಉಪಹಾರವನ್ನು ಸೇವನೆ ಮಾಡಿ.

ದಿನದ ಯೋಜನೆಗಳನ್ನು ಬರೆದಿಡಿ: ನಿಮ್ಮ ದಿನವನ್ನು ಯೋಜಿಸಲು ಬೆಳಿಗ್ಗೆ ಅತ್ಯುತ್ತಮ ಸಮಯ. ಯಶಸ್ವಿ ಜನರು ತಮ್ಮ ದೈನಂದಿನ ಕೆಲಸಗಳನ್ನು ಬರೆದಿಟ್ಟುಕೊಳ್ಳುತ್ತಾರೆ, ಅವುಗಳಿಗೆ ಆದ್ಯತೆ ನೀಡುತ್ತಾರೆ ಮತ್ತು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ಇಟ್ಟುಕೊಳ್ಳುತ್ತಾರೆ. ಇದು ಅವರ ಕೆಲಸದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ. ಅದೇ ರೀತಿ ನೀವು ಸಹ ಮಾಡಿ ಮುಗಿಸಬೇಕಾದ ಕೆಲಸಗಳ ಪಟ್ಟಿಯನ್ನು ಬರೆದಿಡಿ.

ಸಕಾರಾತ್ಮಕ ಚಿಂತನೆ ಮತ್ತು ಕಲಿಕೆ: ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುವ ಬದಲು ಸ್ಪೂರ್ತಿದಾಯಕ ಪುಸ್ತಕಗಳನ್ನು ಓದುವುದು, ಪಾಡ್‌ಕ್ಯಾಸ್ಟ್‌ಗಳನ್ನು ಕೇಳುವುದು ಅಥವಾ ತಮ್ಮ ಗುರಿಗಳ ಬಗ್ಗೆ ಯೋಚಿಸುವುದು ಮತ್ತು ಯೋಜಿಸುವುದರಲ್ಲಿ ಸ್ವಲ್ಪ ಸಮಯ ಕಳೆಯಿರಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

TAGGED:Follow these tips to start your day positively.
Share This Article
Facebook Twitter Copy Link Print
Previous Article ಕಾಲಿಗೆ ಬೀಳಲು ಬಂದ್ರೆ ಹೆದರಿ ಹಿಂದಕ್ಕೆ ಓಡಿದ ಸಿಎಂ ಮಮತಾ ಬ್ಯಾನರ್ಜಿ
Next Article ಮುಸ್ಲಿಂ ನಾಯಕರ ಬೆನ್ನಿಗೆ ನಿಂತ ಸತೀಶ್ ಜಾರಕಿಹೊಳಿ, ಡಿಕೆಶಿ ಭೇಟಿಯ ಗುಟ್ಟು ರಟ್ಟು

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?