Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನೇಪಾಳದ PM ಬಾಲೇಂದ್ರ ಶಾ ಸರ್ಕಾರದ ಯುವ ಸಚಿವರ ವಿದ್ಯಾರ್ಹತೆಗೆ ಜಗತ್ತೇ ಬೆರಗು
ದೇಶಪ್ರಮುಖವಿದೇಶ

ನೇಪಾಳದ PM ಬಾಲೇಂದ್ರ ಶಾ ಸರ್ಕಾರದ ಯುವ ಸಚಿವರ ವಿದ್ಯಾರ್ಹತೆಗೆ ಜಗತ್ತೇ ಬೆರಗು

Share
2 Min Read
SHARE

https://youtube.com/shorts/mbdlQ4YCz3Y?si=RXILmDB-TWH7l87U

newsics.com  

ಕಠ್ಮಂಡು: ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷ  ಗುರುವಾರ ಹಿರಿಯ ನಾಯಕ ಬಾಲೇಂದ್ರ ಶಾ  ಅವರನ್ನು ತನ್ನ ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ, ಈ ಹಿನ್ನೆಲೆ ಬಾಲೇಂದ್ರ ಶಾ ಅವರು ದೇಶದ ಹೊಸ  ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.ಆದರೆ ಇವರ ಸಂಪುಟದಲ್ಲಿ ಸಚಿವರಾದವರ ವಿದ್ಯಾರ್ಹತೆ ಕಂಡು ಇಡೀ ಜಗತ್ತೇ ಬೆರಗಾಗಿದೆ

ಇವರ ಸಂಪುಟದಲ್ಲಿರುವ 15 ಸಚಿವರು ಏನೆಲ್ಲಾ ಓದಿದ್ದಾರೆ, ಯಾವ ಪದವಿ ಪಡೆದಿದ್ದಾರೆ ಎಂಬುದು ಈಗ ಬಹು ಚರ್ಚಿತ ವಿಷಯವಾಗಿದೆ.

ಅತ್ಯಂತ ಕಿರಿಯ ವಯಸ್ಸಿನಲ್ಲೇ (35 ವರ್ಷ) ಪ್ರಧಾನಿಯಾದವರು ಎನ್ನುವ ಮೂಲಕ ಇತಿಹಾಸ ನಿರ್ಮಿಸಿರುವ ಬಾಲೇಂದ್ರ ಶಾ. ಇವರು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪದವಿಯನ್ನು ಕಠ್ಮಂಡುವಿನ ಹಿಮಾಲಯನ್‌ ವೈಟ್‌ಹೌಸ್‌ ಇಂಟರ್‌ನ್ಯಾಷನಲ್‌ ಕಾಲೇಜಿನಿಂದ ಪಡೆದಿದ್ದಾರೆ. ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂ.ಟೆಕ್. ಪದವಿಯನ್ನು 2018ರಲ್ಲಿ ಪಡೆದಿದ್ದಾರೆ.

ದೇಶದ ವಿತ್ತ ಸಚಿವರಾಗಿರುವ ಡಾ. ಸ್ವಾಮಿಮ್ ವಾಗ್ಲೆ (52) ಅವರು ಹಾರ್ವರ್ಡ್‌ನಲ್ಲಿ ಕಲಿತವರು. ಜತೆಗೆ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಹೊಂದಿದ್ದಾರೆ. ಇವರು ಈ ಸಂಪುಟದಲ್ಲಿ ಅತ್ಯಂತ ಹಿರಿಯರು.

ಗೃಹ ಸಚಿವ ಸುಡಾನ್‌ ಗುರುಂಗ್‌ (30) ಅವರು ಪ್ರೌಢಶಾಲೆಯವರೆಗೂ ವ್ಯಾಸಂಗ ಮಾಡಿದ್ದಾರೆ. ನಂತರ ಸಂಗೀತ ಕ್ಷೇತ್ರಕ್ಕೆ ಇವರು ಪದಾರ್ಪಣೆ ಮಾಡಿದರು. ‘ಹಮಿ ನೇಪಾಳ್‌’ ಎಂಬ ಸಂಘಟನೆ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಹಾಗೂ ರಾಜಕೀಯದಲ್ಲೂ ಸಕ್ರಿಯರಾಗಿದ್ದವರು.

ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಶಿಶಿರ್ ಖಾನಲ್‌ (47) ಅವರು ವಿಸ್ಕಾನ್ಸಿನ್‌ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಕಾನೂನು ಮತ್ತು ನ್ಯಾಯಾಂಗ ವ್ಯವಹಾರಗಳ ಖಾತೆಯ ಸಚಿವೆಯಾಗಿರುವ ಶೋಬಿತಾ ಗೌತಮ್ (31) ಇವರು ಬಿ.ಎ, ಎಲ್‌ಎಲ್‌ಬಿ, ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ಮೂಲಸೌಕರ್ಯ ಸಚಿವರಾಗಿರುವ ಸುನಿಲ್‌ ಲಾಮ್‌ಸಾಲ್‌ (34), ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಹಾಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.

ಇಂಧನ ಮತ್ತು ನೀರು ಖಾತೆಯ ಸಚಿವರಾಗಿರುವ ವಿರಾಜ್‌ ಭಕ್ತ ಶ್ರೇಷ್ಠ (44) ಅವರು ಬಿಬಿಎ ವ್ಯಾಸಂಗ ಮಾಡಿದ್ದಾರೆ.

ಶಿಕ್ಷಣ ಖಾತೆಯ ಸಚಿವೆಯಾಗಿರುವ ಸಸ್ಮಿತಾ ಪೋಖರೇಲ್‌ (33) ಅವರು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ಆರೋಗ್ಯ ಸಚಿವೆಯಾಗಿರುವ ನಿಶಾ ಮೆಹ್ತಾ (36) ಇವರು ಆರೋಗ್ಯ ನೀತಿ ವಿಷಯದಲ್ಲಿ ಎಂಎಸ್ಸಿ ಮತ್ತು ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

 

ಪ್ರವಾಸೋದ್ಯಮ ಖಾತೆ ಸಚಿವರಾಗಿರುವ ಗಣೇಶ್ ಪೌಡೆಲ್‌ (38) ಅವರು ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ಸಾಮಾನ್ಯ ಆಡಳಿತ ಖಾತೆ ಸಚಿವೆಯಾಗಿರುವ ಪ್ರತಿಭಾ ರಾವಲ್ (32) ಅವರು ನರ್ಸಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ಕಾರ್ಮಿಕ ಮತ್ತು ಸಾಮಾಜಿಕ ಭದ್ರತೆ ಖಾತೆಯ ಸಚಿವರಾಗಿರುವ ರಾಮ್‌ಜಿ ಯಾದವ್ (31) ಅವರು ಐಐಟಿ ಮದ್ರಾಸ್‌ನಿಂದ ಇಂಧನ ವ್ಯವಸ್ಥೆ ವಿಷಯ ಕುರಿತು ಎಂ.ಟೆಕ್. ಪದವಿ ಪಡೆದಿದ್ದಾರೆ.

ಈ ಖಾತೆಗೆ ಆರಂಭದಲ್ಲಿ ದೀಪಕ್ ಶಾ (40) ಅವರು ಸಚಿವರಾಗಿದ್ದರು. ಇವರು ಲಂಡನ್ ಸ್ಕೂಲ್ ಆಫ್ ಹೈಜಿನ್‌ ಸಂಸ್ಥೆಯಿಂದ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕೃಷಿ ಖಾತೆ ಸಚಿವರಾಗಿರುವ ಗೀತಾ ಚೌಧರಿ (35) ಇವರು ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ಮಹಿಳೆ ಮತ್ತು ಮಕ್ಕಳ ಖಾತೆ ಸಚಿವೆ ಸೀತಾ ಬದಿ (45) ಅವರು ಸಾಮಾಜಿಕ ಕಾರ್ಯ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ.

ಸಂವಹನ ಖಾತೆ ಸಚಿವ ವಿಕ್ರಂ ತಿಮಾಲ್ಸಿನಾ (30) ಅವರು ಕಾನೂನು ಪದವಿಯನ್ನು ಹೊಂದಿದ್ದಾರೆ.

https://www.newsics.com/2026/04/14/tamil-actress-trishas-house-receives-another-bomb-threat/

TAGGED:The world is amazed by the educational qualifications of the young ministers in Nepal's PM Balendra Shah government.
Share This Article
Facebook Twitter Copy Link Print
Previous Article ತಮಿಳು ನಟಿ ತ್ರಿಷಾ ಮನೆಗೆ ಮತ್ತೆ ಬಾಂಬ್ ಬೆದರಿಕೆ ಕರೆ
Next Article ದಿನಪತ್ರಿಕೆ ಎಡವಟ್ಟು, ತೀವ್ರಗೊಂಡ ಪ್ರತಿಭಟನೆ

Popular Posts

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

You Might Also Like

ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?