ಬೇಸಿಗೆ ಕಾಲದಲ್ಲಿ ಪಾದ ಬೆವರಿನ ಜೊತೆಗೆ ಶೂಗಳ ಕೆಟ್ಟ ವಾಸನೆ ಅನೇಕರು ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಕೆಲಸದ ಸ್ಥಳದಲ್ಲೂ ಮುಜುಗರ ಉಂಟುಮಾಡುವ ಪರಿಸ್ಥಿತಿಗೆ ಕಾರಣವಾಗುತ್ತದೆ.
ಪಾದಗಳಲ್ಲಿ ಹೆಚ್ಚು ಬೆವರು ಉತ್ಪತ್ತಿಯಾಗುವುದರಿಂದ ತೇವಾಂಶ ಇರುವ ಶೂಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುತ್ತವೆ.
ಇವೇ ದುರ್ವಾಸನೆಗೆ ಪ್ರಮುಖ ಕಾರಣಗಳಾಗಿವೆ.
ಈ ಸಮಸ್ಯೆಯನ್ನು ಶೂಗಳನ್ನು ತೊಳೆಯದೆ ಸಹ ಸರಳವಾಗಿ ನಿವಾರಿಸಬಹುದು. ಅಡಿಗೆ ಸೋಡಾ ವಾಸನೆಯನ್ನು ಹೀರಿಕೊಳ್ಳುವ ಗುಣ ಹೊಂದಿದ್ದು, ಅದನ್ನು ಸಾಕ್ಸ್ನಲ್ಲಿ ಕಟ್ಟಿ ರಾತ್ರಿ ಪೂರ್ತಿ ಶೂಗಳಲ್ಲಿ ಇಟ್ಟರೆ ದುರ್ವಾಸನೆ ಕಡಿಮೆಯಾಗುತ್ತದೆ.
ಇನ್ನು ವಿನೆಗರ್ ಮತ್ತು ನೀರನ್ನು ಬೆರೆಸಿ ಶೂಗಳ ಒಳಭಾಗಕ್ಕೆ ಸಿಂಪಡಿಸಿ, ನಂತರ ಬಿಸಿಲಿನಲ್ಲಿ ಒಣಗಿಸಿದರೆ ಬ್ಯಾಕ್ಟೀರಿಯಾ ನಾಶವಾಗಿ ಶೂಗಳು ತಾಜಾಗಿರುತ್ತವೆ. ರಬ್ಬಿಂಗ್ ಆಲ್ಕೋಹಾಲ್ ಬಳಸುವುದರಿಂದಲೂ ಶೂಗಳಲ್ಲಿ ಇರುವ ದುರ್ವಾಸನೆ ಹೋಗಲಾಡಿಸಬಹುದು.
ತಿಂಗಳಿಗೆ ಕನಿಷ್ಠ ಒಂದು ಬಾರಿ ಶೂಗಳನ್ನು ತೊಳೆಯುವುದು ಉತ್ತಮ. ಜೊತೆಗೆ ಸಾಕ್ಸ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಬಿಸಿಲಿನಲ್ಲಿ ಒಣಗಿಸುವುದರಿಂದ ದುರ್ವಾಸನೆ ತಡೆಯಬಹುದು.
ಸರಿಯಾದ ಆರೈಕೆ ಮೂಲಕ ಶೂಗಳ ದುರ್ವಾಸನೆಯನ್ನು ಸುಲಭವಾಗಿ ನಿಯಂತ್ರಿಸಬಹುದು.