https://youtube.com/shorts/7-1-Ue0Sh8o?si=UJX_wGWxwj6xGzu4
newsics.com
ದೇಶಾದ್ಯಂತ ಇಂಧನ ಬೆಲೆಗಳ ಏರಿಕೆ ಸಾಮಾನ್ಯ ಜನರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇರಾನ್ ಯುದ್ಧದ ಭೀತಿಯ ನಡುವೆ ಟೊರೆಂಟ್ ಗ್ಯಾಸ್ ಸಿಎನ್‌ಜಿ ಬೆಲೆಯನ್ನು ಏರಿಕೆ ಮಾಡಿದ್ದು, ಜೈಪುರ ಮತ್ತು ಪುಣೆ ಭಾಗದ ವಾಹನ ಸವಾರರು ತತ್ತರಿಸಿದ್ದಾರೆ.
ಟೊರೆಂಟ್ ಗ್ಯಾಸ್ ಸಂಸ್ಥೆಯು ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2.50 ರೂ. ವರೆಗೆ ಹೆಚ್ಚಿಸಿದೆ. ಈ ಬೆಲೆ ಏರಿಕೆಯು ಸಾರ್ವಜನಿಕರು ಮತ್ತು ವಿಶೇಷವಾಗಿ ಆಟೋ ಚಾಲಕರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.ಜೈಪುರದಲ್ಲಿ ಸಿಎನ್‌ಜಿ ಬೆಲೆಯು ಪ್ರತಿ ಕೆಜಿಗೆ 2.50 ರೂ. ಏರಿಕೆಯಾಗಿದ್ದರೆ, ಪುಣೆಯ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಕೆಜಿಗೆ 2 ರೂ. ಹೆಚ್ಚಳವಾಗಿದೆ.
ವಾಣಿಜ್ಯ ಸಿಲಿಂಡರ್ ಹಾಗೂ ವಿಮಾನ ಇಂಧನ ಬೆಲೆ ಏರಿಕೆಯ ಬೆನ್ನಲ್ಲೇ ಸಿಎನ್‌ಜಿ ದರ ಹೆಚ್ಚಳವಾಗಿರುವುದು ಆಟೋ ಚಾಲಕರು ಮತ್ತು ಸಾರಿಗೆ ಉದ್ಯಮದ ಮೇಲೆ ಭೀಕರ ಪರಿಣಾಮ ಬೀರಲಿದೆ.
ಗ್ರಾಮಾಂತರ ಭಾಗಗಳಲ್ಲಿ ಏಪ್ರಿಲ್ 3ರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬಂದಿದ್ದು, ಪ್ರತಿ ಕೆಜಿಗೆ 2 ರೂ. ಏರಿಕೆಯಾಗಿದೆ. ಇದರಿಂದಾಗಿ ಪುಣೆ ಗ್ರಾಮಾಂತರದಲ್ಲಿ ಸಿಎನ್‌ಜಿ ಬೆಲೆ ಈಗ ಪ್ರತಿ ಕೆಜಿಗೆ 94.50 ರೂ. ತಲುಪಿದೆ.