newsics.com
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರವು ‘ಸ್ವಚ್ಛ ಪಂಜಾಬ್’ ಯೋಜನೆಯಡಿ ಎಮ್ಮೆ ಸಾಕಿದವರಿಂದ ‘ಸೆಗಣಿ ಕರ’ ವಸೂಲಿ ಮಾಡಲು ಮುಂದಾಗಿದೆ.
ಸ್ವಚ್ಛ ಪಂಜಾಬ್’ ಯೋಜನೆಯ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಮತ್ತು ಜೈವಿಕ ಅನಿಲ ಉತ್ಪಾದನೆಗೆ ಹಣ ಒದಗಿಸುವ ಸಲುವಾಗಿ ಪ್ರತಿ ಎಮ್ಮೆಗೆ ದಿನಕ್ಕೆ 30 ರು. ವಸೂಲಿ ಮಾಡುವ ಚಿಂತಿಸಲಾಗಿದೆ. ಇದರ ಭಾಗವಾಗಿ ಈಗಾಲೇ 168 ಜಾನುವಾರು ಸಾಕಾಣಿಕೆ ಪ್ರದೇಶಗಳನ್ನು ಮರಿಯಂ ನವಾಜ್‌ರ ಸರ್ಕಾರ ಗುರುತಿಸಿದೆ ಎನ್ನಲಾಗಿದೆ.
ನಗರದ ಸ್ವಚ್ಛತೆ ಮತ್ತು ಜೈವಿಕ ಅನಿಲ ಬಳಕೆ ಉತ್ತೇಹಿಸುವ ಉದ್ದೇಶ ಇದೆ ಎಂದು ಸರ್ಕಾರ ಹೇಳುತ್ತಿದ್ದರೂ, ಈ ಪ್ರಸ್ತಾವಿತ ಕ್ರಮಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಅತ್ತ ಬೆಳೆ ನಷ್ಟ, ದುಬಾರಿ ಮೇವಿನಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೈತರಿಗೆ ಈ ಹೊಸ ತೆರಿಗೆಯಿಂದ ಭಾರೀ ಹೊರೆಯಾಗಲಿದೆ.
ಈ ಪ್ರಸ್ತಾವಿತ ಕ್ರಮಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಅತ್ತ ಬೆಳೆ ನಷ್ಟ, ದುಬಾರಿ ಮೇವಿನಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೈತರಿಗೆ ಈ ಹೊಸ ತೆರಿಗೆಯಿಂದ ಭಾರೀ ಹೊಡೆತ ಬೀಳಲಿದೆ.