newsics.com
ಪತ್ನಿಗೆ ಫೋನ್‌ನಲ್ಲೇ ತಲಾಖ್ ನೀಡಿ ಪಾಕಿಸ್ತಾನದ ಯುವತಿಯನ್ನು ಭಾರತದ ವ್ಯಕ್ತಿಯೊರ್ವ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗುವ ಮೊದಲು ತಾನು ಕೆಲಸ ಮಾಡುತ್ತಿದ್ದ ಕುವೈತ್‌ನಿಂದ ತನ್ನ ಮೊದಲ ಪತ್ನಿಗೆ ದೂರವಾಣಿ ಮೂಲಕ ಕರೆ ಮಾಡಿ ತ್ರಿವಳಿ ತಲಾಖ್ ನೀಡಿದ್ದಾನೆ. ಇದೀಗ ಆರೋಪಿಯಾದ ರೆಹಮಾನ್ (35)ನನ್ನು ರಾಜಸ್ಥಾನ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುವೈತ್‌ನಲ್ಲಿ ವಾಸವಿದ್ದ ರೆಹಮಾನ್ಗೆ ಸೋಶಿಯಲ್ ಮೀಡಿಯಾ ಮೂಲಕ ಪಾಕಿಸ್ತಾನದ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದ್ದು, ಇತ್ತೀಚೆಗಷ್ಟೇ ಆಕೆಯನ್ನು ಭೇಟಿಯಾಗಿ ವಿವಾಹವಾಗಿದ್ದಾನೆ. ಅಲ್ಲದೇ ಕುವೈತ್‌ನಿಂದಲೇ ಕರೆ ಮಾಡಿ ತನ್ನ ಮೊದಲ ಪತ್ನಿಗೆ ತಲಾಕ್ ಹೇಳಿದ್ದಾನೆ.
ಹನುಮಾನ್‌ಗಢದ ಭದ್ರಾದಲ್ಲಿರುವ ಮೊದಲ ಪತ್ನಿ ಫರೀದಾ ಬಾನೊ (29) ಕಳೆದ ತಿಂಗಳು ತನ್ನ ಪತಿ ರೆಹಮಾನ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹನುಮಾನ್‌ಗಢ ಉಪ ಎಸ್‌ಪಿ (ಎಸ್‌ಸಿ/ಎಸ್‌ಟಿ ಸೆಲ್) ರಣವೀರ್ ಸಿಂಗ್ ಹೇಳಿದ್ದಾರೆ. ಇದೀಗ ಮಹಿಳೆಯ ದೂರಿನ ಆಧಾರದ ಮೇಲೆ ರೆಹಮಾನ್‌ನನ್ನು ರಾಜಸ್ಥಾನದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬೋಲ್ಡ್ ಫೋಟೋಶೂಟ್, ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್ ‘ಗೌರಿ’..!