Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿ ತಲುಪಲು ಒಂದು ಹಡಗಿಗೆ ಎಷ್ಟು ಸಮಯ ಬೇಕು? ಎಷ್ಟು ಇಂಧನ ಬಳಸಲಾಗುತ್ತೆ?
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿ ತಲುಪಲು ಒಂದು ಹಡಗಿಗೆ ಎಷ್ಟು ಸಮಯ ಬೇಕು? ಎಷ್ಟು ಇಂಧನ ಬಳಸಲಾಗುತ್ತೆ?

Share
2 Min Read
SHARE

https://youtube.com/shorts/b7DblvgZf1A?si=BCR0sxsn8Xzh1cnn

newsics.com

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ  ತೀವ್ರಗೊಂಡಿದೆ. ಈ ಸಂಘರ್ಷದಿಂದ ಹಾರ್ಮುಜ್ ಜಲಸಂಧಿಯ ಮಾರ್ಗವು ಅನಿಶ್ಚಿತವಾಗಿದೆ.ಇದು ಭಾರತದ ಪಾಲಿಗೆ ಅತ್ಯಂತ ಮುಖ್ಯವಾದದ್ದು. ಹಾಗಾದರೆ, ಈ ಜಲಸಂಧಿಯಿಂದ ಭಾರತದ ಕರಾವಳಿ ತಲುಪಲು ಒಂದು ಹಡಗಿಗೆ ಎಷ್ಟು ಸಮಯ ಬೇಕು?

ಹಾರ್ಮುಜ್ ಜಲಸಂಧಿಯಿಂದ ಹೊರಟ ಹಡಗು ಭಾರತದ ಪಶ್ಚಿಮ ಕರಾವಳಿಯನ್ನು ತಲುಪಲು 2 ರಿಂದ 3 ದಿನಗಳ ಕಾಲ ಬೇಕಾಗುತ್ತೆ. ಇದು ಹಡಗಿನ ವೇಗ ಮತ್ತು ತಲುಪಬೇಕಾದ ಬಂದರಿನ ಮೇಲೆ ಅವಲಂಬಿತವಾಗಿರುತ್ತದೆ. ಬಹುತೇಕ ವಾಣಿಜ್ಯ ಹಡಗುಗಳು ಸಮುದ್ರದಲ್ಲಿ ಗಂಟೆಗೆ ಸರಾಸರಿ 24 ರಿಂದ 31 ಕಿಲೋಮೀಟರ್ ವೇಗದಲ್ಲಿ ಸಾಗುತ್ತವೆ. ಈ ವೇಗವು ಸಮುದ್ರದ ಹವಾಮಾನ ಮತ್ತು ಹಡಗಿನ ತೂಕಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.

ಗುಜರಾತ್‌ನ ಕಾಂಡ್ಲಾ ಅಥವಾ ಮುಂದ್ರಾ ಬಂದರುಗಳಿಗೆ ಬರುವ ಹಡಗುಗಳು ಅತ್ಯಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತವೆ. ಹಾರ್ಮುಜ್‌ನಿಂದ ಈ ಬಂದರುಗಳಿಗೆ ಬರಲು ಸುಮಾರು 36 ರಿಂದ 40 ಗಂಟೆಗಳು ಸಾಕು. ಅದೇ ಹಡಗುಗಳು ಮಹಾರಾಷ್ಟ್ರದ ಮುಂಬೈ ಬಂದರನ್ನು ತಲುಪಬೇಕೆಂದರೆ ಸ್ವಲ್ಪ ಹೆಚ್ಚು ಅಂದರೆ 50 ರಿಂದ 55 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಹಡಗಿನ ವೇಗದಲ್ಲಿ ಅಲ್ಪ ವ್ಯತ್ಯಾಸವಾದರೂ ಒಟ್ಟು ಪ್ರಯಾಣದ ಸಮಯದಲ್ಲಿ ಗಂಟೆಗಟ್ಟಲೆ ವ್ಯತ್ಯಾಸ ಉಂಟಾಗುತ್ತದೆ.

ಸಮುದ್ರಯಾನದಲ್ಲಿ ಬಳಸುವ ಈ ಇಂಧನವನ್ನು ‘ಬಂಕರ್ ಇಂಧನ’ ಎಂದು ಕರೆಯಲಾಗುತ್ತದೆ. ಹಾರ್ಮುಜ್ ಮಾರ್ಗದಲ್ಲಿ ಸಾಗುವ ಒಂದು ಹಡಗು ದಿನಕ್ಕೆ ಕನಿಷ್ಠ 5,000 ಡಾಲರ್‌ಗಳಿಗಿಂತಲೂ ಹೆಚ್ಚು ಇಂಧನ ವೆಚ್ಚವನ್ನು ಭರಿಸಬೇಕಾಗುತ್ತದೆ.

ಸಮುದ್ರದ ಮೇಲಿನ ಈ ಪ್ರಯಾಣದಲ್ಲಿ ಇಂಧನ ಬಳಕೆ ಎಂಬುದು ಹಡಗಿನ ಗಾತ್ರ ಮತ್ತು ಅದು ಹೊತ್ತಿರುವ ಸರಕಿನ ಮೇಲೆ ನಿಂತಿದೆ. ಬೃಹತ್ ಪ್ರಮಾಣದ ಸರಕು ಹೊತ್ತ ಕಂಟೈನರ್ ಹಡಗುಗಳು ದಿನಕ್ಕೆ ಸುಮಾರು 150 ರಿಂದ 250 ಟನ್ ಇಂಧನವನ್ನು ಕುಡಿಯುತ್ತವೆ. ಇದಕ್ಕೆ ಹೋಲಿಸಿದರೆ ಮಧ್ಯಮ ಗಾತ್ರದ ಹಡಗುಗಳು ಅಥವಾ ತೈಲ ಟ್ಯಾಂಕರ್‌ಗಳು ಸ್ವಲ್ಪ ಮಿತವ್ಯಯಿ ಎನ್ನಬಹುದು; ಇವು ದಿನಕ್ಕೆ 40 ರಿಂದ 70 ಟನ್ ಇಂಧನ ಬಳಸುತ್ತವೆ. ಉದಾಹರಣೆಗೆ, ಹಾರ್ಮುಜ್‌ನಿಂದ ಮುಂಬೈವರೆಗಿನ 3 ದಿನಗಳ ಪ್ರಯಾಣಕ್ಕೆ ಒಂದು ದೊಡ್ಡ ಟ್ಯಾಂಕರ್ ಸುಮಾರು 100 ರಿಂದ 200 ಟನ್ ‘ಬಂಕರ್ ಇಂಧನ’ವನ್ನು ಬಳಸುತ್ತದೆ.

 

TAGGED:How long does it take for a ship to reach the Indian coast from the Strait of Hormuz?
Share This Article
Facebook Twitter Copy Link Print
Previous Article ಅವಳಿ ಸಹೋದರರಿಂದ ಗರ್ಭಿಣಿ, ತಂದೆ ಯಾರೆಂದು ತಿಳಿಯಲಾಗದ ಮಹಿಳೆಗೆ ಕೈಕೊಟ್ಟ ಡಿಎನ್ಎ ಟೆಸ್ಟ್
Next Article ಯುದ್ಧದ ಎಫೆಕ್ಟ್ : ಚಿನ್ನ ಹೂಡಿಕೆದಾರರಿಗೆ ತಜ್ಞರು ಕೊಟ್ಟ ಮುನ್ಸೂಚನೆ ಏನು?

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?