Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಾಜ್ಯದಲ್ಲಿ 5975 ಬಾಲಗರ್ಭಿಣಿಯರು: ಬೆಂಗ್ಳೂರಲ್ಲೇ ಹೆಚ್ಚು.!
ಕರ್ನಾಟಕಪ್ರಮುಖ

ರಾಜ್ಯದಲ್ಲಿ 5975 ಬಾಲಗರ್ಭಿಣಿಯರು: ಬೆಂಗ್ಳೂರಲ್ಲೇ ಹೆಚ್ಚು.!

Share
3 Min Read
SHARE

newsics.com

ಬೆಂಗಳೂರು: ರಾಜ್ಯದಲ್ಲಿ ಬಾಲ ತಾಯಂದಿರದ್ದೇ ಬಹುದೊಡ್ಡ ಸವಲಾಗಿದೆ. ಆರೋಗ್ಯ ಮತ್ತು ಕುಟುಂಬ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 14 ರಿಂದ 18 ವರ್ಷದೊಳಗಿನ 5975 ಮಂದಿ ಹದಿಹರೆಯದ ಹೆಣ್ಣುಮಕ್ಕಳು  ಗರ್ಭಧಾರಣೆ ಆಗಿದೆ.

ಬಾಲಗರ್ಭಿಣಿಯರ ಸಂಖ್ಯೆಯಲ್ಲಿ ಬೆಂಗಳೂರು ನಗರವೇ ಮುಂದಿದೆ. ರಾಯಚೂರು, ವಿಜಯಪುರ, ತುಮಕೂರು, ಬಳ್ಳಾರಿಯಲ್ಲಿ ಅತ್ಯಧಿಕ ಪ್ರಕರಣ ವರದಿಯಾಗಿದೆ.

ಬಾಲಗರ್ಭಿಣಿ ಪ್ರಕರಣಗಳು ಕಂಡುಬಂದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುತ್ತಿದೆ. ಎಫ್‌ಐಆರ್‌ ದಾಖಲಿಸಿ ಮಕ್ಕಳ ರಕ್ಷಣಾ ನೀತಿ -2023 ಕುರಿತು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಲಾಗಿದೆ. ಮಕ್ಕಳ ರಕ್ಷಣಾ ಸಮಿತಿಗಳನ್ನು ಪ್ರತಿ ಶಾಲೆಗಳಲ್ಲಿಯೂ ರಚಿಸಲು ಕ್ರಮವಹಿಸಲಾಗಿದೆ. ಮಕ್ಕಳ ಪಾಲನಾ ಕೇಂದ್ರಗಳಲ್ಲಿ ದಾಖಲಾಗುವ ಬಾಲಗರ್ಭಿಣಿ/ ಬಾಲತಾಯಿ ಮತ್ತು ನವಜಾತ ಶಿಶುವಿಗೆ ಸಂಬಂಧಿಸಿದಂತೆ ಪಾಲಿಸಬೇಕಾದ ಕ್ರಮಬದ್ಧ ಕಾರ್ಯ ವಿಧಾನ (ಎಸ್‌ಒಪಿ) ಹೊರಡಿಸಲಾಗಿದೆ.

ಬಾಲ್ಯವಿವಾಹದ ಪ್ರಯತ್ನ, ನಿಶ್ಚಿತಾರ್ಥದ ಬಗ್ಗೆ ಕ್ರಮ ಕೈಗೊಳ್ಳಲು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ರಲ್ಲಿ ಯಾವುದೇ ಕಲಂಗಳಲ್ಲಿ ಅವಕಾಶ ಇಲ್ಲದೇ ದೂರನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಇದನ್ನು ಅಪರಾಧವನ್ನಾಗಿಸಲು ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ-2025) ಅನ್ನು ಜಾರಿಗೆ ತರಲು ಕ್ರಮವಹಿಸಲಾಗುತ್ತಿದೆ.

ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಸತಿ ನಿಲಯ ಹಾಗೂ ತರಬೇತಿ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳು ಬಾಲಗರ್ಭಿಣಿ ಪೊಕ್ಸ್ ಬಾಲ್ಯವಿವಾಹ ಹಾಗೂ ಮಕ್ಕಳ ಸಹಾಯವಾಣಿ-1098 ಮಕ್ಕಳಿಗೆ ಅರಿವು ಜಾಗೃತಿ ಮೂಡಿಸುವ ಕುರಿತು ವಿವಿಧ ಇಲಾಖೆಗಳು ನಿಗಾವಹಿಸಬೇಕಾದ ಆದ್ಯತೆಯ ಅಂಶಗಳ ಕುರಿತು 7 ಇಲಾಖೆಗಳಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ.

 

ಮಹಿಳೆಯರು ಅನೈತಿಕ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟಲು ಬಾಲ್ಯವಿವಾಹಗಳನ್ನು ತಡೆಯಲು ಹಾಗೂ ಸಮಗ್ರ ಮಕ್ಕಳ ರಕ್ಷಣೆಗಾಗಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ರಚಿಸಲಾಗಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ ರೀತಿಯಲ್ಲಿ ನಗರ ಮತ್ತು ಪಟ್ಟಣಗಳ ಸ್ಥಳೀಯ ಸಂಸ್ಥೆಗಳಲ್ಲಿ ಕೂಡ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯನ್ನು ರಚಿಸಲಾಗಿದೆ

 

ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರು ಬಾಲಗರ್ಭಿಣಿಯರು ಆಗುವುದನ್ನು ತಡೆಗಟ್ಟಲು ಎಲ್ಲಾ ಭಾಗೀದಾರ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡಲು ಯೋಜಿಸಲಾಗುತ್ತಿದೆ.

 

ಮಕ್ಕಳ ಸಹಾಯವಾಣಿ-1098 (24*7) ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟದಲ್ಲಿರುವ ಮಗುವಿನ ಬಗ್ಗೆ ಯಾವುದೇ ಸಮಯದಲ್ಲಿ ಕರೆ ಸ್ವೀಕೃತವಾದರೂ ತಕ್ಷಣ ಮಗುವನ್ನು ರಕ್ಷಿಸಲು ಸಂಬಂಧಿಸಿದ ಅಧಿಕಾರಿಗಳು ಪ್ರವೃತ್ತರಾಗಿರುತ್ತಾರೆ.

 

ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಬಾಲಗರ್ಭಿಣಿಯರಾಗುವುದನ್ನು ಪರಿಣಾಮಕಾರಿಯಾಗಿ ಇಲಾಖೆಗಳಿಗೆ ನಿಗದಿಪಡಿಸಲಾಗಿದೆ. ತಡೆಗಟ್ಟಲು ವಿವಿಧ ಜವಾಬ್ದಾರಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಯನ್ನು ರಚಿಸಲಾಗಿದೆ.

 

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ರಚಿಸಲಾಗಿದ್ದು, ಈ ಪ್ರಕರಣಗಳ ಕುರಿತು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ.

 

ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕರಿಗೆ ಲಕ್ಷಾಂತರ ಹೆಚ್ಚಿನ ಭಾಗೀದಾರರು, ಅರಿವು ಶಾಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಕ್ಕಳನ್ನೊಳಗೊಂಡಂತೆ ಪ್ರಯೋಜನ ಪಡೆದಿರುತ್ತಾರೆ.

 

ಸಾರ್ವಜನಿಕರು ಪಾಲನೆ/ ಪೋಷಣೆ ಅವಶ್ಯಕತೆ ಇರುವ ಮಕ್ಕಳ ಸುರಕ್ಷತೆ ಮತ್ತು ಪುನರ್ವಸತಿಗಾಗಿ ಪ್ರತಿಜಿಲ್ಲೆಯಲ್ಲೂ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಪಾಲನಾ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

 

ಸಂತ್ರಸ್ಥ ಮಗುವಿಗೆ ಕಾನೂನು ಸಲಹೆ ಮತ್ತು ಆಪ್ತ ಸಮಾಲೋಚನೆಗಾಗಿ ಪ್ರತಿಜಿಲ್ಲೆಯಲ್ಲೂ ಬೆಂಬಲ ವ್ಯಕ್ತಿಗಳನ್ನು ಆಯ್ಕೆಮಾಡಿ ತರಬೇತಿ ನೀಡಲಾಗಿದೆ. ಪ್ರಸ್ತುತ 173 ಬೆಂಬಲ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ವತಿಯಿಂದ ಕ್ರಮಬದ್ಧ ಕಾರ್ಯವಿಧಾನ (SOP) ರಚನೆಯಾಗಿದ್ದು, ಭಾಗೀದಾರ ಇಲಾಖೆಗಳಿಗೆ ಸದರಿ ಕಾರ್ಯವಿಧಾನದಂತೆ ಕಾರ್ಯನಿರ್ವಹಿಸಲು ಈಗಾಗಲೇ ತಿಳಿಸಲಾಗಿದೆ.

 

Pradhan Mantri Jan Arogya Yojana (PM-JAY) ಅಡಿಯಲ್ಲಿ ವರ್ಷಕ್ಕೆ ರೂ.5.00 ಲಕ್ಷಗಳ ಆರೋಗ್ಯ ವಿಮೆಯನ್ನು ಸಂತ್ರಸ್ಥೆಗೆ ಮತ್ತು ಅವಳ ನವಜಾತ ಶಿಶುವಿಗೆ ನೀಡಲಾಗುವುದು. ಬಾಲ್ಯವಿವಾಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕು ತಹಶೀಲ್ದಾರ್‌ರನ್ನು ಸಮನ್ವಯ ಹಾಗೂ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ಸರ್ಕಾರವು ನೇಮಿಸಿದೆ.

ಪ್ರತಿ ಜಿಲ್ಲೆಯಲ್ಲಿ ಬಾಲ್ಯವಿವಾಹ ನಿಷೇಧಕಾಯ್ದೆ ಮತ್ತು ಪೊಕ್ಸೋ ಕಾಯ್ದೆಗಳ ಬಗ್ಗೆ ಎಲ್ಲಾ ಶಾಲಾ/ಕಾಲೇಜುಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿವಿಧ ಸಾರ್ವಜನಿಕ ಸಭೆ ಸಭಾರಂಭಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮತ್ತು ಇತರೆ ಇಲಾಖಾ ಅಧಿಕಾರಿ/ಸಿಬ್ಬಂದಿಯ ಸಹಕಾರದೊಂದಿಗೆ ಜನ ಸಾಮಾನ್ಯರಿಗೆ ಜಾಗೃತಿ/ಅರಿವು ಮೂಡಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

https://www.newsics.com/2026/03/29/an-ice-cream-vendor-was-beheaded-the-head-was-taken-home-and-cooked/

 

TAGGED:5975 thousand child pregnant women in the state: Most in Bengaluru!
Share This Article
Facebook Twitter Copy Link Print
Previous Article ಐಸ್‌ಕ್ರೀಮ್ ಮಾರಾಟಗಾರನ ಶಿರಚ್ಛೇದ ಮಾಡಿ ತಲೆಯನ್ನು ಮನೆಗೆ ಕೊಂಡೊಯ್ದಿದ್ದೇಕೆ?
Next Article 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕಲ್ಲಿನಿಂದ ಜಜ್ಜಿ ಕೊಲೆ.!

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?