Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಐಪಿಎಲ್‌ ಆರಂಭಕ್ಕೂ ಮುನ್ನ ಬಿಸಿಸಿಐ ಕಠಿಣ ನಿರ್ಧಾರ! : ಬಾಡಿ ಕಂಟ್ರೋಲ್ ನಿಯಮ ಜಾರಿ
ಕರ್ನಾಟಕದೇಶಪ್ರಮುಖ

ಐಪಿಎಲ್‌ ಆರಂಭಕ್ಕೂ ಮುನ್ನ ಬಿಸಿಸಿಐ ಕಠಿಣ ನಿರ್ಧಾರ! : ಬಾಡಿ ಕಂಟ್ರೋಲ್ ನಿಯಮ ಜಾರಿ

Share
2 Min Read
SHARE

https://youtube.com/shorts/7-1-Ue0Sh8o?si=IPl4cpVzjeJG3YdO

newsics.com

ವಿಶ್ವದ ಅತಿ ದೊಡ್ಡ ಹಾಗೂ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ , ತನ್ನ ಅಭಿಮಾನಿಗಳಿಗಾಗಿ  ಮತ್ತಷ್ಟು ರೋಚಕ ನಿಯಮಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. 2026 ರ ಋತುವಿಗಾಗಿ ಆಟದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಹಾಗೂ ಆಕರ್ಷಕವಾಗಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಪಂದ್ಯದ ಮೂಲಕ ‘ಬಾಡಿ ಕಂಟ್ರೋಲ್’ ನಿಯಮವನ್ನು ಪರಿಚಯಿಸಲಾಗುತ್ತಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB ಮತ್ತು SRH ನಡುವಣ ಪಂದ್ಯದ ಮೂಲಕ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಈ ನಿಯಮವು ಫೀಲ್ಡರ್​ಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಕ್ಯಾಚ್ ಹಿಡಿಯುವಾಗ ಫೀಲ್ಡರ್ ಚೆಂಡಿನ ಮೇಲೆ ಮತ್ತು ತಮ್ಮ ದೇಹದ ಸಮತೋಲನದ ಮೇಲೆ ಎಷ್ಟು ನಿಯಂತ್ರಣ ಹೊಂದಿರಬೇಕು ಎಂಬುದರ ಕುರಿತು ಈಗಾಗಲೇ 10 ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಅದರಂತೆ ಈ ಬಾರಿಯ ಐಪಿಎಲ್​ನ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ.

ಐಪಿಎಲ್ ಕ್ಯಾಚ್ ನಿಯಮಗಳು:

ಸಂಪೂರ್ಣ ನಿಯಂತ್ರಣ: ಐಪಿಎಲ್ ನಿಯಮ 33.3ರ ಪ್ರಕಾರ, ಫೀಲ್ಡರ್ ಚೆಂಡನ್ನು ಹಿಡಿದ ನಂತರ ತನ್ನ ದೇಹದ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವವರೆಗೆ ಕ್ಯಾಚ್ ಪೂರ್ಣಗೊಳ್ಳುವುದಿಲ್ಲ.

ಸಂಭ್ರಮಾಚರಣೆ ಮತ್ತು ಸ್ಥಿರತೆ: ಫೀಲ್ಡರ್ ಕ್ಯಾಚ್ ಹಿಡಿದ ತಕ್ಷಣ ಸಂಭ್ರಮಿಸಲು ಶುರುಮಾಡಿ ಆ ಸಂದರ್ಭದಲ್ಲಿ ಚೆಂಡು ಕೈಜಾರಿದರೆ ಅಥವಾ ಅವರು ಸಮತೋಲನ ತಪ್ಪಿ ಬೌಂಡರಿ ಲೈನ್ ಮುಟ್ಟಿದರೆ ಅದನ್ನು ‘ನಾಟ್ ಔಟ್’ ಎಂದು ಪರಿಗಣಿಸಲಾಗುತ್ತದೆ.

ದೇಹದ ನಿಯಂತ್ರಣ: ಕ್ಯಾಚ್ ಹಿಡಿದ ಬಳಿಕ ದೇಹದ ಚಲನೆಯು ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಸಂಭ್ರಮಿಸಬೇಕು. ಕ್ಯಾಚ್ ಹಿಡಿದ ತಕ್ಷಣವೇ ಚೆಂಡನ್ನು ಎಸೆಯುವಂತಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ಸಂಭ್ರಮದ ವೇಳೆ ಚೆಂಡು ಕೈ ಜಾರಿದರೆ ಅದನ್ನು ಕ್ಯಾಚ್ ಎಂದು ಪರಿಗಣಿಸಲಾಗುವುದಿಲ್ಲ. ಇದನ್ನೇ ಕ್ರಿಕೆಟ್​ನಲ್ಲಿ ಫೀಲ್ಡರ್​ಗಳ ಬಾಡಿ ಕಂಟ್ರೋಲ್ ಎಂದು ಕರೆಯಲಾಗುತ್ತದೆ.

ಬೌಂಡರಿ ಲೈನ್ ನಿಯಮ: ಫೀಲ್ಡರ್ ಬೌಂಡರಿ ಲೈನ್ ಒಳಗಿನಿಂದಲೇ ಜಿಗಿದು ಚೆಂಡನ್ನು ಹಿಡಿಯಬೇಕು. ಗಾಳಿಯಲ್ಲಿರುವಾಗ ಚೆಂಡನ್ನು ಒಳಕ್ಕೆ ತಳ್ಳಿ ನಂತರ ಮೈದಾನದ ಒಳಗೆ ಬಂದು ಕ್ಯಾಚ್ ಪೂರ್ಣಗೊಳಿಸಬೇಕು.

ರಿಲೇ ಕ್ಯಾಚ್: ಒಬ್ಬ ಫೀಲ್ಡರ್ ಬೌಂಡರಿ ಹೊರಗಿನಿಂದ ಪದೇ ಪದೇ ಜಿಗಿಯುತ್ತಾ (Bunny Hop) ಚೆಂಡನ್ನು ಒಳಕ್ಕೆ ತಳ್ಳುವುದು ಈಗ ಅಮಾನ್ಯ ಎಂದು ಪರಿಗಣಿಸಲಾಗುತ್ತದೆ.

ಒಂದೇ ಅವಕಾಶ: ಫೀಲ್ಡರ್ ಬೌಂಡರಿ ಲೈನ್ ಒಳಗಿಂದ ಜಿಗಿದು ಒಮ್ಮೆ ಚೆಂಡನ್ನು ಒಳಗೆ ತಳ್ಳಲು ಪ್ರಯತ್ನಿಸಿ, ಬೌಂಡರಿ ದಾಟಿದ ಬಳಿಕ ಹೊರಗಿನಿಂದ ಜಿಗಿದು ಮತ್ತೆ ಹೊರ ತಳ್ಳಲು ಅವಕಾಶವಿಲ್ಲ. ಅಂದರೆ ಬೌಂಡರಿ ಲೈನ್​ ಒಳಗೆ ನಿಂತು ಗಾಳಿಯಲ್ಲಿ ಹಾರಿ ಚೆಂಡನ್ನು ಮತ್ತೊಮ್ಮೆ ಹೊರಹಾಕಿದರೆ ಅದನ್ನು ಸಿಕ್ಸ್ ಎಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

https://www.newsics.com/2026/03/28/car-hits-apsrtc-bus-parents-4-year-old-daughter-die-on-the-spot/

TAGGED:BCCI makes tough decision before IPL starts!
Share This Article
Facebook Twitter Copy Link Print
Previous Article APSRTC ಬಸ್‌ಗೆ ಕಾರು ಡಿಕ್ಕಿ : ಸ್ಥಳದಲ್ಲೇ ಅಪ್ಪ-ಅಮ್ಮ, 4 ವರ್ಷದ ಮಗಳು ಸಾವು
Next Article ಸ್ನೇಹದಲ್ಲಿ ಬಿರುಕು ಮೂಡಿತೇ? ರಾಜ್ ಬಿ ಶೆಟ್ಟಿ, ರುಕ್ಮಿಣಿ ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ!

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?