https://youtube.com/shorts/7-1-Ue0Sh8o?si=IPl4cpVzjeJG3YdO
newsics.com
ವಾಷಿಂಗ್ಟನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗ ಹಾರ್ಮುಜ್ ಜಲಸಂಧಿಯನ್ನು ‘ಟ್ರಂಪ್ ಜಲಸಂಧಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆದಿದ್ದಾರೆ.
ಇಸ್ರೇಲ್, ಅಮೆರಿಕ ಹಾಗೂ ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡಚಣೆಯಾಗಿದ್ದು, ಜಾಗತಿಕವಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿದೆ. ಹಾರ್ಮುಜ್ ಜಲಸಂಧಿ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಅಮೆರಿಕ ಪ್ರಯತ್ನ ನಡೆಸಿದೆ. ಇದಕ್ಕೆ ಇರಾನ್ ಅವಕಾಶ ನೀಡಿಲ್ಲ. ಹೀಗಿರುವಾಗ ಹಾರ್ಮುಜ್ ಜಲಸಂಧಿಯನ್ನು “ಟ್ರಂಪ್ ಜಲಸಂಧಿ” ಎಂದು ಟ್ರಂಪ್ ಕರೆದಿದ್ದಾರೆ ಮತ್ತು ಈ ಹೇಳಿಕೆಗಳನ್ನು ನೀಡುವಾಗ ಅವರು ಯಾವುದೇ ಆಕಸ್ಮಿಕ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಭವಿಷ್ಯದ ಹೂಡಿಕೆ ಉಪಕ್ರಮದ ಆದ್ಯತಾ ಶೃಂಗಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, “ಅವರು ಟ್ರಂಪ್ ಜಲಸಂಧಿಯನ್ನು ತೆರೆಯಬೇಕು. ಅಂದರೆ, ಹಾರ್ಮುಜ್ ಜಲಸಂಧಿ ತೆರೆಯಬೇಕು. ಕ್ಷಮಿಸಿ, ನನಗೆ ತುಂಬಾ ವಿಷಾದವಿದೆ. ನಾನು ಆಕಸ್ಮಿಕವಾಗಿ ಈ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ತಮ್ಮ ಭಾಷಣದಲ್ಲಿ ಟ್ರಂಪ್, ಇರಾನ್ ಒತ್ತಡದಲ್ಲಿದೆ ಮತ್ತು ಮಾತುಕತೆಗೆ ಸಿದ್ಧವಾಗಿದೆ. ನಡೆಯುತ್ತಿರುವ ಚರ್ಚೆಗಳ ಭಾಗವಾಗಿ ಹಲವಾರು ತೈಲ ಸಾಗಣೆಗಳನ್ನು ಟೆಹ್ರಾನ್ ಕಳುಹಿಸಿದೆ ಎಂದು ಹೇಳಿದರು.