https://youtube.com/shorts/8vXYZAagRTI?si=TOMvue_f8l6FavIl
newsics.com
ಮೈಸೂರು : ಜ್ಯೂನಿಯರ್ ವೈದ್ಯನ ಜೊತೆ ಪ್ರೇಮ ಪಾಶಕ್ಕೆ ಬಿದ್ದು 12 ವರ್ಷ ಜೀವಂತ ಶವವಾಗಿದ್ದಳು, ಇದೀಗ ಕೊನೆಯುಸಿರೆಳೆದಿದ್ದಾರೆ.
ಮೈಸೂರಿನ ಡಾ. ನಾಗಶ್ರೀಯ ಕರುಣಾಜನಕ ಕಥೆ ಓದಿದ್ರೆ ಕರುಳು ಹಿಂಡುವಂತಿದೆ. ಸೀನಿಯರ್ ಆಗಿದ್ದ ಡಾ ನಾಗಶ್ರೀ, ಜ್ಯೂನಿಯರ್ ವೈದ್ಯ ವಿನಯ್ ಕುಮಾರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಪ್ರೀತಿ-ಪ್ರೇಮ ಅಂತ ಇಬ್ಬರು ಹಲವು ತಿಂಗಳ ಕಾಲ ಮೈಸೂರಿನ ಮರಗಳನ್ನ ಸುತ್ತಿದ್ದಾರೆ. ಬಳಿಕ ಮದುವೆ ವಿಚಾರ ಬಂದಾಗ ಡಾಕ್ಟರ್ ವಿನಯ್ ಉಲ್ಟಾ ಹೊಡೆದನಂತೆ, ನನಗೂ-ನಿನಗೂ ವಯಸ್ಸಿನ ಅಂತರ ಇದ್ದು, ಮನೆಯಲ್ಲಿ ಒಪ್ಪಲ್ಲ ಎಂದು ನಾಟಕವಾಡಿದ್ದ ಎನ್ನುವ ಆರೋಪವಿದೆ.
ವರ್ಷಗಳ ಹಿಂದೆ ಶ್ರೀರಂಗಪಟ್ಟಣದ ಲಾಡ್ಜ್ಗೆ ಕರೆದೊಯ್ದುವನು ಇಬ್ಬರು ಆತ್ಮಹತ್ಯೆಗೆ ಶರಣಾಗೋಣ ಎಂದು ಸಾಯೋ ನಾಟಕವಾಡಿದ್ದ ಎನ್ನಲಾಗ್ತಿದೆ. ಡಾ. ನಾಗಶ್ರೀಗೆ ನಿದ್ರೆ ಮಾತ್ರೆ ಹಾಗೂ ಓವರ್ ಡೋಸ್ ಇಂಜೆಕ್ಷನ್ ನೀಡಿದ್ದ ಆರೋಪಿ ವಿನೋದ್, ತಾನೂ ಕೂಡ ಆತ್ಮಹತ್ಯೆ ಪ್ರಯತ್ನದ ನಾಟಕವಾಡಿದ್ದನಂತೆ. ಸಾವು-ಬದುಕಿನ ನಡುವೆ ಹೋರಾಡ್ತಿದ್ದ ನಾಗಶ್ರೀ ಕೋಮಾಗೆ ಜಾರಿದ್ರೆ, ಈತ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದ ಎನ್ನುವ ಆರೋಪವಿದೆ.
ಜ್ಯೂನಿಯರ್ ವೈದ್ಯನ ಕಪಿಮುಷ್ಠಿಗೆ ಸಿಲುಕಿ ಬದುಕು ಕಳೆದುಕೊಂಡ ಯುವ ವೈದ್ಯೆ ಕೋಮದಿಂದ ಹೊರಬಂದು 12 ವರ್ಷಗಳ ಕಾಲ ನೆನಪಿನ ಶಕ್ತಿಯೇ ಇಲ್ಲದೆ ಜೀವಂತ ಶವವಾಗಿ ಬದುಕಿದ್ದರು. ಆದ್ರೆ ನಿನ್ನೆ (ಮಾರ್ಚ್ 24ರಂದು) ವೈದ್ಯೆ ನಾಗಶ್ರೀ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಡಾಕ್ಟರ್ ವಿನಯ್ ಕುಮಾರ್ ಒಬ್ಬ ಹೆಣ್ಣು ಬಾಕ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಈತ ಒಬ್ಬರಲ್ಲ ಮೂವರು ಹೆಣ್ಣು ಮಕ್ಕಳ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ ಎನ್ನಲಾಗ್ತಿದೆ. ಮೊತ್ತೂರ್ವ ಚಾರ್ಟೆಡ್ ಅಕೌಂಟೆಡ್ ಗೌತಮಿ ಎಂಬುವವರು ಕೂಡ ಈತನಿಂದಲೇ ಪ್ರಾಣ ಕಳೆದುಕೊಂಡಿದ್ದರಂತೆ, ಈ ಪ್ರಕರಣ ಕೂಡ ಕೋರ್ಟ್ನಲ್ಲಿದ್ದು, ಸದ್ಯ ಬಿ. ರಿಪೋರ್ಟ್ ಸಲ್ಲಿಕೆ ಆಗಿದೆ.
https://www.newsics.com/2026/03/25/father-of-18-murdered-by-girlfriend/