Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪ್ರಧಾನಿ ಮೋದಿಯವರಿಗೆ ಯಾರು ಅಡುಗೆ ಮಾಡುತ್ತಾರೆ? ಕುಕ್ ಹೇಗೆ ಆಯ್ಕೆ ಮಾಡಲಾಗುತ್ತದೆ?
ದೇಶಪ್ರಮುಖ

ಪ್ರಧಾನಿ ಮೋದಿಯವರಿಗೆ ಯಾರು ಅಡುಗೆ ಮಾಡುತ್ತಾರೆ? ಕುಕ್ ಹೇಗೆ ಆಯ್ಕೆ ಮಾಡಲಾಗುತ್ತದೆ?

Share
2 Min Read
SHARE

https://youtube.com/shorts/8vXYZAagRTI?si=TOMvue_f8l6FavIl

newsics.com

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಯೋಗ, ಫಿಟ್​ನೆಸ್​, ಉತ್ತಮ ಆಹಾರ ಸೇವನೆಗೆ ಸದಾ ಆದ್ಯತೆ ನೀಡುತ್ತಾರೆ. ಅವರು ಯಾವ ರಾಜ್ಯ, ಯಾವ ದೇಶಕ್ಕೇ ಪ್ರಯಾಣಿಸಲಿ ತಮ್ಮ ಯೋಗ ದಿನಚರಿ, ತಾವು ಸೇವಿಸುವ ಆಹಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.ಅವರು ಏನು ತಿನ್ನುತ್ತಾರೆ? ಏನು ಕುಡಿಯುತ್ತಾರೆ? ಅವರ ಆಹಾರವನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಯಾರು ಅದನ್ನು ತಯಾರಿಸುತ್ತಾರೆ ಎಂದು ತಿಳಿಯಲು ಜನರಿಗೆ ತುಂಬಾನೆ ಆಸಕ್ತಿ ಇದೆ.

ಜನರು ಸಾಮಾನ್ಯವಾಗಿ ಪ್ರಧಾನಿ ಮೋದಿಯವರಿಗೆ ಯಾರು ಅಡುಗೆ ಮಾಡುತ್ತಾರೆ? ಅವರ ಕುಕ್ ಯಾರು ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಧಾನಿ ಮೋದಿಯವರ ಕುಕ್ ಆಗಲು ಯಾವುದಾದರು ಪರೀಕ್ಷೆ ಇದೆಯೇ? ಯಾವ ಪದವಿ ಅಗತ್ಯವಿದೆ? ಮತ್ತು ಅವರ ಸಂಬಳ ಎಷ್ಟು? ಹೀಗೆ ಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಬಂದೇ ಬರುತ್ತೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

 

ಪ್ರಧಾನ ಮಂತ್ರಿಯವರ ಅಡುಗೆಯವರ ಹುದ್ದೆಗೆ ಯಾವುದೇ ನೇಮಕಾತಿ ಇಲ್ಲ, ಸಾಮಾನ್ಯ ಸಂದರ್ಶನಗಳು ಅಥವಾ ಪರೀಕ್ಷೆಗಳೂ ಇಲ್ಲ. ಈ ಅಡುಗೆಯವರನ್ನು ಹೆಚ್ಚಾಗಿ ರಾಷ್ಟ್ರಪತಿ ಭವನ, ವಿವಿಐಪಿ ಅಡುಗೆ ಸೇವೆಗಳು ಅಥವಾ ಉನ್ನತ ಮಟ್ಟದ ಸರ್ಕಾರಿ ಅಡುಗೆಮನೆಗಳಿಂದ ಆಯ್ಕೆ ಮಾಡಲಾಗುತ್ತದೆ. ಇವರು ರಾಷ್ಟ್ರಪತಿ, ಪ್ರಧಾನಿ ಅಥವಾ ಇತರ ಉನ್ನತ ಹುದ್ದೆಯ ನಾಯಕರಿಗೆ ಈ ಹಿಂದೆ ಕೆಲಸ ಮಾಡಿದ ಅನುಭವಿ ಅಡುಗೆಯವರಾಗಿರುತ್ತಾರೆ.

ಆದರೂ, ಅವರನ್ನು ನೇಮಕ ಮಾಡುವ ಮೊದಲು ಅವರ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಅವರು ಹೆಚ್ಚಾಗಿ ವಿದೇಶ ಪ್ರವಾಸಗಳಲ್ಲಿ ಪ್ರಧಾನಿಯೊಂದಿಗೆ ಹೋಗುತ್ತಾರೆ, ಪ್ರಧಾನಿ ಮೋದಿ ಮನೆಯಲ್ಲಿ ಮಾಡಿದಂತಹ ಅಡುಗೆಯನ್ನೇ ಪಡೆಯುತ್ತಾರೆಯೇ ಅನ್ನೋದನ್ನು ಗಮನಿಸುತ್ತಾರೆ.

ಪ್ರಧಾನಿಯವರ ಅಡುಗೆಯವರಾಗಲು ನಿರ್ದಿಷ್ಟ ಪದವಿ ಬೇಕೇ? ಎಂದರೆ ಅದಕ್ಕೆ ಉತ್ತರ ಖಂಡಿತಾ ಇಲ್ಲ. ಪ್ರಧಾನಿಯವರ ಅಡುಗೆಯವರಾಗಲು ಯಾವುದೇ ನಿರ್ದಿಷ್ಟ ಪದವಿ ಅಗತ್ಯವಿಲ್ಲ, ಆದರೂ ನೀವು 10 ಅಥವಾ 12 ನೇ ತರಗತಿ ಪಾಸ್ ಆಗಿರಬೇಕು. ನಿಮಗೆ 5 ರಿಂದ 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವವಿರಬೇಕು. ಪಂಚತಾರಾ ಹೋಟೆಲ್‌ಗಳು, ವಿಮಾನಯಾನ ಸಂಸ್ಥೆಗಳು ಅಥವಾ ಸರ್ಕಾರಿ ಅತಿಥಿ ಗೃಹಗಳಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಹಾಗಿದ್ರೆ ಪ್ರಧಾನಿ ಮೋದಿಯವರ ಕುಕ್ ಸಂಬಳ ಎಷ್ಟು? ಸರ್ಕಾರಿ ಮಟ್ಟದಲ್ಲಿ, ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಥವಾ ಸಂಬಂಧಿತ ಇಲಾಖೆಗಳಲ್ಲಿ ಅಡುಗೆಯವರ ಸಂಬಳವು ಪೇ ಬ್ಯಾಂಡ್ ಹಂತ 1 ಅಥವಾ ಹಂತ 2 ಅನ್ನು ಆಧರಿಸಿದೆ ಎಂದು ವರದಿಗಳು ಸೂಚಿಸುತ್ತವೆ, ಅಂದರೆ ಅವರ ಮೂಲ ವೇತನವು ತಿಂಗಳಿಗೆ ಸರಿಸುಮಾರು ₹18,000 ರಿಂದ ₹56,900 ವರೆಗೆ ಇರುತ್ತದೆ, ಆದರೆ ಅವರ ಒಟ್ಟು ವೇತನವು ತಿಂಗಳಿಗೆ ₹25,000 ರಿಂದ ₹60,000 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬಹುದು.

https://www.newsics.com/2026/03/25/central-government-releases-new-guidelines-for-gas-cylinder-booking/

TAGGED:Who cooks for Prime Minister Modi?
Share This Article
Facebook Twitter Copy Link Print
Previous Article ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
Next Article ದಯಾಮರಣ: ರಾಣಾ ನರಕಯಾತನೆಯ ಅಂತಿಮ ಕ್ಷಣಕ್ಕೆ ಸಾಕ್ಷಿಯಾದ ತಾಯಿ

Popular Posts

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

You Might Also Like

ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read
ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read

Social Networks

Facebook-f Instagram Twitter
Welcome Back!

Sign in to your account

Lost your password?