Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ಶಾಲಾ ಶಿಕ್ಷಕರೇ ಮೊಟ್ಟೆ ಖರೀದಿಸಿ, ಬೇಯಿಸಿ, ಮಕ್ಕಳಿಗೆ ಕೊಡಬೇಕು
ಕರ್ನಾಟಕಪ್ರಮುಖ

ಇನ್ಮುಂದೆ ಶಾಲಾ ಶಿಕ್ಷಕರೇ ಮೊಟ್ಟೆ ಖರೀದಿಸಿ, ಬೇಯಿಸಿ, ಮಕ್ಕಳಿಗೆ ಕೊಡಬೇಕು

Share
2 Min Read
SHARE

newsics.com

ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ವಿತರಿಸಲು ಮೊಟ್ಟೆ ಬೇಯಿಸಲು ಆಗುತ್ತಿದ್ದ ಪರದಾಟ ತಪ್ಪಿಸಲು ಗ್ಯಾಸ್‌ ಸಿಲಿಂಡರ್‌, ಸ್ಟವ್‌, ಪಾತ್ರೆ ಖರೀದಿಗೆ ಸರ್ಕಾರ ಅಸ್ತು ಎಂದಿದ್ದು, ಇನ್ನುಮುಂದೆ ಆಯಾ ಶಾಲೆಗಳಲ್ಲಿಯೇ ಶಿಕ್ಷಕರ ಮುಂದಾಳತ್ವದಲ್ಲಿ ಮೊಟ್ಟೆ ಬೇಯಿಸಬೇಕಿದೆ.
ಸದ್ಯ ರಾಜ್ಯ ಸರ್ಕಾರ ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿದ್ದು, ಅನುದಾನ ಬಿಡುಗಡೆ ಮಾಡಿದೆ. ಇಲ್ಲಿನ ಯಶಸ್ಸನ್ನು ನೋಡಿ ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಗ್ಯಾಸ್‌ ರೀಫಿಲ್ಲಿಂಗ್‌ ಜವಾಬ್ದಾರಿ ಹೊರೆಸಿರುವುದು ಶಿಕ್ಷಕರಲ್ಲಿ ಚಿಂತೆ ಹುಟ್ಟುಹಾಕಿದ್ದು, ಇಸ್ಕಾನ್‌, ಅದಮ್ಯ ಚೇತನ ಮೂಲಕ ಬಿಸಿಯೂಟ ಸರಬರಾಜು ಆಗುತ್ತಿದ್ದ ಶಾಲೆಗಳಲ್ಲಿ ಬೇಯಿಸಿದ ಮೊಟ್ಟೆ ಪಡೆಯುತ್ತಿದ್ದ ಶಿಕ್ಷಕರಲ್ಲೂ ಈ ಹೊಸ ಹೊಣೆಗಾರಿಕೆ ದಿಗಿಲು ಹುಟ್ಟಿಸಿದೆ.
ಏನಿದು ಯೋಜನೆ?
ಪ್ರತಿ ಮಕ್ಕಳಿಗೂ ಪೌಷ್ಟಿಕ ಆಹಾರ ಸಿಗಬೇಕೆಂಬ ಉದ್ದೇಶದಿಂದ ಬೇಯಿಸಿದ ಮೊಟ್ಟೆ ಕೊಡುವ ಯೋಜನೆಯನ್ನು ಸರ್ಕಾರ 2022ರಲ್ಲಿ ಜಾರಿಗೊಳಿಸಿತು. ಪ್ರತಿ ಮೊಟ್ಟೆಗೆ ₹6 ಕೊಡಲಾಗುತ್ತಿತ್ತು. ಮೊಟ್ಟೆ ಖರೀದಿಸಿ, ಬೇಯಿಸಿ, ಸುಲಿದು ಮಕ್ಕಳಿಗೆ ಕೊಡಬೇಕು. ಯಾವ ಶಾಲೆಗಳಲ್ಲಿ ಬಿಸಿಯೂಟ ತಯಾರಾಗುತ್ತದೆಯೋ ಅಲ್ಲಿ ಸಮಸ್ಯೆಯಾಗಿರಲಿಲ್ಲ. ಆದರೆ, ಇಸ್ಕಾನ್‌, ಅದಮ್ಯ ಚೇತನಗಳಂತಹ ಸಂಸ್ಥೆಗಳು ಬಿಸಿಯೂಟ ಕೊಡುವ ಶಾಲೆಗಳಲ್ಲಿ ಮೊಟ್ಟೆ ಬೇಯಿಸಿ ಕೊಡುವುದು ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ, ಶಾಲೆಗಳಿಗೆ ಮೊಟ್ಟೆ ಬೇಯಿಸುವ ಪರಿಕರ ಕೊಡಬೇಕೆಂಬ ಬೇಡಿಕೆ ಇತ್ತು. ಅದಕ್ಕೆ ಸ್ಪಂದಿಸಿದ್ದ ರಾಜ್ಯ ಸರ್ಕಾರ 2025-26ರ ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದು, ಗ್ಯಾಸ್‌ ಸಿಲಿಂಡರ್‌, ಒಲೆ, ಪಾತ್ರೆ ಖರೀದಿಗೆ ಹಣ ನೀಡಿದೆ.
ರೀಫಿಲ್ಲಿಂಗ್‌ ಶಿಕ್ಷಕರ ಹೆಗಲಿಗೆ
ಪ್ರತಿ ಮೊಟ್ಟೆಗೆ ₹6 ಕೊಡಲಾಗುತ್ತದೆ. ಇದರಲ್ಲಿ ಮೊಟ್ಟೆಗೆ ₹5, ಇಂಧನಕ್ಕೆ 50 ಪೈಸೆ, ಬೇಯಿಸಿದ ಮೊಟ್ಟೆ ಸುಲಿಯಲು 30 ಪೈಸೆ, ಸಾಗಾಣಿಕೆಗೆ 20 ಪೈಸೆ ನಿಗದಿಪಡಿಸಿದೆ. ಸದ್ಯಕ್ಕೇನು ಗ್ಯಾಸ್‌ ಸ್ಟವ್‌, ಸಿಲಿಂಡರ್‌ ಖರೀದಿಗೆಲ್ಲ ದುಡ್ಡನ್ನು ನೀಡುತ್ತಿದೆ. ಖಾಲಿಯಾದ ಸಿಲಿಂಡರ್‌ ರೀಫಿಲ್ಲಿಂಗ್‌ಗೆ ಇಂಧನದ 50 ಪೈಸೆಯಲ್ಲೇ ಸರಿದೂಗಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಮೊಟ್ಟೆ ದರ ಏರಿಳಿಕೆಯಾಗುತ್ತಿರುತ್ತದೆ. ಆಗ ಗ್ಯಾಸ್‌ ರೀಫಿಲ್ಲಿಂಗ್‌ಗೆ ಹಣ ಉಳಿಯುವುದೇ ಇಲ್ಲ. ರೀಫಿಲ್ಲಿಂಗ್‌ ಕೈಯಿಂದ ನೀಡಬೇಕೇ? ಎಂಬ ಪ್ರಶ್ನೆ ಶಿಕ್ಷಕರದ್ದು.
ಧಾರವಾಡ ಜಿಲ್ಲೆಯಲ್ಲಿ 1128 ಶಾಲೆಗಳಿದ್ದು, ಇವುಗಳಲ್ಲಿ 140 ಶಾಲೆಗಳಲ್ಲಿ ಈಗಾಗಲೇ ಪರಿಕರಗಳಿವೆ. ಉಳಿದೆಡೆ ಗ್ಯಾಸ್‌ ಸಿಲಿಂಡರ್‌, ಸ್ಟವ್‌, ಪಾತ್ರೆ ಖರೀದಿಸಲು ₹2.51 ಕೋಟಿ ಬಿಡುಗಡೆ ಮಾಡಲಾಗಿದೆ.

ಮಾಜಿ ಶಾಸಕನ ಪುತ್ರ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ!

TAGGED:and give them to the children.cook themFrom now onschool teachers will have to buy eggs
Share This Article
Facebook Twitter Copy Link Print
Previous Article ಮಾಜಿ ಶಾಸಕನ ಪುತ್ರ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ!
Next Article ಬಿಗಿಯಾದ ಜೀನ್ಸ್ ಹಾಕಿದ್ರೆ ಮಕ್ಕಳಾಗಲ್ವಾ? ಸಂಶೋಧನೆ ಏನು ಹೇಳುತ್ತೆ?

Popular Posts

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

You Might Also Like

ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read
ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?