newsics.com
ಮುಂಬೈ: ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಫ್ಲರ್ಟ್ ಮಾಡಿ ಟ್ರೋಲ್ಗೆ ಒಳಗಾದ ಮಾಡೆಲ್ ಅಲಿಸಿಯಾ ಕೌರ್, ಸಿದ್ಧಾರ್ಥ್ ಪತ್ನಿ ಕಿಯಾರಾ ಅಡ್ವಾನಿಗೆ ಕ್ಷಮೆ ಕೋರಿದ್ದಾರೆ.
ರೂಪದರ್ಶಿಯಾಗಿರುವ ಅಲಿಸಿಯಾ ಕೌರ್ ಅವರು ಸಿದ್ಧಾರ್ಥ್ ಅವರನ್ನು ದಿಟ್ಟಿಸಿ ಕಣ್ಣಲ್ಲಿ ಕಣ್ಣು ಇಟ್ಟು ನೋಡಿದರು, ಮೈಗೆ ಅಂಟಿಕೊಂಡೇ ಡಾನ್ಸ್ ಮಾಡಿದ್ರು, ನಟನ ಮೈಕೈಯೆಲ್ಲಾ ಮುಟ್ಟಿದರು. ಇದನ್ನು ಮೈಮೇಲಿನ ಕಂಟ್ರೋಲ್ ಕಳೆದುಕೊಂಡಂತೆ ಸಿದ್ಧಾರ್ಥ್ ಆಸ್ವಾದಿಸಿದರು ಕೂಡ! ಆದರೆ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಸೃಷ್ಟಿಯಾಗಿತ್ತು.
https://www.instagram.com/p/C-fGAHfNFlb/?igsh=bnYwOWFpZTkwcXd3
ಮಾಡೆಲ್ ಮತ್ತು ಸಿದ್ಧಾರ್ಥ್ ಅವರ ಕೆಮೆಸ್ಟ್ರಿಯನ್ನು ಮೆಚ್ಚಿಕೊಂಡಿದ್ದರೂ, ಹಲವರು ಕಿಯಾರಾ ಎಲ್ಲಿದ್ಯಮ್ಮಾ ಎಂದು ಪ್ರಶ್ನಿಸುತ್ತಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಕಂಡ ಮಾಡೆಲ್ ಅಲಿಸಿಯಾ ಕೌರ್, ಕಿಯಾರಾ ಕ್ಷಮೆ ಕೋರಿದ್ದಾರೆ. I Am sorry Kiara ಎಂದು ಹೇಳಿದ್ದಾರೆ.