https://youtube.com/shorts/NQT6o3FTgxQ?si=QO7iNw2quSngYXpc
newsics.com
ಬೆಂಗಳೂರು : ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವಲವ್ ಮಾಕ್ಟೆಲ್’ನ ಮೂರನೇ ಭಾಗದ ಟ್ರೈಲರ್ ಅನ್ನು ಅವರ ಮುದ್ದಿನ ಪುತ್ರಿ ಪರಿ ಬಿಡುಗಡೆ ಮಾಡಿರುವುದು ಈ ಬಾರಿಯ ವಿಶೇಷ.
ಟ್ರೈಲರ್ ಆರಂಭದಲ್ಲಿ ‘ಲವ್ ಮಾಕ್ಟೆಲ್’ ಭಾಗ 1 ಮತ್ತು 2ರ ಪ್ರಮುಖ ದೃಶ್ಯಗಳನ್ನು ತೋರಿಸುವ ಮೂಲಕ ಪ್ರೇಕ್ಷಕರನ್ನು ಹಳೆಯ ನೆನಪುಗಳಿಗೆ ಕರೆದೊಯ್ಯಲಾಗಿದೆ. ಇದು ಆದಿಯ ಜೀವನದ ಕತೆಯ ಅಂತಿಮ ಅಧ್ಯಾಯ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಎರಡನೇ ಭಾಗದಲ್ಲಿ ಆದಿ ಒಂದು ಪುಟ್ಟ ಮಗುವನ್ನು ದತ್ತು ಪಡೆಯುವ ಮೂಲಕ ಸಿನಿಮಾ ಅಂತ್ಯವಾಗಿತ್ತು. ಈಗ ಈ ಮೂರನೇ ಭಾಗದಲ್ಲಿ ಆದಿ ಮತ್ತು ಆ ಪುಟ್ಟ ಮಗಳ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಮಗಳಿಗಾಗಿ ಆದಿ ಪಡುವ ಜವಾಬ್ದಾರಿಯ ಮೇಲೆ ಕತೆ ಕೇಂದ್ರೀಕೃತವಾಗಿರುವುದು ಟ್ರೈಲರ್‌ನಲ್ಲಿ ಎದ್ದು ಕಾಣುತ್ತಿದೆ.
https://youtu.be/Xie9bskmX34?si=kxcHfxYP8Bl6GrEo
https://www.newsics.com/2026/03/09/real-estate-agent-kidnapped-search-operation-by-7-special-teams/