Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮದುವೆ ಬೇಡವೇ ಬೇಡ ಎನ್ನುತ್ತ ತಲೆ ಬೋಳಿಸಿಕೊಂಡ ಯುವತಿ! ವಿಡಿಯೋ ನೋಡಿ
ದೇಶಪ್ರಮುಖವೈರಲ್

ಮದುವೆ ಬೇಡವೇ ಬೇಡ ಎನ್ನುತ್ತ ತಲೆ ಬೋಳಿಸಿಕೊಂಡ ಯುವತಿ! ವಿಡಿಯೋ ನೋಡಿ

Share
2 Min Read
SHARE

newsics.com

ಮದುವೆಯಾಗುವಂತೆ ಕುಟುಂಬ ಮತ್ತು ಸಮಾಜದಿಂದ ಬರುತ್ತಿದ್ದ ನಿರಂತರ ಒತ್ತಡದಿಂದ ಪಾರಾಗಲು ಯುವತಿಯೊಬ್ಬಳು ತನ್ನ ತಲೆ ಕೂದಲನ್ನೇ ಬೋಳಿಸಿಕೊಂಡಿದ್ದಾಳೆ. ತನ್ನ ಬೋಳು ತಲೆಯ ವೀಡಿಯೋವನ್ನು ಹಂಚಿಕೊಂಡ ಆಕೆ ತನಗೆ ಮದುವೆಯ ಒತ್ತಡ ಹೇರುತ್ತಿರುವ ಕುಟುಂಬ ಹಾಗೂ ಸಮಾಜದ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ.

ಈ ವಿಡಿಯೋ ವೈರಲ್ ಆಗಿದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹೆಣ್ಣುಮಕ್ಕಳ ಮೇಲೆ ಇರಿಸಲಾಗಿರುವ ಸಾಮಾಜಿಕ ನಿರೀಕ್ಷೆಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

@kajals_move_ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ ಅನ್ನು ಈಗಾಗಲೇ ಸುಮಾರು 3.7 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅನೇಕ ನೆಟ್ಟಿಗರು ಅವರ ಜೀವನದ ಮೇಲೆ ಹಿಡಿತ ಸಾಧಿಸುವ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಈ ವಿಡಿಯೋದಲ್ಲಿ ನನಗೆ ನನ್ನ ಕೂದಲೆಂದರೆ ತುಂಬಾ ಪ್ರೀತಿ ಇತ್ತು. ಆದರೆ ನನಗೆ ಬೇರೆ ದಾರಿ ಇರಲಿಲ್ಲ. ಕೂದಲನ್ನು ಕತ್ತರಿಸುವುದು ನಿಜವಾಗಿಯೂ ನಾನು ಬಯಸಿದ ವಿಚಾರವಾಗಿರಲಿಲ್ಲ, ಇತರ ಅನೇಕ ಮಹಿಳೆಯರಂತೆ ತಾನು ತನ್ನ ಕೂದಲನ್ನು ತುಂಬಾ ಪ್ರೀತಿಸುತ್ತಿದ್ದೆ, ಆದರೆ ಮದುವೆಯಾಗಲು ತನ್ನ ಕುಟುಂಬದಿಂದ ನಿರಂತರ ಒತ್ತಡ ಬರುತ್ತಿದ್ದರಿಂದ ಈ ಹೆಜ್ಜೆ ಇಡಬೇಕಾಯಿತು ನಾನೇನು ಮಾಡಲಿ ಎಂದು ಅವಳು ಹೇಳಿದ್ದಾಳೆ.

ಹುಡುಗರು ಮಾಡಿದರೆ ಸರಿ ಹುಡುಗಿಯರು ಮಾಡಿದರೆ ತಪ್ಪು, ಜನ ನನ್ನನ್ನು ಗುರಾಯಿಸಿ ಗುರಾಯಿಸಿ ನೋಡುತ್ತಾರೆ. ಯಾಕೆ ಹಾಗೆ ನೋಡುತ್ತಾರೆ ನಾನು ಅಂತದ್ದೇನು ಮಾಡಿದೆ. ನನಗೂ ನನ್ನ ಕೂದಲಿನ ಮೇಲೆ ತುಂಬಾ ಪ್ರೀತಿ ಇತ್ತು. ಆದರೆ ಈ ಸಮಾಜದ ಕಾರಣದಿಂದ ನಾನು ಹೀಗೆ ಮಾಡಿದೆ. ನನ್ನನ್ನು ಬದುಕುವುದಕ್ಕೆ ಬಿಡುತ್ತಿರೋ ಇಲ್ಲವೋ, ನಾನು ಬದುಕಬೇಕೋ ಅಥವಾ ಬೇಡವೋ? ನನಗೆ ನನ್ನಿಷ್ಟದ ತಲೆಕೂದಲನ್ನು ಕತ್ತರಿಸುವಂತಹ ಸ್ಥಿತಿ ಬರುವಂತಹ ಇಷ್ಟೊಂದು ಒತ್ತಡ ಏಕೆ? ನನಗೆ ಇಲ್ಲಿ ಯಾರ ಸಿಂಪತಿಯೂ ಬೇಡ. ಆದರೆ ನಾನು ಇಷ್ಟು ಹೇಳಲು ಬಯಸುತ್ತೇನೆ. ಯಾರು ಹುಡುಗಿಯರು ಇಷ್ಟೊಂದು ಒತ್ತಡವನ್ನು ಅನುಭವಿಸುತ್ತಿದ್ದೀರೋ ಏನಾದರೊಂದು ಬದುಕಿನಲ್ಲಿ ಮಾಡಿ, ಒಂದು ವೇಳೆ ನಿಮ್ಮ ಜೀವನ ನಿಮ್ಮ ಕೈ ಜಾರಿ ಹೋಯ್ತು ಎಂದರೆ ಯಾರೊಬ್ಬರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ, ನಿಮಗೆ ಏನು ಮಾಡಬೇಕು ಅನಿಸುತ್ತದೋ ಅದನ್ನು ಮಾಡಿ ಮುಂದೆ ಬನ್ನಿ ಎಂದು ಅವರು ಆಕ್ರೋಶದಿಂದ ಮಾತನಾಡಿದ್ದಾರೆ.

https://www.instagram.com/reel/DVlzXbzk9gx/?igsh=MW43N3N5dmxoeWk5dw==

TAGGED:A young woman shaved her head saying she doesn't want to get married!
Share This Article
Facebook Twitter Copy Link Print
Previous Article ಹಳೆ ಬಟ್ಟೆ ಬಿಸಾಕಬೇಡಿ; ಇದರಿಂದಲೂ ಹಣ ಗಳಿಸಬಹುದು ಹೇಗೆ ಗೊತ್ತಾ?
Next Article ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆ

Popular Posts

Jaspal Rana ಪ್ರಸಿದ್ದ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಇನ್ನಿಲ್ಲ

1 Min Read

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

3 Min Read

ಊಟ, ವಸತಿ ವ್ಯವಸ್ಥೆ ಸರಿಯಿಲ್ಲವೆಂದು ಪಿಜಿ ಮಾಲೀಕರ ವಿರುದ್ಧ ರಾತ್ರೋರಾತ್ರಿ ರಸ್ತೆಗಿಳಿದ ಯುವತಿಯರು

2 Min Read

ಪೆಟ್ರೋಲ್ ಬಂಕ್‌ಗಳಲ್ಲಿ ಕೈಗಾರಿಕೆಗಳ ಬಲ್ಕ್ ಖರೀದಿಗೆ ಹೊಸ ನಿಯಮ ಜಾರಿ

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಕರ್ನಾಟಕಪ್ರಮುಖ

Gruhalakshmi Scheme ಇನ್ಮುಂದೆ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ! ಯಾರ‌್ಯಾರಿಗೆ ಹಣ ಸಿಗೋದಿಲ್ಲ?

1 Min Read
ಕರ್ನಾಟಕಪ್ರಮುಖ

ಜಮೀರ್‌ ಅಹ್ಮದ್ ವಿರುದ್ಧ ಸಿಟ್ಟಾದ ಸಿದ್ದರಾಮಯ್ಯ : ಜಮೀರ್‌ ಬೆಂಬಲಿಗರಿಗೆ ಹೇಳಿದ್ದೇನು?:

1 Min Read
ಕರ್ನಾಟಕಪ್ರಮುಖ

Rain Alert ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

1 Min Read

Social Networks

Facebook-f Instagram Twitter
Welcome Back!

Sign in to your account

Lost your password?